ಅರ್ನಾಬ್ ಗೋಸ್ವಾಮಿ ಮೇಲಿನ ದೌರ್ಜನ್ಯ : ಪತ್ರಕರ್ತರಿಂದ ಖಂಡನೆ !

ಚಿಕ್ಕನಾಯಕನಹಳ್ಳಿ : 

      ರಿಪಬ್ಲಿಕ್ ಟಿವಿ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಮೇಲೆ ಮಹಾರಾಷ್ಟ್ರ ಸರ್ಕಾರದಿಂದ ನಡೆದಿರುವ ದೌರ್ಜನ್ಯವನ್ನು ತಾಲ್ಲೂಕು ಪತ್ರಕರ್ತರ ಸಂಘ ಖಂಡಿಸಿದೆ.

     ಪ್ರಜಾ ಪ್ರಭುವತ್ವದ 4ನೇ ಅಂಗವಾದ ಮಾಧ್ಯಮದ ಮೇಲೆ ದ್ವೇಶದ ಹಿನ್ನಲೆಯಿಂದ ಮಹಾರಾಷ್ಟ್ರ ಸರ್ಕಾರ ಅರ್ನಾಬ್ ಗೋಸ್ವಾಮಿಯನ್ನು ದೌರ್ಜನ್ಯದಿಂದ ಬಂಧಿಸಿ ಕರೆದೊಯ್ದಿರುವ ಘಟನೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರು ಖಂಡಿಸಿ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.

      ಎರಡುವರ್ಷದ ಹಿಂದೆ ದಾಖಲಾಗಿ ಮುಕ್ತಾಯವಾಗಿರುವ ಪ್ರಕರಣವನ್ನು ನೆಪವಾಗಿರಿಸಿಕೊಂಡು ರಾಷ್ಟ್ರಿಯ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ಅವರನ್ನು ಬಂಧಿಸಿರುವ ರೀತಿ ಗೂಂಡಾ ಮಾದರಿಯೆನಿಸಿದ್ದು, ಬೆಳಗಿನ ಜಾವ ಎಕೆ-47 ಬಂದೂಕುಗಳೊಂದಿಗೆ ಮನೆಗೆ ನುಗ್ಗಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ದೈಹಿಕವಾಗಿ ಹಲ್ಲೆಮಾಡಿ ಬಂಧಿಸಿರುವ ಮಹಾರಾಷ್ಟ್ರ ಪೊಲಿಸರುತಮ್ಮ ಪೌರುಷವನ್ನು ಉಗ್ರಗಾಮಿಗಳು, ರೌಡಿಗಳನ್ನು ಹಿಡಿಯುವಲ್ಲಿ ತೋರಿಸಲಿ.

    ಮಹಾರಾಷ್ಟ್ರ ಸರ್ಕಾರದ ಈ ಕೃತ್ಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಕಾನೂನಿಗೆ ಅಗೌರವ ತೋರುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದೆ.

      ಸುಶಾಂತ್‍ಸಿಂಗ್ ರಜಪೂತ್ ಸಾವಿನ ಪ್ರಕರಣದ ಹಿಂದೆ ಬಿದ್ದಿರುವ ಅರ್ನಾಬ್ ಗೋಸ್ವಾಮಿಯ ಬಾಯಿ ಮುಚ್ಚಿಸುವ ಕೆಲಸಕ್ಕೆ ಉದ್ಭವ್ ಠಾಕ್ರೆ ಸಂವಿಧಾನಕ್ಕೆ ಅಪಚಾರವೆಸಗುವ ಮೂಲಕ ಸರ್ವಾಧಿಕಾರಿ ಸಿದ್ದಾಂತದ ಸಂಸ್ಕøತಿಯನ್ನು ಹುಟ್ಟುಹಾಕಿದ್ದಾರೆ.

      ಸಾಮಾಜಿಕ ಕಳಕಳಿಯೊಂದಿಗೆ ಕರ್ತವ್ಯ ಸಲ್ಲಿಸುತ್ತಿರುವ ಮಾಧ್ಯಮದ ಮೇಲೆ ನಡೆದಿರುವ ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಮಧ್ಯಪ್ರವೇಶ ಮಾಡಬೇಕೆಂದು ಪತ್ರಕರ್ತರ ಸಂಘ ತನ್ನ ಮನವಿಯಲ್ಲಿ ತಿಳಿಸಿದೆ.

     ಈ ಸಂದರ್ಭದಲ್ಲಿ ಪತ್ರಕರ್ತರಾದ ಅಣೇಕಟ್ಟೆ ಸಿದ್ದರಾಮಯ್ಯ, ಸಿ.ಎಚ್. ಚಿದಾನಂದ, ಕೆ.ಜಿ. ರಾಜೀವ್, ಧನಂಜಯ, ಚಂದ್ರಶೇಖರ್, ಭರತ್, ಕಾಶಿಪ್ರಜ್ವಲ್‍ಇದ್ದರು.

(Visited 6 times, 1 visits today)

Related posts

Leave a Comment