ಕಾರ್ ಗಳ ನಡುವೆ ಭೀಕರ ಅಪಘಾತ: 13 ಮಂದಿ ಸಾವು

ತುಮಕೂರು: 

      ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೈಲಾಡಕರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದು ವರ್ಷದ ಬಾಲಕ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.

     ವೇಗದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಟವೇರಾ ಹಾಗೂ ಬ್ರೀಜಾ ಕಾರುಗಳ ಮಧ್ಯೆ ಈ ಅಪಘಾತ ಸಂಭವಿಸಿದೆ.

       ಮಂಜುನಾಥ್ (35), ತನುಜಾ (25), ಒಂಬತ್ತು ತಿಂಗಳ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ (27), ಸರಳಾ (32), ಪ್ರಶನ್ಯಾ (14), ಮಾಲಾಶ್ರೀ (4), ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28)  ಮೃತಪಟ್ಟವರು.

      ನಾಲ್ಕು ಪ್ರಯಾಣಿಕರು ಬ್ರೀಜಾ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದು, ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಹೊಸೂರು ಮೂಲಕ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟವೆರಾ ಕಾರಿಗೆ ಡಿಕ್ಕಿ ಹೊಡೆದಿದೆ. ಟವೆರಾದಲ್ಲಿದ್ದ ಪ್ರಯಾಣಿಕರು ತಮಿಳುನಾಡಿನ ನಿವಾಸಿಗಳು ಎಂದು ಹೇಳಲಾಗಿದೆ.

       ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದರೆ, ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸಮೀಪದ ಕುಣಿಗಲ್ ಹಾಗೂ ಬೆಂಗಳೂರು ಅಸ್ಪತ್ರೆಗಳಿಗೆ ಸಾಗಿಸಲಾಗಿದೆ.

       ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

(Visited 6 times, 1 visits today)

Related posts

Leave a Comment