ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಿಧನ: ಜಾರಕಿಹೊಳಿ-ಹೆಬ್ಬಾಳ್ಕರ್‌ ವಾರ್ ಶುರು

ಬೆಳಗಾವಿ:

     ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದ ವಿವಾದಿತ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಚುನಾವಣೆ ವೇಳೆ ಉಭಯ ಬಣಗಳ ರಾಜಿ ಸಂಧಾನದ ಅಧ್ಯಕ್ಷ ರಾಗಿದ್ದ ಮಹದೇವ ಪಾಟೀಲ್ ಸೋಮವಾರ ನಿಧನರಾಗಿದ್ದಾರೆ.

     ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣಾ ಕದನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಣದಿಂದ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರು.

      ಬೆಳಗಾವಿಯ ಫೂಲ್​ಬಾಗ್​ ಗಲ್ಲಿ ನಿವಾಸದಲ್ಲಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು.

   ಅಷ್ಟೇ ಅಲ್ಲದೇ ಜೆಡಿಎಸ್ ಹಾಗೂ ಕ್ರಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನಡುಗಿಸಿತ್ತು. ಆದ್ರೆ ಈಗ ಅಧ್ಯಕ್ಷ ಮಹಾದೇವ್​ ಪಾಟೀಲ್ ಮೃತಪಟ್ಟಿರುವುದರಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.

 

 

(Visited 4 times, 1 visits today)

Related posts

Leave a Comment