ಇಂದಿನಿಂದ 9 ದಿನ ಭಕ್ತಾದಿಗಳಿಗಾಗಿ ತೆರೆದಿರುವ ಹಾಸನಾಂಬ ದೇವಾಲಯ

ಹಾಸನ:

      ಹಾಸನದ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ಜಿಲ್ಲಾಡಳಿತ ತೆರೆದಿದೆ. ಇಂದಿನಿಂದ ಒಂಬತ್ತು ದಿನಗಳ (ನವೆಂಬರ್‌ 1 ರಿಂದ 9) ಕಾಲ ದೇವರ ದರ್ಶನ ದೊರಕಲಿದೆ.

      ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ  ಹಾಸನಾಂಬ ದೇಗುಲದ ಬಾಗಿಲು ಇಂದು ಮಧ್ಯಾಹ್ನ ತೆರೆಯಲಾಗಿದ್ದು.ಒಂದು ವರ್ಷದ ಭಕ್ತರ ನಿರೀಕ್ಷೆ ಫಲಿಸಿದೆ. ಇಂದೂ ಕೂಡ ಬಾಗಿಲು ತೆರೆದಾಗ ಇಟ್ಟಿದ್ದ ನೈವೇದ್ಯ ಹಾಗೆ ಇತ್ತು ಜೊತೆಗೆ ದೀಪವು ಉರಿಯಯುತ್ತಲೇ ಇತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 

      ಮೊದಲ ದಿನವೇ ಹಾಸನಾಂಬೆ ದರ್ಶನ ಮಾಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ದೇವಾಲಯದ ಬಳಿ ನೆರೆದಿದ್ದರು. ಪೊಲೀಸರ ಬಿಗಿ ಪಹರೆಯಲ್ಲಿ ಭಕ್ತಾದಿಗಳು ಹಾಸನಾಂಬೆ ದರ್ಶನ ಮಾಡಿದರು.

 

(Visited 8 times, 1 visits today)

Related posts

Leave a Comment