ವಾಹನ ತೊಟ್ಟಿಗೆ ಡಿಕ್ಕಿ: ಸವಾರ ಸಾವು

 ಕೊರಟಗೆರೆ:

      ದ್ವಿಚಕ್ರ ವಾಹನ ಸವಾರನೋರ್ವ ನಸುಕಿನ ವೇಳೆಯಲ್ಲಿ ಆಯ ತಪ್ಪಿ ರಸ್ತೆಯ ಬದಿಯ ತೋಟ್ಟಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಸೋಮವಾರ ಮುಂಜಾನೆ ಜರುಗಿದೆ.

      ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ-ಕೊರಟಗೆರೆ ರಸ್ತೆಯ ಹುಂಜನಹಳ್ಳಕ್ಕೆ ಹೊಂದಿಕೊಂಡ ನೀರಿನ ತೊಟ್ಟಿಗೆ ಡಿಕ್ಕಿ ಹೊಡೆದು ಮಡಕಸಿರಾ ತಾಲೂಕಿನ ಮದ್ದಲಕುಂಟ ಗ್ರಾಮದ ವಾಸಿಯಾದ ತಿಪ್ಪೆಸ್ವಾಮಿಯ ಮಗ ಆನಂದಕುಮಾರ್(27) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

      ವಡ್ಡಗೆರೆ ವೀರನಾಗಮ್ಮ ದೇವಿ ದರ್ಶನಕ್ಕೆ ಬಂದ ಮೃತ ಆನಂದ ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತೀದ್ದಾನೆ ಎನ್ನಲಾಗಿದೆ. ವಡ್ಡಗೆರೆ ಗ್ರಾಮದಿಂದ ಬೆಂಗಳೂರಿಗೆ ತೆರಳುವಾಗ ಅಪಘಾತವಾಗಿದೆ ಎನ್ನಲಾಗಿದೆ.
ಪಿಎಸೈ ಮಂಜುನಾಥ ಅಪಘಾತ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 13 times, 1 visits today)

Related posts

Leave a Comment