ಬೆಂಗಳೂರಿನ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಭೂಕುಸಿತ: ಟ್ರಾಫಿಕ್ ಜಾಮ್

ಬೆಂಗಳೂರು: 

      ಇಂದು ಬೆಳಗ್ಗೆ ಕಾಟನ್ ಪೇಟೆ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ದಿಢೀರ್ ಅಂತ ರಸ್ತೆ ಕುಸಿದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

       ಮುಖ್ಯರಸ್ತೆಯು ಸುಮಾರು 8 ಅಡಿ ಆಳದಷ್ಟು ಕುಸಿದಿದೆ, ಬಸ್ ಪಾಸಾಗುತ್ತಿದ್ದಂತೆಯೇ ಭೂಕುಸಿತ ಉಂಟಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಕಳಪೆ ಕಾಮಗಾರಿಯೇ ಭೂಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಕಾಟನ್‌ ಪೇಟೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಗಿದೆ.

      ಇನ್ನು ಹೀಗೆ ರಸ್ತೆ ಮಧ್ಯೆ ಕುಸಿದಿರೋದ್ರಿಂದ ವಾಹನ‌ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.. ಜನರು ಓಡಾಡಲು ಪರ್ಯಾಯ ಮಾರ್ಗಕಾಣದೇ ಟ್ರಾಫಿಕ್​ ಜಾಂ ಉಂಟಾಗಿದೆ. ಇನ್ನು ಘಟನ ಸ್ಥಳಕ್ಕೆ ಮೇಯರ‍್ ಸೇರಿದಂತೆ ಹಿರಿಯ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ

(Visited 31 times, 1 visits today)

Related posts

Leave a Comment