ಬಾವಿಯಲ್ಲಿ ಪತ್ತೆಯಾದ ಶಿಶು

ತುಮಕೂರು:       ಬಾವಿಯಲ್ಲಿ ಅಪರಿಚಿತ ಹೆಣ್ಣು ಮಗುವಿನ ಶವ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎ. ವೆಂಕಟಾಪುರದಲ್ಲಿ ನಡೆದಿದೆ.      ಸುಮಾರು ನಾಲ್ಕು ವರ್ಷದ ಅಪರಿಚಿತ ಹೆಣ್ಣು ಮಗು ಇದಾಗಿದೆ. ಕೊಲೆ ಮಾಡಿ ಬಾವಿಗೆ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ.       ವಿಷಯ ತಿಳಿದ ತಕ್ಷಣ ಕೋಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಓದುಗರು ಆತ್ಮಾವಲೋಕನ ಮಾಡಿಕೊಳ್ಳಬೇಕು – ದಿನೇಶ್ ಅಮೀನ್‍ಮಟ್ಟು

    ತುಮಕೂರು:      ಪತ್ರಿಕೆಯಲ್ಲಿ ಜಾಹಿರಾತು ಜಾಸ್ತಿ ಇದೆ. ಬಲಪಂಥೀಯವಾಗಿ ಬರೆಯುತ್ತಿದೆ. ಬಲಹೀನವಾಗಿದೆ. ಸಮರ್ಥವಾಗಿ ಬರುತ್ತಿಲ್ಲ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಪತ್ರಿಕೆಗಳನ್ನು ದೂರುವ ಬದಲು ಓದುಗರಾದ ನಾವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ತಿಳಿಸಿದರು.       ಬೆಲೆ ಸಮರ 1833ರಲ್ಲೇ ಆಯಿತು. ಅದರ ಅತ್ಯಂತ ಘೋರ ರೂಪವನ್ನು ಈಗ ನೋಡುತ್ತಿದ್ದೇವೆ. ಪತ್ರಿಕೆಯ ವೆಚ್ಚವನ್ನು ಸರಿದೂಗಿಸಲು ಮಾಲಿಕರು ಜಾಹಿರಾತು ಪ್ರಕಟಿಸಲು ಆರಂಭಿಸಿದರು. ಈಗ ಪತ್ರಿಕೆಗಳು ಜಾಹಿರಾತುಗಳಿಂದಲೇ ತುಂಬಿ ಹೋಗಿವೆ. ಜಾಹಿರಾತುಗಳಿಲ್ಲದ ಪತ್ರಿಕೆಯನ್ನು ನೋಡಲು ಸಾಧ್ಯವಾಗಿಲ್ಲ. ಏಕೆಂದರೆ ಓದುಗರ ಋಣದಲ್ಲಿ ಪತ್ರಿಕೆಗಳು ಇರಬೇಕು. ಅದಕ್ಕಾಗಿ ಓದುಗರು ಹೆಚ್ಚಿನ ಬೆಲೆ ಕೊಟ್ಟು ಪತ್ರಿಕೆಗಳನ್ನು ಕೊಂಡುಕೊಳ್ಳಬೇಕು. ಇಲ್ಲದೇ ಹೋದರೆ ಮಾಲಿಕರು ಕೊಟ್ಟ ಸುದ್ದಿಯನ್ನೇ ಓದಬೇಕಾಗಿದೆ ಎಂದು ಹೇಳಿದರು.       ಈಗ ಪತ್ರಿಕೆಗಳ ಬೆಲೆ 10 ರೂಪಾಯಿ ಮಾಡಿದರೆ ಯಾರು…

ಮುಂದೆ ಓದಿ...

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಇಂದು ಕರಡು ಮತದಾರರ ಪಟ್ಟಿ ಪ್ರಕಟ

 ತುಮಕೂರು:       ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ತಿಪಟೂರು/ ಶಿರಾ ನಗರಸಭೆ, ಕುಣಿಗಲ್/ ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಹಾಗೂ ತಹಸೀಲ್ದಾರರ ಕಛೇರಿಗಳಲ್ಲಿ ಡಿಸೆಂಬರ್ 10ರಂದು ಪ್ರಕಟಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.       ಪಟ್ಟಿಗೆ ಸಂಬಂಧಿಸಿದಂತೆ ಮತದಾರರು ತಮ್ಮ ಹೆಸರು ವಾಸವಿರುವ ವಾರ್ಡಿನ ವ್ಯಾಪ್ತಿಯಲ್ಲಿ ಇರದೆ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ, ಗ್ರಾಮೀಣ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಬಹುದು.       ಆಕ್ಷೇಪಣೆಗಳನ್ನು ಡಿಸೆಂಬರ್ 15ರೊಳಗಾಗಿ ಸಲ್ಲಿಸಬಹುದಾಗಿದೆ. ನಿಗಧಿತ…

ಮುಂದೆ ಓದಿ...

ಬಾಕಿ ಇರುವ 7634 ವಿಮಾ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ಸಂಸದರ ಸೂಚನೆ

 ತುಮಕೂರು :       ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ ನೋಂದಾಯಿಸಿಕೊಂಡಿರುವ 1,15,196 ರೈತರ ಅರ್ಜಿಗಳ ಪೈಕಿ ಬಾಕಿ ಇರುವ 7634 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತಿಯಲ್ಲಿಂದು ಕೇಂದ್ರ ಸರ್ಕಾರದಿಂದ ಅನುಷ್ಟಾನಗೊಳ್ಳುವ ವಿವಿಧ ಯೋಜನಾ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ ಕಳೆದ 2017-18ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 1,15,196 ರೈತರು ತಮ್ಮ ಬೆಳೆಯನ್ನು ವಿಮೆಗೊಳಪಡಿಸಲು ನೋಂದಾಯಿಸಿಕೊಂಡು ಪ್ರೀಮಿಯಂ ಹಣ ಕಟ್ಟಿದ್ದರೂ ಬ್ಯಾಂಕಿನ ಅಧಿಕಾರಿಗಳು ಇಲ್ಲ-ಸಲ್ಲದ ನೆಪವೊಡ್ಡಿ 7634 ರೈತರ ಅರ್ಜಿಗಳನ್ನು ವಿಲೇವಾರಿ ಬಾಕಿ ಉಳಿಸಿಕೊಂಡಿದ್ದಾರೆ. ಬ್ಯಾಂಕ್ ಹಾಗೂ ಕೃಷಿ ಇಲಾಖೆಗಳ ನಡುವೆ ಸಾಮರಸ್ಯ ಇಲ್ಲದಿರುವುದೇ ಇದಕ್ಕೆ ಕಾರಣ ಎಂದರು.       ಬ್ಯಾಂಕ್‍ನವರು ಇಲಾಖೆ ವಿರುದ್ಧ…

ಮುಂದೆ ಓದಿ...

ಮಾನವ ಹಕ್ಕುಗಳು ಒಂದೇ ನಾಣ್ಯದ ಎರಡು ಮುಖಗಳು : ನ್ಯಾ|| ರಾಜೇಂದ್ರ ಬಾದಾಮಿಕರ್

ತುಮಕೂರು :       ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದ್ದು ಎಲ್ಲರೂ ಸಂವಿಧಾನಕ್ಕೆ ಅನುಸಾರವಾಗಿ ನಡೆದುಕೊಂಡು ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಾದಿ ಕಾಲದಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ಜರುಗುತ್ತಲೇ ಇವೆ. 1990ರ ಕಾಯಿದೆಯಂತೆ ಮಾನವ ಹಕ್ಕುಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ತಿದ್ದುಪಡಿ ಕಾಯ್ದೆಯಲ್ಲಿ ಜನರು ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ಕೇಳಿದರೆ ಸಾಲದು. ಕರ್ತವ್ಯಗಳನ್ನು ಕೂಡ ಅರಿಯಬೇಕು ಎಂದರು.       ತುಮಕೂರು ಜಿಲ್ಲೆಯಲ್ಲಿ…

ಮುಂದೆ ಓದಿ...

ಕ್ಯಾನ್ಸರ್ ತಪಾಸಣಾ ಶಿಬಿರದ ಅನುಕೂಲ ಪಡೆಯಿರಿ : ಶಾಸಕ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ :       ನವೋದಯ ಕಾಲೇಜಿನ ಆವರಣದಲ್ಲಿ ಡಿ.24ರಂದು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಅನುಕೂಲವನ್ನು ಪಡೆಯಬೇಕು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ, ಆಶಾಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ಯಾನ್ಸರ್ ಖಾಯಿಲೆ ಬಂದರೆ ರೋಗಿಯು ಸಾವನ್ನಪ್ಪುತ್ತಾನೆ, ಕ್ಯಾನ್ಸರ್ ಖಾಯಿಲೆಯನ್ನು ಮೊದಲ ಹಂತದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದರೆ ರೋಗಿಯು ಗುಣಮುಖಿಯಾಗಿ ಬದುಕುತ್ತಾನೆ, ಈ ನಿಟ್ಟಿನಲ್ಲಿ ತಾಲ್ಲೂಕಿನ ಜನರ ಹಿತಾಸಕ್ತಿಗಾಗಿ ಕ್ಯಾನ್ಸರ್ ಶಿಬಿರವನ್ನು ನವೋದಯ ಸಂಸ್ಥೆ ಆಡಳಿತ, ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು. ತಾಲ್ಲೂಕು ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬರುವ ರೋಗಿಯನ್ನು ಗುರುತಿಸಿ ಶಿಬಿರಕ್ಕೆ ಕರೆತನ್ನಿ ಎಂದು ಸೂಚನೆ ನೀಡಿದರು.       ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ 10ರಿಂದ 12ಜನ ನುರಿತ…

ಮುಂದೆ ಓದಿ...

ಸಾಲಬಾಧೆ : ನೇಣಿಗೆ ಶರಣಾದ ರೈತ

ಗುಬ್ಬಿ :       ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಮಾದಾಪುರ ಗ್ರಾಮದಲ್ಲಿ ರೈತನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಸಣ್ಣ ಕೈಗಾರಿಕಾ ಸಚಿವರ ತವರೂರಲ್ಲೇ ರೈತನು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸಾರ್ವಜನಿಕರು ಇಂತಹ ಬರಗಾಲದಲ್ಲಿ ಯಾವ ರೈತನು ಬದುಕನ್ನು ಸಾಗಿಸುತ್ತಾನೆ. ಸಾಲ ಕೊಟ್ಟವರ ಮಾನಸಿಕ ಹಿಂಸೆಯನ್ನು ತಡೆಯಲಾರದೆ ವಿಷ ಕುಡಿದು ನೇಣಿಗೆ ಶರಣಾಗುವ ಘಟನೆಗಳು ಹೆಚ್ಚಾಗುತ್ತಿವೆ.       ತಾಲ್ಲೂಕಿನ ಮಾದಾಪುರ ಗ್ರಾಮದ ಎಂ.ಪಿ.ಮಂಜುನಾಥ್ (40ವರ್ಷ) ಈತನಿಗೆ ನಾಲ್ಕು ಎಕರೆ ಜಮೀನಿದ್ದು ಆ ಜಮೀನನಲ್ಲಿ ಇಲ್ಲಿಯವರೆಗೂ ಒಟ್ಟು ಕುಟುಂಬವನ್ನು ಕಾಪಾಡಿಕೊಂಡು ಬರುತ್ತಿದ್ದು ಹಿಂದಿನ ವರ್ಷಗಳಲ್ಲಿ ಅಂತರ್ಜಲ ಕುಸಿದ ಕಾರಣ ಕೊಳವೆ ಬಾವಿಯು ಬತ್ತಿದ್ದು ಪಕ್ಕದಲ್ಲೇ ಇರುವ ಬಿದರೆ ಗ್ರಾಮದಲ್ಲಿರುವ ಕೆ.ಜಿ.ಬಿ.ಬ್ಯಾಂಕ್‍ನಲ್ಲಿ 4 ಲಕ್ಷ ಸಾಲ ಪಡೆದು ಹೊಸ ಕೊಳವೆಬಾವಿಯನ್ನು ಕೊರೆಸಿದ್ದು ಇಷ್ಟೆಲ್ಲ ಖರ್ಚು ಮಾಡಿ ಕೇವಲ 6 ದಿನ ಮಾತ್ರ ನೀರನ್ನು…

ಮುಂದೆ ಓದಿ...