ತುಮಕೂರು : ತಾಂತ್ರಿಕ ದೋಷದ ಕಾರಣ ಟೆಂಪೋ ಟ್ರಾವೆಲರ್ ನಡುರಸ್ತೆಯಲ್ಲೇ ಹೊತ್ತಿಉರಿದಿರುವ ಘಟನೆ ಕುಣಿಗಲ್ ತಾಲೂಕು ಹುಲಿಯೂರುದುರ್ಗದ ಐಬಿ ವೃತ್ತದಲ್ಲಿ ನಡೆದಿದೆ. ತುಮಕೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣ ಚಾಲಕ ವಾಹನ ಚಾಲನೆ ಸ್ಥಗಿತಗೊಳಿಸಿದರು. ಏನಾಗಿದೆ ಎಂದು ಚಾಲಕ ಪರೀಕ್ಷಿಸಲು ಮುಂದಾಗುತ್ತಿದ್ದಂತೆ ಟೆಂಪೋ ಟ್ರಾವೆಲರ್ ಒಳಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ತಕ್ಷಣ ವಾಹನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ನೋಡ ನೋಡುತ್ತಿದ್ದಂತೆ ವಾಹನ ಧಗ ಧಗ ಹೊತ್ತಿ ಉರಿದಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ವ್ಯಾಪಿಸಿದ್ದರಿಂದ ಇನ್ನಿತರ ವಾಹನ ಚಾಲಕರು, ಜನರು ಕೆಲಕಾಲ ಗಾಬರಿಗೊಂಡರು. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ Share
ಮುಂದೆ ಓದಿ...Day: December 18, 2018
ವಿದ್ಯುತ್ ತಂತಿ ತಗುಲಿ ಯುವಕ ಸಾವು
ತುರುವೇಕೆರೆ: ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ನೆಡೆದಿದೆ. ಮೃತ ದುರ್ದೈವಿ ತಿಪಟೂರಿನ ಗೊರಗೊಂಡನಹಳ್ಳಿ ನಿವಾಸಿ ಶ್ರೀನಿವಾಸ್(20) ಎಂದು ತಿಳಿದು ಬಂದಿದೆ. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನವೀಕರಣ ಕಾಮಗಾರಿ ಕೆಲಸ ನಿರ್ವಹಿಸಲು ಆಗಮಿಸಿದ್ದ ಈತ ಆಸ್ಪತ್ರೆ ನಾಮಫಲಕದ ಗೋಪುರದ ಸೆಂಟ್ರಿಂಗ್ ಕಾಮಗಾರಿ ಮಾಡಲು ಮಂಗಳವಾರ ಮುಂದಾಗಿದ್ದು. ಮಂಗಳವಾರ ಬೆಸ್ಕಾಂ ಇಲಾಖೆ ಸಂಜೆವರೆವಿಗೂ ವಿದ್ಯುತ್ ಖಡಿತಗೊಳಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದನ್ನು ಗಮನಿಸಿ ಖಚಿತ ಗೊಳಿಸಿಕೊಂಡೆ ಕಾರ್ಯನಿರ್ವಹಣೆಗೆ ಮುಂದಾಗಿದ್ದಾನೆ, ಆದರೆ ಸಂಜೆ 5ಗಂಟೆ ಸುಮಾರಿಗೆ ಹೆಬ್ಬಾಗಿಲಿನ ಸೆಂಟ್ರಿಂಗ್ಗೆ ಅಳವಡಿಸಿದ್ದ ಮರದ ಹಲಗೆಗಳನ್ನು ಕಬ್ಬಿಣದ ರಾಡಿನಿಂದ ತೆರವುಗೊಳಿಸುವ ಸಂದರ್ಬದಲ್ಲಿ ಸೆಂಟ್ರಿಂಗ್ ಮೇಲ್ಭಾಗದಲ್ಲಿಯೇ ಇದ್ದ ವಿದ್ಯುತ್ ತಂತಿಗೆ ಕಬ್ಬಿಣದ ರಾಡು ತಗಲಿ ವಿದ್ಯುತ್ ಶಾಕ್ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಸಾರ್ವಜನಿಕರು ಸರ್ಕಾರಿ…
ಮುಂದೆ ಓದಿ...ಕಸಾಯಿಖಾನೆಗೆ ಸಾಗಿಸುತ್ತಿದ್ದ 74 ಎಮ್ಮೆ ಹಾಗೂ ಹಸುಗಳ ರಕ್ಷಣೆ
ತುರುವೇಕೆರೆ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 74 ಎಮ್ಮೆ ಹಾಗೂ ಹಸುಗಳನ್ನು ಪಟ್ಟಣದ ಪೊಲೀಸರು ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿಯಲ್ಲಿ 3 ಕಂಟೈನರ್ನಲ್ಲಿ ತುಂಬಿದ್ದ ಎಮ್ಮೆ, ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯನ್ನದಾರಿಸಿ ಪಟ್ಟಣದ ಪೊಲೀಸರು ಮೂರು ಲಾರಿಗಳನ್ನು ತಡದು ತಪಾಸಣೆ ಮಾಡಿದ್ದಾಗ ಅಕ್ರಮವಾಗಿ ಸುಮಾರು 74 ಎಮ್ಮೆ, ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೂಡಲೇ ಮೂರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಎಮ್ಮೆ , ಹಸುಗಳನ್ನು ಮೈಸೂರಿನ ಗೋ ಶಾಲೆಗೆ ಸುರಕ್ಷಿತವಾಗಿ ಸಾಗಿಸಲಾಗಿದೆ. Share
ಮುಂದೆ ಓದಿ...ಬಿಎಂಟಿಸಿ ಬಸ್ಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳು
ಬೆಂಗಳೂರು: ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಹರಿದು ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಬಿಎಂಪಿಯ ಕಸ್ತೂರ ಬಾ ಕಾಲೇಜಿನ ಪಿಯು ವಿದ್ಯಾಥಿಗಳಾದ ಚಂದ್ರಕಾಂತ್(17) ಮತ್ತು ಯದುಕುಮಾರ್(18) ಮೃತ ವಿದ್ಯಾರ್ಥಿಗಳೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ರಾಜಶೇಖರ್ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ವಿವರ: ಮೈಸೂರು ರಸ್ತೆಯ ಕೆಬಿ ನಗರದ ಬಿಬಿಎಂಪಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಂದ್ರಕಾಂತ್, ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ಅವರು ಸ್ನೇಹಿತ ರಾಜಶೇಖರ್ ಜತೆ ಕಾಲೇಜಿಗೆ ಹೋಗಲು ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಕಸ್ತೂರ…
ಮುಂದೆ ಓದಿ...ಕೋಡಿ ರಂಗನಾಥಸ್ವಾಮಿ ದೇವಾಲಯ: ವಿಜೃಂಭಣೆಯ ವೈಕುಂಠ ಏಕಾದಶಿ
ತುಮಕೂರು: ತುರುವೇಕೆರೆ ತಾಲೂಕು ದಬ್ಬೆಘಟ್ಟ ಹೋಬಳಿ ಕೋಡಿಪುರ ಮಜರೆ ಮುದಿಗೆರೆ ಗ್ರಾಮದ ಶ್ರೀ ಕೋಡಿರಂಗನಾಥಸ್ವಾಮಿ ದೇವಾಲಯದಲ್ಲಿಂದು ವೈಕುಂಠ ಏಕಾದಶಿಯ 10ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪೂಜಾ ಕಾರ್ಯಕ್ರಮದ ಪ್ರಯುಕ್ತ ಸ್ವಾಮಿಗೆ ಅಂದು ಬೆಳಿಗ್ಗೆ 5 ಗಂಟೆಯಿಂದ ವಿಶೇಷ ಅಭಿಷೇಕ, ಅಲಂಕಾರ, ಹೋಮ, ಮಹಾ ಮಂಗಳಾರತಿ ಸೇವೆಗಳು ಜರುಗಿದವು. ನಂತರ 11 ಗಂಟೆಯಿಂದ ಭಕ್ತಾದಿಗಳು ಪ್ರಮುಖ ಬೀದಿಯಲ್ಲಿ ಸ್ವಾಮಿಯ ತೇರನ್ನು ಎಳೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ತೇರಿನೊಂದಿಗೆ ವಿವಿಧ ಜಾನಪದ ಕಲಾತಂಡಗಳು ಕೋಲಾಟ, ಗೊಂಬೆ ಕುಣಿತ, ಪ್ರದರ್ಶನ ನೀಡಿದವಲ್ಲದೆ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸಂಜೆ ಸುಗಮ ಸಂಗೀತ ಕಾರ್ಯಕ್ರಮ, ದೀಪೋತ್ಸವ, ಕಾಮಧೇನು ಉತ್ಸವ, ಮಹಾ ಪ್ರಸಾದ ಸೇವೆಗಳು ಜರುಗಿದವು. Share
ಮುಂದೆ ಓದಿ...ಡಿಕೆಶಿ ಔತಣಕೂಟಕ್ಕೆ ಹೋಗಲ್ಲ : ರಮೇಶ್ ಜಾರಕಿಹೊಳಿ
ಬೆಳಗಾವಿ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿರುವ ಔತಣ ಕೂಟಕ್ಕೆ ನಾನು ಹೋಗಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಒಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಲವು ಪ್ರಮುಖ ನಾಯಕರು ಗೈರಾಗಿದ್ದಾರೆ. ಇನ್ನೊಂದೆಡೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕರೆದಿರುವ ಔತಣಕೂಟದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಮುನಿಸು ಹೊರಹಾಕಿದ್ದಾರೆ. Share
ಮುಂದೆ ಓದಿ...ಕಾಂಗ್ರೆಸ್ನವರು ಹೇಳಿದಾಗ ಸಂಪುಟ ವಿಸ್ತರಣೆ: ಕುಮಾರಸ್ವಾಮಿ
ಬೆಳಗಾವಿ: ಕಾಂಗ್ರೆಸ್ನವರು ಹೇಳಿದಾಗ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆಗೆ ನಾವು ತಯಾರಾಗಿದ್ದೇವೆ. ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಕಾಂಗ್ರೆಸ್ ನಾಯಕರು ಯಾವ ಸಮದಯಲ್ಲಿ ಎಂದು ಹೇಳುತ್ತಾರೋ ಆಗ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿದ್ಧನಿದ್ದೇನೆ. ಹೀಗಂತ ಮುಖ್ಯಮಂತ್ರಿ ಹೆಚ್ . ಡಿ . ಕುಮಾರಸ್ವಾಮಿ ಹೇಳಿದ್ದಾರೆ . ಡಿ. 22 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ . ಅದೇ ರೀತಿ ಸಂಪುಟ ವಿಸ್ತರಣೆ ಮಾಡಲು ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ಶಾಸಕರು ಗೈರು ಆಗಿರುವ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ . ಆದರೆ ಕಾಂಗ್ರೆಸ್ ನವರು ಹೇಳಿದ ದಿನದಂದು ಸಂಪುಟವಿಸ್ತರಣೆಗೆ ಸಿದ್ಧವಿರುವುದಾಗಿ ಸಿಎಂ ಹೇಳಿದರು. Share
ಮುಂದೆ ಓದಿ...