ಹೆತ್ತ ಹಸುಳೆಯ ಹತ್ಯೆಗೈದ ಪಾಪಿ ತಂದೆ

ಕೊರಟಗೆರೆ: 

    ಪತ್ನಿಯು ಪರ ಪುರುಷನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನಗೊಂಡ ವ್ಯಕ್ತಿಯೊಬ್ಬ ತನ್ನ ಹಾಲುಗಲ್ಲದ ಮಗುವನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

     ನರಸಿಂಹಮೂರ್ತಿಯೇ ಮಗುವನ್ನು ಕೊಲೆ ಮಾಡಿ ಆರೋಪಿ ಸ್ಥಾನದಲ್ಲಿ ನಿಂತಿರುವ ತಂದೆ. ಈತ ಚಿಕ್ಕಬಳ್ಳಾಪುರದ ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ತನ್ನ ಪತ್ನಿಗೆ ಅನೈತಿಕ ಸಂಬಂಧ ಇದೆ ಅಂತಾ ಸೇಡು ತೀರಿಸಿಕೊಳ್ಳಲು ಹೆಣ್ಣುಮಗುವನ್ನು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

      ಡಿಸೆಂಬರ್ 12ರಂದು ಎಂ.ವೆಂಟಾಪುರ ಗ್ರಾಮದ ಶಿವಶಂಕರಯ್ಯ ಎಂಬವರ ಜಮೀನಿನ  ಬಾವಿಯೊಂದರಲ್ಲಿ ಎರಡೂವರೆ ವರ್ಷದ ಹೆಣ್ಣುಮಗುವಿನ ಶವ ಪತ್ತೆಯಾಗಿದ್ದು, ಮಗುವಿನ ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತ್ತು ಎನ್ನಲಾಗಿದೆ.

      ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿ ಮತ್ತು ಮಗುವಿನ ಪೋಷಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಬಳಿಕ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್, ವಾಟ್ಸಪ್ ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ , ರೈಲು ನಿಲ್ದಾಣಗಳಲ್ಲಿ ಮಗುವಿನ ಭಾವಚಿತ್ರವನ್ನು ಪೊಲೀಸರು ಪ್ರಕಟಿಸಿದ್ದರು.

      ಅಂತಿಮವಾಗಿ ಪೊಲೀಸರು ಆರೋಪಿ ನರಸಿಂಹ ಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

(Visited 80 times, 1 visits today)

Related posts

Leave a Comment