ಜ.2ರಿಂದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

 ತುಮಕೂರು:

      ಕ್ಷಯರೋಗದ ಬಗ್ಗೆ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾದ್ಯಂತ ಜನವರಿ 2 ರಿಂದ 12ರವರೆಗೆ “ಸಕ್ರಿಯ ರೋಗ ಪತ್ತೆ ಆಂದೋಲನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರ ಡಾ: ಸನತ್ ತಿಳಿಸಿದ್ದಾರೆ.

      ಈ ಆಂದೋಲನದಲ್ಲಿ ನಿಯೋಜಿತ ತಂಡವು ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಮನೆಗಳಿಗೆ ಭೇಟಿ ನೀಡಿ ರೋಗದ ಜನಜಾಗೃತಿ ಮೂಡಿಸಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಫ ಸಂಗ್ರಹಣೆ ಮಾಡಿ ಆ ದಿನವೇ ಕಫ ಪರೀಕ್ಷೆ ಮಾಡಲಾಗುವುದು. ಕಫದಲ್ಲಿ ಕ್ರಿಮಿಗಳು ಪತ್ತೆಯಾದಲ್ಲಿ ಅಂದಿನಿಂದಲೇ ಚಿಕಿತ್ಸೆ ಪ್ರಾರಂಭಿಸಲಾಗುವುದು.

ಭಿತ್ತಿಪತ್ರ ಬಿಡುಗಡೆ:-

      ಆಂದೋಲನದ ಪ್ರಯುಕ್ತ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಇಂದು ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಬಿ.ಆರ್.ಚಂದ್ರಿಕಾ, ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವ್‍ರಾಜ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ: ಆರ್.ವಿ.ಮೋಹನ್‍ದಾಸ್, ಡಿಪಿಸಿ ಬಿ.ರೂಪಾ, ಡಿಬಿಹೆಚ್‍ವಿ ಗೋವಿಂದರಾಜು ಮತ್ತಿತರರು ಹಾಜರಿದ್ದರು.

(Visited 8 times, 1 visits today)

Related posts

Leave a Comment