ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಮುಂದುವರಿಕೆ

ಬೆಂಗಳೂರು:

      ಅನಾರೋಗ್ಯ ಸಮಸ್ಯೆಯಿಂದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದ ಎಚ್‌.ವಿಶ್ವನಾಥ್‌ ಅವರ ಮನವಿಯನ್ನು ವರಿಷ್ಠ ದೇವೇಗೌಡ ಅವರು ತಿರಸ್ಕರಿಸಿದ್ದಾರೆ.

      ಇಂದು ನಡೆದ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಈ ಬಗ್ಗೆ ದೇವೇಗೌಡರು ಸೂಚನೆ ನೀಡಿದ್ದು, ಲೋಕಸಭೆ ಚುನಾವಣೆ ಮುಂದು ಇರುವ ಕಾರಣ ಅನುಭವಿ ಎಚ್‌.ವಿಶ್ವನಾಥ್ ಅವರನ್ನು ಬದಲಾಯಿಸುವುದು ಸೂಕ್ತವಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

       ಇತ್ತೀಚೆಗೆ ಅನಾರೋಗ್ಯ ಕಾಡುತ್ತಲೇ ಇದೆ. ಹಾಗಾಗಿ ನನ್ನ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ರಾಜ್ಯಾಧ್ಯಕ್ಷನಾಗಿ ಪಕ್ಷದಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ನನ್ನ ಸ್ಥಾನದಿಂದ ಬಿಡುಗಡೆ ಕೋರಲು ನಿರ್ಧರಿಸಿದ್ದೆ ಎಂದು ಸ್ಪಷ್ಟಪಡಿಸಿದರು.

      ಆದರೆ ವಿಶ್ವನಾಥ್‌ ಅವರ ಬಳಿ ಸಮಾಲೋಚನೆ ನಡೆಸಿರುವ ದೇವೇಗೌಡ ಅವರು, ದೈವಬಲ ನಂಬಿ ಎಲ್ಲರೂ ಜೊತೆಯಾಗಿ ಹೋಗೋಣ. ಲೋಕಸಭೆ ಚುನಾವಣೆ ಎಂಬ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ ಎಂದಿದ್ದಾರೆ, ಹಾಗಾಗಿ ಅವರ ಮಾತಿನಂತೆ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.

 

(Visited 11 times, 1 visits today)

Related posts

Leave a Comment