ಜೆಡಿಎಸ್ ಶಾಸಕ ಗೋಪಾಲಯ್ಯನ ಕುಟುಂಬದಿಂದ ಮನೆಯ ಕಾರು ಚಾಲಕ ಮನು ಕೊಲೆ

 ಕೊರಟಗೆರೆ:       ಪ್ರೀತಿಸಿ ಯುವತಿಯ ಜೊತೆ ಮದುವೆಯಾದ ದ್ವೇಷದ ಕಿಚ್ಚಿನಿಂದ ಬೆಂಗಳೂರು ನಗರದ ಶಾಸಕರೊಬ್ಬರ ತಮ್ಮನ ಕಡೆಯ 8ಜನ ಆರೋಪಿಗಳ ತಂಡ ತುಮಕೂರು ತಾಲೂಕಿನ ಬಳಗೆರೆ ಗ್ರಾಮದ ರೌಡಿಶೀಟರ್ ಮನುಗೆ ಮಧ್ಯಪಾನ ಮಾಡಿಸಿ ಕುಡಿದ ಮತ್ತಿನಲ್ಲಿ ಕೈ ಮತ್ತು ಕಾಲಿಗೆ ಹಗ್ಗದಿಂದ ಕಟ್ಟಿ ಲಾಂಗ್ ಮತ್ತು ಮಚ್ಚಿನಿಂದ 14ಭಾರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.         ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಸೂಲಪ್ಪ ಮತ್ತು ತಿಮ್ಮಪ್ಪ ಎಂಬುವರ ಜಮೀನಿನ ಮೂಲಕ ಕಲ್ಲು ಗಣಿಗಾರಿಕೆಗೆ ಹಾದುಹೋಗುವ ಮಣ್ಣಿನ ನಡುರಸ್ತೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದ ಕಾಪಾಕ್ಷಿಪಾಳ್ಯದ ವಾಸಿಯಾದ ಮನು(38) ಎಂಬುವನೇ 8ಜನರಿಂದ ಕೊಲೆಯಾದ ದುರ್ದೈವಿ.        ಮೃತ ಮನು ಮೂಲತಃ ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಹೋಬಳಿ ಬಳಗೆರೆ ಗ್ರಾಮದ ವಾಸಿ.…

ಮುಂದೆ ಓದಿ...

ನಾಳೆ ಬಂದ್ ಇರುತ್ತಾ?

ನವದೆಹಲಿ:       ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಎರಡು ದಿನಗಳ ಕಾಲ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಎರಡು ದಿವಸಗಳ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಮೊದಲ ದಿವಸದ ಮುಷ್ಕರ ಕೆಲ ನಿಮಿಷಗಳ ಹಿಂದಷ್ಟೆ ಮುಕ್ತಾಯವಾಗಿದೆ.       ಇನ್ನು ಎರಡು ದಿವಸಗಳ ಬಂದ್ ಪೈಕಿ ಮೊದಲನೇ ದಿವಸದ ಬಂದ್ ಇಂದು ಮುಕ್ತಾಯವಾಗಿದ್ದು, ಎಂದಿನಿಂತೆ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ನಾಳೆ ಕೂಡ ಬಂದ್ ಮುಂದುವರೆಯಲಿದ್ದು, ನಾಳೆ ಬೆಂಗಳೂರು ಸೇರಿ ರಾಜ್ಯಾದಂತ್ಯ ಸರಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎನ್ನಲಾಗುತ್ತಿದೆ.       ನಾಳೆಯೂ ಕೂಡ ಸರಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಇಲ್ಲಿ ತನಕ ಯಾವುದೇ ಅಧಿಕೃತ ಆದೇಶವು ಬಂದಿಲ್ಲ. ಇನ್ನು ಖಾಸಗಿ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ಶಾಲೆಗೆ ರಜೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಅಂತ ಖಾಸಗಿ ಶಾಲೆಗಳ…

ಮುಂದೆ ಓದಿ...

ಭಾರತ ಬಂದ್ ಪ್ರತಿಭಟನೆ ವೇಳೆ ಮಹಿಳೆ ಸಾವು

ಕಾರವಾರ:       ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆ ಮೆರವಣಿಗೆ ವೇಳೆ ಅಂಗನವಾಡಿ ಸಹಾಯಕ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ.       ಮೃತ ಮಹಿಳೆಯನ್ನು ಮುಂಡಗೋಡು ತಾಲೂಕಿನ ಶಿಡ್ಲಗುಂಡಿ ಗ್ರಾಮದ ಅಂಗನವಾಡಿಯ ಸಹಾಯಕಿ ಶಾಂತವ್ವ ಚಕ್ರಸಾಲಿ (57) ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ತಾಲೂಕು ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ಮೆರವಣಿಗೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಶಾಂತವ್ವ ಏಕಾಏಕಿ ಕುಸಿದು ಬಿದ್ದಿದ್ದಾರೆ.       ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಬಳಿ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಜಮಾಯಿಸಿದ್ದಾರೆ.

ಮುಂದೆ ಓದಿ...

ರೇವಣ್ಣ ಸೂಪರ್ ಸಿಎಂ ಅಲ್ಲ : ಎಚ್.ಎಂ ರೇವಣ್ಣ

ಬೆಂಗಳೂರು:       ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಲ್ಲ, ಅವರು ಕೇವಲ ಸಚಿವರಷ್ಟೇ. ಕಾಂಗ್ರೆಸ್‌ನವರು ಒತ್ತಡ ಹಾಕಲು ಮುಂದಾದರೆ ನಮ್ಮ ದಾರಿ ನಮಗೆ ಎಂದು ಅನವಶ್ಯಕವಾಗಿ ಹೇಳಿಕೆ ನೀಡಿದ್ದಾರೆ ಎಂದು ರೇವಣ್ಣ ಹೇಳಿಕೆಗೆ ಮಾಜಿ ಸಚಿವ ಎಚ್.ಎಂ ರೇವಣ್ಣ ತಿ ರುಗೇಟು ನೀಡಿದ್ದಾರೆ.       ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಡಿ ರೇವಣ್ಣ ಏನೂಸೂಪರ್ ಸಿಎಂ ಅಲ್ಲ ಪರಿಸ್ಥಿತಿ ಮತ್ತು ಮಿತಿಯನ್ನು ಅರಿತು ಮಾತನಾಡಬೇಕು. ಹೈಕಮಾಂಡ್ ನಿರ್ದೇಶನದ ಮೇರೆಗೆ ಕೋಮುವಾದಿ ಪಕ್ಷ ದೂರವಿಡಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆದರೆ ಪಕ್ಷದಲ್ಲಿ ಇದೀಗ ಎಲ್ಲರೂ ಮಾತನಾಡಲು ಆರಂಭಿಸಿದ್ದಾರೆ ಎಂದು ದೂರಿದರು.       ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್​ ಮತ್ತು ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ರಾಜ್ಯದ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.…

ಮುಂದೆ ಓದಿ...

ತೀವ್ರ ಅಪೌಷ್ಠಿಕ ಮಕ್ಕಳನ್ನು ಎನ್‍ಆರ್‍ಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಆಯೋಗದ ಸೂಚನೆ

 ತುಮಕೂರು:       ವರದಿಯನುಸಾರ ಜಿಲ್ಲೆಯಲ್ಲಿ 337 ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಅಂಗನವಾಡಿ ಕೇಂದ್ರಗಳು ಕೂಡಲೇ ಇಂತಹ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿರುವ “ಪೌಷ್ಠಿಕ ಪುನರ್ವಸತಿ ಕೇಂದ್ರ”(ಓಖಅ)ಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿತು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತಂತೆ ಅಧ್ಯಕ್ಷ ಡಾ: ಎನ್. ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿ ಸುಜಾತ ಹೊಸಮನಿ, ಸದಸ್ಯರಾದ ವಿ.ಬಿ. ಪಾಟೀಲ್, ಡಿ.ಜಿ.ಹಸಬಿ, ಮಂಜುಳಾಬಾಯಿ, ಬಿ.ಎ.ಮಹಮ್ಮದ್ ಅಲಿ ಅವರನ್ನೊಳಗೊಂಡ ಆಯೋಗವು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿತು.       ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಆಹಾರ ಭದ್ರತಾ ಕಾಯ್ದೆಯು ದೇಶದಲ್ಲಿ 2013ರಲ್ಲಿಯೇ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ 2017ರ ಜುಲೈ 5ರಂದು ಆಯೋಗ ರಚನೆಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆಯೋಗ ಕಾರ್ಯಾರಂಭಿಸಿದ ನಂತರ ರಾಜ್ಯದ ಹಿಂದುಳಿದ ರಾಯಚೂರು, ಬೀದರ್,…

ಮುಂದೆ ಓದಿ...

ರಾಜ್ಯಾದ್ಯಂತ ಭಾರತ್ ಬಂದ್ !!

ಬೆಂಗಳೂರು:       ಭಾರತಕ್ಕೆ ‘ಬಂದ್’ ಗಳೇನು ಹೊಸತಲ್ಲ. ಒಂದಿಲ್ಲೊಂದು ಕಾರಣಕ್ಕೆ ತಿಂಗಳಿಗೊಂದಾದರೂ ಬಂದ್ ನಡೆಯುವುದು ಮಾಮೂಲು.       ಅಂತೆಯೇ ಇಂದು ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ.       ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ…

ಮುಂದೆ ಓದಿ...

ಜ.10: ಸೂಲಗಿತ್ತಿ ನರಸಮ್ಮ ಸ್ಮಾರಕ ಶಂಕುಸ್ಥಾಪನೆ, ಕವನ ಸಂಕಲನ ಬಿಡುಗಡೆ

ತುಮಕೂರು:       ಸಾವಿರ ಮಕ್ಕಳ ತಾಯಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಪಣ್ಯ ಸ್ಮರಣ ಅಂಗವಾಗಿ ಜನವರಿ 10 ರ ಬೆಳಗ್ಗೆ 11.30ಕ್ಕೆ ಸೂಲಗಿತ್ತಿ ನರಸಮ್ಮ ನೆನಪುಗಳು ಕವನ ಸಂಕಲನ ಬಿಡುಗಡೆ,ಡಾ.ಸೂಲಗಿತ್ತಿ ನರಸಮ್ಮ ಸ್ಮಾರಕ ಭವನ ಶಂಕುಸ್ಥಾಪನೆ ಸಮಾರಂಭವನ್ನು ಸೂಲಗಿತ್ತಿ ನರಸಮ್ಮ ಸ್ಮಾರಕ ಸ್ಥಳ ಗಂಗಸಂದ್ರ ವಾರ್ಡ್ ನಂ 11 ದೊಡ್ಡಸಾರಂಗಿ ಮುಖ್ಯರಸ್ತೆ ತುಮಕೂರು ಇಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪಾವಗಡ ತಾಲೂಕಿನ ಕೃಷ್ಣಾಪುರದಲ್ಲಿ ಜನಿಸಿದ ಡಾ.ಸೂಲಗಿತ್ತಿ ನರಸಮ್ಮ ತಮ್ಮ ಹಿರಿಯರಿಂದ ಕಲಿತ ಸೂಲಿಗಿತ್ತಿ ವೃತ್ತಿಯನ್ನು ತನ್ನ ಇಳಿ ವಯಸ್ಸಿನವರೆಗೆ ಮುಂದುವರೆಸಿಕೊಂಡು ಬಂದಿದ್ದು,ಇದುವರೆಗೂ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.ಇವರಿಗೆ ಕೇಂದ್ರ ಸರಕಾರದ ಪ್ರತಿಷ್ಠಿತ ಪದ್ಮಶ್ರೀ, ವಯೋಶ್ರೇಷ್ಠ ಸನ್ಮಾನ್ ರಾಷ್ಟ್ರಪ್ರಶಸ್ತಿಯ ಜೊತೆಗೆ, ರಾಜ್ಯ ಸರಕಾರದ ಡಿ.ದೇವರಾಜ ಅರಸು, ಕಿತ್ತೂರು ರಾಣಿ ಚನ್ನಮ್ಮ,…

ಮುಂದೆ ಓದಿ...