ಜೆಸಿಟಿಯು ಅಡಿಯಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ತುಮಕೂರು:       ಹನ್ನೆರಡು ಬೇಡಿಕೆಗಳ ಆಧಾರದಲ್ಲಿ ರಾಷ್ಟ್ರಮಟ್ಟದಲ್ಲಿ ಕರೆ ನೀಡಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಜೆಸಿಟಿಯು ಅಡಿಯಲ್ಲಿ ತುಮಕೂರು ನಗರದ ಟೌನ್‍ಹಾಲ್ ಬಳಿ ನೂರಾರು ಕಾರ್ಮಿಕರು ಬೆಳಗ್ಗೆ 9 ಗಂಟೆಗೆ ಸಮಾವೇಶಗೊಂಡರು. ಅಂಗನವಾಡಿ ನೌಕರರು, ಆಶಾ, ಕೈಗಾರಿಕಾ ಕಾರ್ಮಿಕರು, ಪೌರಕಾರ್ಮಿಕರು, ಬಿಎಸ್‍ಎನ್‍ಎಲ್ ನೌಕರರು, ಜೀವ ವಿಮಾ ನೌಕರರು, ಗುತ್ತಿಗೆ ಕಾರ್ಮಿಕರು ಮಧ್ಯಾಹ್ನ 12 ಗಂಟೆಯವರೆಗೆ ಘೋಷಣೆಗಳನ್ನು ಕೂಗುತ್ತ ಟೌನ್‍ಹಾಲ್ ವೃತ್ತದಲ್ಲಿ ಧರಣಿ ನಡೆಸಿದರು.       ಧರಣಿಯ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಇಪ್ಪತ್ತು ಕೋಟಿ ಕಾರ್ಮಿಕರು ಬೀದಿಗಿಳಿದು ಮುಷ್ಕರ ನಡೆಸಿದಾಗ್ಯೂ ಕೇಂದ್ರ ಸರ್ಕಾರ ಕಾರ್ಮಿಕರ ಬೇಡಿಕೆಯ ಬಗ್ಗೆ ಮಾತುಕತೆ ಆಹ್ವಾನಿಸದೆ ನಿರ್ಲಕ್ಷ್ಯ ವಹಿಸಿರುವುದು ಸರ್ಕಾರಕ್ಕೆ ದುಡಿಯುವ ಜನರ ಬಗ್ಗೆ ಇರುವ ತಾತ್ಸಾರಕ್ಕೆ ಸಾಕ್ಷಿ ಎಂದರು.       ಇದೊಂದು ರಾಜಕೀಯ ಪ್ರೇರಿತ ಹೋರಾಟ ಹಾಗೂ…

ಮುಂದೆ ಓದಿ...