ಮಾಜಿ ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮ ರಾಜೀನಾಮೆ

ನವದೆಹಲಿ:        ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ಅಲೋಕ್​ ಕುಮಾರ್​ ವರ್ಮ​ ಅವರು ತಮ್ಮ ನೂತನ ಹುದ್ದೆ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.       ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ, ಅಗ್ನಿಶಾಮಕ ವಿಭಾಗದ ಡಿಜಿ ಹುದ್ದೆಗೆ ವರ್ಗಾಯಿಸಿತ್ತು.       ಇನ್ನೊಂದೆಡೆ ಅಲೋಕ್ ವರ್ಮಾ ವರ್ಗಾವಣೆಯುಇಂದ ತೆರವಾದ ಸ್ಥಾನಕ್ಕೆ ಇಂದು ಮತ್ತೆ ಹಂಗಾಮಿ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರರಾವ್‌ ನೇಮಕ ಆಗಿದ್ದಾರೆ.        ಈ ಹಿಂದೆ ಕೇಂದ್ರೀಯ ತನಿಇಖಾ ದಳದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದ ತರುವಾಯ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಹಾಗೂ ಅವರ ಸಹವರ್ತಿ ರಾಕೇಶ್ ಅಸ್ತಾನ ಅವರುಗಳನ್ನು ಸುದೀರ್ಘಾವಧಿಯ…

ಮುಂದೆ ಓದಿ...

ಶ್ರೀಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಕೆ

ತುಮಕೂರು:       ಸಿದ್ದಗಂಗಾ ಶ್ರೀಗಳಿಗೆ ಉಸಿರಾಟದ ಸಮಸ್ಯೆ ಇದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.       ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಜಂಟಿಯಾಗಿ ಶ್ರೀಗಳ ತಪಾಸಣೆ ಮಾಡಿ, ಮಾಹಿತಿ ಪಡೆದಿದ್ದೇವೆ ಎಂದರು.       ಶ್ರೀಗಳ ಹೃದಯಬಡಿತ, ರಕ್ತದೊತ್ತಡ ಎಲ್ಲವೂ ಕೂಡ ಸಹಜವಾಗಿದೆ. ಶ್ರೀಗಳ ಶಕ್ತಿ ಕ್ಷೀಣಿಸಿದೆ. ಸ್ವತಹ ಉಸಿರಾಟದ ಶಕ್ತಿಯ ಕೊರತೆ ಇದೆ. ಆದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರೆಸಿದ್ದೇವೆ ಎಂದು ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.

ಮುಂದೆ ಓದಿ...

“ಪ್ರಿಯದರ್ಶಿನಿ” ಯುವ ಮಹಿಳೆಯರ ಸುರಕ್ಷಿತ ರಾಜಕೀಯ ವೇದಿಕೆ

 ತುಮಕೂರು:       ಯುವ ಮಹಿಳೆಯರು ಶಿಕ್ಷಣ,ಸುರಕ್ಷತೆ,ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮಹಿಳಾ ಕಾಂಗ್ರೆಸ್‍ನ ಯುವ ಘಟಕ “ಪ್ರಿಯದರ್ಶಿನಿ” ಯುವ ಮಹಿಳಾ ಮಣಿಗಳಿಗೆ ಅತ್ಯುತ್ತಮ ಸುರಕ್ಷಿತ ರಾಜಕೀಯ ವೇದಿಕೆ ಎಂದು ಘಟಕದ ರಾಜ್ಯಾಧ್ಯಕ್ಷೆ ಭವ್ಯ ತಿಳಿಸಿದ್ದಾರೆ.       ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,16 ರಿಂದ 35 ವರ್ಷದ ವಯಸ್ಸಿನ ಯುವ ಮಹಿಳಾ ಮನಸ್ಸುಗಳ ದ್ವನಿಗೆ ಪೂರಕವಾಗಿ ಪ್ರಿಯದರ್ಶಿನಿ ವೇದಿಕೆ ಕೆಲಸ ಮಾಡಲಿದೆ.ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 800 ಯುವ ಮಹಿಳೆಯರನ್ನು ಪ್ರಿಯದರ್ಶಿನಿ ವೇದಿಕೆಗೆ ನೊಂದಾಯಿಸಿ,ಅವರ ಮೂಲಕ ಹದಿ ಹರೆಯದ ಮಹಿಳೆಯ ಬೇಡಿಕೆಗಳನ್ನು ತಿಳಿದು,ಅವುಗಳನ್ನು ಸರಕಾರದ ಮುಂದಿಟ್ಟು, ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೆಲಸ ಮಾಡಲಿದೆ ಎಂದರು.       ಇಂದಿನ ಪೈಪೋಟಿ ಯುಗದಲ್ಲಿ ಮಹಿಳೆಯರಿಗೆ ಅದರಲ್ಲಿಯೂ ಗ್ರಾಮೀಣ ಮಹಿಳೆಯರಿಗೆ ಪ್ರಪಂಚದ ಎಲ್ಲಾ…

ಮುಂದೆ ಓದಿ...

ಅರಣ್ಯ ಬೆಳೆಸಿ-ಪರಿಸರ ಉಳಿಸಿ

 ತುಮಕೂರು:       ಅರಣ್ಯ ಬೆಳೆಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.       ಮಕ್ಕಳಲ್ಲಿ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ “ಚಿಣ್ಣರ ವನ ದರ್ಶನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಅರಣ್ಯ ಬೆಳೆಸುವ ಹಾಗೂ ಪರಿಸರ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಅರಣ್ಯ ಪ್ರದೇಶಗಳಾದ ಬನ್ನೇರುಘಟ್ಟ, ಬಂಡೀಪುರ, ನಾಗರಹೊಳೆ ಪ್ರದೇಶಕ್ಕೆ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.       ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೆ ಪರಿಸರದಲ್ಲಿ ವೈಪರಿತ್ಯ ಉಂಟಾಗಿ ಅರಣ್ಯ ನಾಶವಾಗುತ್ತಿದೆ. ನಮ್ಮ ಕಾಲದಲ್ಲಿ ಬಾವಿಗಳಲ್ಲಿ ನೀರನ್ನು ನೋಡುತ್ತಿದ್ದೆವು. ಇಂದಿನ ದಿನಗಳಲ್ಲಿ…

ಮುಂದೆ ಓದಿ...

ಸಿದ್ದರಾಮೇಶ್ವರರ ಜಯಂತೋತ್ಸವ ಭಕ್ತರಿಂದಲೇ ಪೂರ್ವ ಸಿದ್ಧತೆ

ಗುಬ್ಬಿ :       ಸಾಮಾಜಿಕ ನ್ಯಾಯಕ್ಕೆ ವಚನಗಳ ಮೂಲಕ ಬದ್ದತೆ ತೋರಿದ ಶರಣ ಸಿದ್ದರಾಮೇಶ್ವರರ ಜಯಂತೋತ್ಸವ ಅದ್ದೂರಿಗಾಗಿ ಪೂರ್ವ ಸಿದ್ದತೆಯನ್ನು ಸ್ವಯಂ ಸೇವಕರಾಗಿ ನೂರಾರು ಭಕ್ತರೇ ನಡೆಸಿಕೊಡುತ್ತಿದ್ದಾರೆ.       ಬೆಟ್ಟದಹಳ್ಳಿ ಗವಿಮಠದ ನಿರ್ವಹಣೆಯಲ್ಲಿ ನಡೆಯಲಿರುವ 846 ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಮಾಗದರ್ಶನದಲ್ಲಿ ಎಲ್ಲಾ ಭಕ್ತರು, ಮುಖಂಡರು ಪಕ್ಷಾತೀತವಾಗಿ ನಡೆಸಿದ್ದಾರೆ. ಜನವರಿ 14 ಮತ್ತು 15 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 40 ಎಕರೆ ವಿಶಾಲ ಪ್ರದೇಶವನ್ನ ಬಾಗೂರು ಗೇಟ್ ಬಳಿ ಸಿದ್ದಗೊಳಿಸಲಾಗುತ್ತಿದೆ. ವಿಶಾಲವಾದ ಪೆಂಡಾಲ್ 20 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ. ಹೆದ್ದಾರಿ ಬದಿಯಲ್ಲೇ ಇರುವ ಈ ಸ್ಥಳ ಗುಬ್ಬಿ ನಿಟ್ಟೂರು ಮಾರ್ಗ ಮಧ್ಯೆ ಸುತ್ತಲೂ ಶರಣರ ಚಿತ್ರಗಳ ಫ್ಲೆಕ್ಸ್‍ನಿಂದ ಸಜ್ಜಾಗಿದೆ.       ರಾಜ್ಯದ ನಾನಾಭಾಗದಿಂದ 108 ಮಠಾಧೀಶರು ಆಗಮಿಸುವ ಈ…

ಮುಂದೆ ಓದಿ...

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ನಡವಳಿಕೆ ಮುಖ್ಯ : ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ

ಗುಬ್ಬಿ :       ಶಿಕ್ಷಕ ವರ್ಗದಲ್ಲಿ ಕಾಣುವ ಸೃಜನಶೀಲತೆ ವಿದ್ಯಾರ್ಥಿ ವೃಂದದಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ನಡವಳಿಕೆ ಮುಖ್ಯವಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.       ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಚಿಣ್ಣರ ಚಿಲುಮೆ ವಲಯ ಮಟ್ಟದ ನಾಟಕೋತ್ಸವವನ್ನು ಉದ್ಘಾಟಿಸಿದ ಅವರು ಹಣ ಗಳಿಕೆಯಿಂದಲೇ ಸಂತೋಷ ಸಿಗುತ್ತದೆ ಎಂಬ ಕಲ್ಪನೆಯಲ್ಲಿ ಇಂದಿನ ಜನಾಂಗ ಸಂಗೀತ, ಸಾಹಿತ್ಯ, ಕಲೆ ಹಾಗೂ ಕ್ರೀಡೆಯಿಂದ ದೂರವಾಗಿ ಬದುಕಿನ ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಎಂದರು.       ರಂಗಭೂಮಿಯಲ್ಲಿ ಸಮಾಜ ನಿರ್ಮಾಣ ಎಂಬ ಅಂಶ ಅಡಗಿದೆ. ಈ ಹಿಂದೆ ನಮ್ಮ ಮನರಂಜನೆಯಾಗಿದ್ದ ನಾಟಕಗಳು ಮುಂದೆ ಜಾಗೃತಿ ಮೂಡಿಸುವ ಉತ್ತಮ ಸಂದೇಶ ಒದಗಿಸುವ ವೇದಿಕೆಯಾಗಿದೆ. ಇಂತಹ ರಂಗಭೂಮಿಯ ಅಭಿರುಚಿಯನ್ನ ಇವತ್ತಿನ ಮಕ್ಕಳಲ್ಲಿ ಮೂಡಿಸಬೇಕಿದೆ. ಈ ಕಾರ್ಯವನ್ನ ಗುಬ್ಬಿ ವೀರಣ್ಣ…

ಮುಂದೆ ಓದಿ...

ತುರುವೇಕೆರೆಯನ್ನು ಪ.ಪಂ. ವ್ಯಾಪ್ಯಿಯಿಂದ ಪುರಸಭೆ ವ್ಯಾಪ್ತಿಗೇರಿಸಲು ಚಿಂತನೆ

ತುರುವೇಕೆರೆ:       ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಪಟ್ಟಣ ಪಂಚಾಯ್ತಿ ವ್ಯಾಪ್ಯಿಯಿಂದ ಪುರ ಸಭೆ ವ್ಯಾಪ್ತಿಗೇರಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.       ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಗುರುವಾರ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ವಾಣಿಜ್ಯ ಸಂಕೀರ್ಣ ಪೂರ್ಣ ಗೊಳಿಸುವ 1.90 ಲಕ್ಷ ವ್ಯಚ್ಚದ ಕಾಮಗಾರಿಗೆ ಶಾಸಕ ಮಸಾಲ ಜಯರಾಮ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ ಸಂರ್ವಾಗೀಣ ಅಭಿವೃದ್ದಿಯೇ ನನ್ನ ದ್ಯೇಯವಾಗಿದೆ. ಪಟ್ಟಣದ ಜನರಿಗೆ ಮೂಲ ಭೂತ ಸೌಕರ್ಯ ಕಲ್ಪಿಸಬೇಕಿದೆ. ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ, ಒಳಚರಂಡಿ, ಒಂದು ಹೈಟೆಕ್ ಶಾಪಿಂಗ್ ಮಾಲ್ ಮಾಡುವ ಮೂಲಕ ಪಟ್ಟಣ ಅಭಿವೃದ್ದಿ ಪಡಿಸಲಾಗುವುದು. ವಾಣಿಜ್ಯ ಸಂಕೀರ್ಣದಲ್ಲಿ ಸುಸರ್ಜಿತ 52 ಅಂಗಡಿ, ಒಂದು ಹೋಟಲ್ ಮಳಿಗೆ ಸೇರಿ ಮುಂಬಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಪಟ್ಟಣದ ಜನರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ…

ಮುಂದೆ ಓದಿ...