ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಲು ಸಾರಿಗೆ ಸಚಿವ ಚಿಂತನೆ

ತುಮಕೂರು:       ಸ್ಮಾರ್ಟ್‍ಸಿಟಿ ಯೋಜನೆ ಯಲ್ಲಿ 2 ಬಸ್ ನಿಲ್ದಾಣ ಹಾಗೂ ಬಸ್ ಡಿಪೋಗಳನ್ನು 175 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು. ಅವರಿಂದು ನಗರಕ್ಕೆ ಭೇಟಿ ನೀಡಿ ಬಸ್ ನಿಲ್ದಾಣ ಹಾಗೂ ಡಿಪೋ ವೀಕ್ಷಿಸಿ ಮಾತನಾಡುತ್ತಿದ್ದರು.ನಾಲ್ಕೂವರೆ ಎಕರೆ ಜಾಗದಲ್ಲಿರುವ ಬಸ್ ನಿಲ್ದಾಣ ವನ್ನು ಆಧುನೀಕರಣಗೊಳಿಸಿ ಅದರಲ್ಲಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಮಾಡುವು ದಾಗಿ ತಿಳಿಸಿದ ಅವರು, ಮೂರು ಹಂತದ ಕಟ್ಟಡದಲ್ಲಿ ಕೆಳ ಹಂತದ ಕಟ್ಟಡದಲ್ಲಿ ದುರಸ್ತಿ ವಿಭಾಗ ಹಾಗೂ ಡಿಪೋ ಇರಲಿದ್ದು, ಇನ್ನೊಂದು ಹಂತದ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಅವರು ತಿಳಿಸಿದರು.       ತುಮಕೂರು ನಗರವು ದಿನೇ ದಿನೇ ಬೆಳೆಯುತ್ತಿದ್ದು, ಇಲ್ಲಿ ಸೂಕ್ತವಾದ ಸಾಮಾನ್ಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರು ವುದರಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು…

ಮುಂದೆ ಓದಿ...

ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂಪುಟದ ಉಪಸಮಿತಿ ತಂಡ

ತುಮಕೂರು:       ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು,ಜನರಿಗೆ ಕೆಲಸ ಸೇರಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೃಷಿ   ಸಚಿವ ಶಿವಶಂಕರ್‍ರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿತು.       ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರನಹಳ್ಳಿ ಕ್ರಾಸ್‍ಗೆ ಆಗಮಿಸಿದ ತಂಡವನ್ನು ಕಾರ್ಮಿಕ ಸಚಿವ ವೆಂಕಟರವಣಪ್ಪ,ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್,ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಓ ಅನೀಸ್ ಕೆ.ಜಾಯ್ ಅವರುಗಳು ತಂಡವನ್ನು ಬರ ಮಾಡಿಕೊಂಡರು.       ಬೈರನಹಳ್ಳಿ ಕ್ರಾಸ್‍ನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೈಗೊಂಡಿರುವ ಗೋಕಟ್ಟೆಯ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರು, ಯಂತ್ರೋಪಕರಣಗಳನ್ನು ಬಳಸದೆ,ಮಾನವ ಸಂಪನ್ಮೂಲ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.    …

ಮುಂದೆ ಓದಿ...

ಮೇವು ಖರೀದಿಗಿಂತ ಸ್ಥಳೀಯವಾಗಿ ಮೇವು ಬೆಳೆಸಲು ಕೃಷಿ ಸಚಿವರ ಸಲಹೆ

ತುಮಕೂರು      ಜಿಲ್ಲೆಯಲ್ಲಿ ಮುಂದೆ ಉದ್ಬವಿಸಬಹುದಾದ ಮೇವಿನ ಕೊರತೆ ನೀಗಿಸಲು ಹೊರ ರಾಜ್ಯಗಳಿಂದ ಮೇವು ಖರೀದಿಸುವ ಮುನ್ನ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ಮೇವಿನ ಕಿಟ್ಟು ವಿತರಿಸಿ ಸ್ಥಳೀಯವಾಗಿ ಮೇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ಬರಪರಿಹಾರ ಅಧ್ಯಯನಕ್ಕೆ ಆಗಮಿಸಿದ್ದ ಸಚಿವ ಸಂಪುಟದ ಉಪಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.       ತುಮಕೂರು ಜಿಲ್ಲೆಗೆ ಇಂದು ಆಗಮಿಸಿದ್ದ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಬರ ಪರಿಹಾರ ಅಧ್ಯಯನ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮೇವು ಬ್ಯಾಂಕ್ ತೆರೆಯುವ ಬಗ್ಗೆ ಅಧಿಕಾರಿಗಳ ಪ್ರಸ್ತಾಪಕ್ಕೆ ಮೇಲಿನಂತೆ ಸಲಹೆ ನೀಡಿದ ತಂಡ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಕೆಲವು ಕಡೆಗಳಲ್ಲಿ ಈಗಾಗಲೇ ನೀಡಿರುವ ಮೇವಿನ ಬೀಜಗಳಿಂದ ಕೆಲವು ರೈತರು…

ಮುಂದೆ ಓದಿ...

ದೇವರನ್ನು ನಾವು ಮಾಡುವ ಕೆಲಸದಲ್ಲಿ ಕಾಣಬಹುದು : ನ್ಯಾಯಾಧೀಶ ಕೆ.ಎಸ್ ಭರತ್ ಕುಮಾರ್

ತುಮಕೂರು:      ದೇವರನ್ನು ನಾವು ಎಲ್ಲಿ ನೋಡಿಲ್ಲ ನೋಡಲು ಸಾಧ್ಯವಿಲ್ಲ , ನಾವು ಏನೇ ಮಾಡಿದರೂ ಆ ಕೆಲಸದಲ್ಲಿ ದೇವರನು ಕಾಣಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್  ತಿಳಿಸಿದರು.      ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಸೇವಾ ಸಮಿತಿ ಹಾಗೂ ಜಿಲ್ಲಾ ಆಸ್ಪತ್ರೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಿಯ ಯುವ ಸಪ್ತಾಹ ಕಾಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದಶಿ ಬಾಬಾಸಾಹೇಬ್ ಎಲ್. ಜಿನರಾಲ್ಕರ್ ಮಾತನಾಡಿ ರಾಷ್ಟ್ರೀಯ ಯುವ ದಿನವಾಗಿ ಸ್ವಾಮಿ…

ಮುಂದೆ ಓದಿ...

ಜಗತ್ತಿಗೆ ಹೊಸ ಪರಿಕಲ್ಪನೆಯನ್ನು ಕೊಟ್ಟವರು ಸ್ವಾಮಿ ವಿವೇಕಾನಂದರು”

 ತುಮಕೂರು:      ದೇಶದ ಭಾರತೀಯತೆಯ ನೈಜ ಅಂತ:ಸತ್ವವಿರುವುದು ಮೇಲು ಸ್ತರದ ಶ್ರೀಮಂತಿಕೆಯಲ್ಲಿ ಅಲ್ಲ. ಗುಡಿಸಲುಗಳ ಜೊಪಡಿಯಲ್ಲಿ ಎಂದು ಹೇಳಿ “ಅತಿಥಿದೇವೋ ಭವ” “ಮಾತಾಪಿತೃ ದೇವೋಭವ” ಎಂಬ ನಾಣ್ಮುಡಿಗೆ “ದೀನ ದಲಿತ ದರಿದ್ರ ನಾರಾಯಣ ದೇವೋ ಭವ” ಎಂಬ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಸ್ವಾಮಿ ವಿವೇಕಾನಂದರು ದೀನ ದಲಿತ ಬಡವನ ಏಳ್ಗೆಯೇ ನಿಜವಾದ ದೇವರನ್ನು ನಿರಕ್ಷರಕುಕ್ಷಿಗಳ ಸಂಕಷ್ಟದಲ್ಲಿರುವವರ ಸೇವೆ ಮಾಡುತ್ತ ಕಾಣು ಎಂದು ಕಣ್ಣು ತೆರೆಸಿದವರು ಸ್ವಾಮಿ ವಿವೇಕಾನಂದರು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸರವರು ತಿಳಿಸಿದರು.       ಅವರು ಸ್ವಾಮಿವಿವೇಕಾನಂದರ 156ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನಾಚರಣೆಯನ್ನು ಕುರಿತು ಮಾತನಾಡಿದರು.       ದೇಶದಲ್ಲಿರುವ ಅನೇಕ ಕಂದಚಾರಗಳು ನಿರ್ಮೂಲನೆಗಾಗಿ ಸದಾ ಚಿಂತನೆ ಮಾಡುತ್ತಿದ್ದ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯವಿರುವ ಬಂಡೆಯ ಮೇಲೆ ಕುಳಿತು ಧ್ಯಾನಸಕ್ತರಾಗುತಿದ್ದರು. ಭಾರತದ ಶುಭವೇ ನನ್ನ ಶುಭ…

ಮುಂದೆ ಓದಿ...