ಶ್ರೀಗಳ ದರ್ಶನಕ್ಕೆ ಗಣ್ಯರ ಆಗಮನ : ಹೆಲಿಪ್ಯಾಡ್ ನಿರ್ಮಾಣ

ತುಮಕೂರು:       ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ರಾಷ್ಟ್ರೀಯ ಮುಖಂಡರು ಆಗಮಿಸುವ ಹಿನ್ನೆಲೆ ನಗರದ ಹೊರಲವಯದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.      ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಲು ಮುಖಂಡರು. ಸೆಲೆಬ್ರಿಟಿಗಳು ಉದ್ಯಮಿಗಳು ರಾಷ್ಟ್ರೀಯ ಮುಖಂಡರು ಭೇಟಿ ನೀಡಲಿದ್ದಾರೆ.      ಈ ಹಿನ್ನೆಲೆಯಲ್ಲಿ ಪಂಡಿತನಹಳ್ಳಿ ಗೇಟ್ ಬಳಿ 3, ಟ್ರಕ್​ ಟರ್ಮಿನಲ್​ ಬಳಿ 2, ಮಹಾತ್ಮಗಾಂಧಿ ಸ್ಟೇಡಿಯಂ ಬಳಿ 1, ತುಮಕೂರು ವಿವಿ ಆವರಣದಲ್ಲಿ 4 ಹೀಗೆ ಒಟ್ಟು 10 ಹೆಲಿಪ್ಯಾಡ್​ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ 10 ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುತ್ತಿದೆ.

ಮುಂದೆ ಓದಿ...

ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ನೀಡಿದ ಡಾ.ರವೀಂದ್ರ

ತುಮಕೂರು:      ಶ್ರೀಗಳು ಆಸ್ಪತ್ರೆಯಲ್ಲಿ ಹೇಗಿದ್ದಾರೋ ಹಾಗೆ ಇದ್ದಾರೆ, ನಮ್ಮ ನಿರೀಕ್ಷೆಗೆ ತಕ್ಕಂತೆ ಗುಣಮುಖರಾಗಿಲ್ಲ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಹೇಳಿದರು.        ದೇಹದಲ್ಲಿ 2.8 ಪ್ರೊಟೀನ್ ಅಂಶವಿದೆ, ನಿಮಿಷಗಳ ಕಾಲ ಉಸಿರಾಡುತ್ತಾರೆ. ಕೆಲವೊಮ್ಮೆ ಕೃತಕ ಉಸಿರಾಟವನ್ನು ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಡೆದ ಒಂದು ತಿಂಗಳ ಬಳಿಕ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವೆಂದು ತಿಳಿಸಿದರು.          ಅವರ ವಯಸ್ಸು ಜಾಸ್ತಿ ಆಗಿರುವುದರಿಂದ ಗುಣಮುಖರಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲದೆ ಶ್ವಾಸಕೋಶ ಹಾಗೂ ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಂಡಿರುವುದರಿಂದ ತೊಂದರೆ ಉಂಟಾಗುತ್ತಿದೆ ಎಂದು ಮಾಧ್ಯಮದವರಿಗೆ ಡಾಕ್ಟರ್ ರವೀಂದ್ರ ಮಾಹಿತಿ ನೀಡಿದ್ದಾರೆ.

ಮುಂದೆ ಓದಿ...

ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್‌ವೈ

 ತುಮಕೂರು:      ನಗರದ ಸಿದ್ದಗಂಗಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೇಟಿ ನೀಡಿ ಈ ಶತಮಾನದ ಸಿದ್ದಿಪುರುಷ, ತ್ರಿವಿಧ ದಾಸೋಹಮೂರ್ತಿ, ಕಾಯಕಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯವನ್ನು ವಿಚಾರಿಸಿದರು.       ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಶ್ರೀಕ್ಷೇತ್ರದ ಹಳೇಮಠದ ಕೊಠಡಿಗೆ ಶಾಸಕ ಎಸ್. ಸುರೇಶ್‌ಕುಮಾರ್, ಬಿ.ವೈ.ವಿಜಯೇಂದ್ರರವರೊಂದಿಗೆ ತೆರಳಿದ ಯಡಿಯೂರಪ್ಪನವರು ಶ್ರೀಗಳ ದರ್ಶನ ಪಡೆದು ಖುದ್ಧ ಆರೋಗ್ಯವನ್ನು ವಿಚಾರಿಸಿದರು.       ಹಳೇ ಮಠದ ಕೊಠಡಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು, ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಶ್ರೀಗಳ ಆರೋಗ್ಯ, ಅವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದು ಸುದೀರ್ಘವಾಗಿ ಚರ್ಚೆ ನಡೆಸಿದರು.       ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆದಾಡುವ ದೇವರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ದರ್ಶನ ಮಾಡಿ ಬಂದಿದ್ದೇವೆ. ಆಸ್ಪತ್ರೆಯಲ್ಲಿ…

ಮುಂದೆ ಓದಿ...