ಕಾಫಿ ಕುಡಿದು ತಾಯಿ, ಮಗಳು ದುರ್ಮರಣ

ಚಿಕ್ಕಬಳ್ಳಾಪುರ:       ಕಾಫಿ ಕುಡಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.       ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಅಕ್ಕುಲಮ್ಮ (70) ಮತ್ತು ನರಸಮ್ಮ (50) ಕಾಫಿ ಕುಡಿದು ಮೃತಪಟ್ಟಿದ್ದಾರೆ. ನರಸಮ್ಮನ ಮೊಮ್ಮಕ್ಕಳಾದ ಅರವಿಂದ್​ (7) ಮತ್ತು ಆರತಿ (5) ಅಸ್ವಸ್ಥರಾಗಿದ್ದು ಅವರನ್ನು ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.       ಮೃತರು ಗ್ರಾಮದ ಅಂಗಡಿಯೊಂದರಿಂದ ಕಾಫಿಪುಡಿ ತಂದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಕಾಫಿ ಸೇವಿಸಿದ ನಂತರ ನಾಲ್ವರೂ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಅಕ್ಕುಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ.  ಕಾಫಿಯಲ್ಲಿ ವಿಷ ಬೆರತಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ...

12 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:      ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, ಮತ್ತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.       ಎಂ.ಕೆ.ಅಯ್ಯಪ್ಪ, ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ. (ಆರ್​ಡಿಪಿಆರ್​ಡಿ).  ಜಿ.ಎನ್.ಶಿವಮೂರ್ತಿ, ಆಯುಕ್ತರು, ಉದ್ಯಮ ಮತ್ತು ಲೈವ್ಲಿ ಹುಡ್ ಬೆಂಗಳೂರು.  ಕೆ.ಜಿ.ಶಾಂತಾರಾಂ, ಆಯುಕ್ತರು, ಕರ್ನಾಟಕ ಗೃಹ ಮಂಡಳಿ. ಆರ್.ರಾಮಚಂದ್ರನ್, ಹೆಚ್ಚುವರಿ ಆಯುಕ್ತರು, ಬಾಗಲಕೋಟೆ. ಡಾ. ಕೆ.ವಿ.ರಾಜೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಬೆಳಗಾವಿ. ವೆಂಕಟ್ ರಾಜಾ, ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ.  ಫೌಜೀಯಾ ತರನಂ, ಜನರಲ್ ಮ್ಯಾನೇಜರ್, ಕೃಷ್ಣ ಮೇಲ್ದಂಡೆ ಯೋಜನೆ, ಬಾಗಲಕೋಟೆ. ಲಕ್ಷ್ಮೀಕಾಂತ ರೆಡ್ಡಿ ಜಿ., ಜನರಲ್ ಮ್ಯಾನೇಜರ್, ಬಿಎಂಆರ್​ಸಿಎಲ್ ಬೆಂಗಳೂರು. ನಿತೀಶ್ ಕೆ., ಸಿಇಓ, ಜಿಲ್ಲಾ ಪಂಚಾಯತ್, ಬಳ್ಳಾರಿ. ಕೆ.ಎಂ. ಜಾನಕಿ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಪೆದ್ದಪ್ಪಯ್ಯ ಆರ್.ಎಸ್.,…

ಮುಂದೆ ಓದಿ...

ಶ್ರೀಗಳ ಆರೋಗ್ಯದಲ್ಲಿ ಗಣನೀಯ ಬದಲಾವಣೆ : ಎಸ್.ಪಿ.ಮುದ್ದ ಹನುಮೇಗೌಡ

ತುಮಕೂರು:       ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಆಗಿದೆ. ಸ್ವಯಂ ಉಸಿರಾಡುವಷ್ಟು ಶಕ್ತರಾಗಿದ್ದು, ಭಕ್ತರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಂಸದ ಎಸ್.ಪಿ.ಮುದ್ದ ಹನುಮೇಗೌಡ ತಿಳಿಸಿದ್ದಾರೆ.       ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶ್ರೀಮಠಕ್ಕೆ ಸ್ವಾಮೀಜಿ ಅವರನ್ನು ಸ್ಥಳಾಂತರಿಸಿದ ನಂತರ ಅವರ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ಇದಕ್ಕೂ ನಿಜಕ್ಕೂ ವೈದ್ಯ ಲೋಕದ ವಿಸ್ಮಯಕ್ಕೆ ಕಾರಣವಾಗಿದೆ.ಅವರ ದೇಹದಲ್ಲಿ ಚಲನಾಶಕ್ತಿ ಕಾಣುತ್ತಿದೆ.ಕೃತಕ ಉಸಿರಾಟ ತೆಗೆದ ನಂತರವೂ ಸ್ವಯಂ ಉಸಿರಾಡುವಷ್ಟು ಶಕ್ತಿ ಪಡೆದುಕೊಂಡಿದ್ದು,ಇತರೆ ಎಲ್ಲಾ ಪ್ಯಾರಾಮೀಟರ್ಸ್‍ನಲ್ಲಿಯೂ ಸ್ವಾಮೀಜಿಗಳ ಆರೋಗ್ಯ,ನಿನ್ನೆಗಿಂತ ಇಂದು ಸುಧಾರಣೆಯ ಹಂತದಲ್ಲಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದು,ಮಠದ ಭಕ್ತನಾಗಿ ನನಗೂ, ನನ್ನಂತಹ ಲಕ್ಷಾಂತರ ಜನರಿಗೆ ಇದು ಒಳ್ಳೆಯ ಸುದ್ದಿ ಎಂದರು.       ಸ್ವಾಮೀಜಿಗಳ ಈ…

ಮುಂದೆ ಓದಿ...

ರೆಸಾರ್ಟ್ ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ

ತುಮಕೂರು:        ರಾಜ್ಯದ 156 ತಾಲೂಕುಗಳಲ್ಲಿ ಬರಗಾಲವಿದ್ದು ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ನರಳುವಂತಾಗಿದ್ದು ಮೇವಿಲ್ಲದೆ ಜಾನುವಾರುಗಳು ಪರಿತಪಿಸುತ್ತಿವೆ. ಹೀಗಾಗಿ ಕೂಡಲೇ ಗೋಶಾಲೆಗಳನ್ನು ತೆರೆದು ಮೂಕಪ್ರಾಣಿಗಳ ನೆರವಿಗೆ ಬರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯÀ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು. ಜಿಲ್ಲೆಯ ಪಾಲಿನ ಹೇಮಾವತಿ ನಾಲೆಯ 25 ಟಿಎಂಸಿ ನೀರಿನ ಪಾಲಿನಲ್ಲಿ 15 ಟಿಎಂಸಿ ನೀರು ಹರಿಯುತ್ತಿದ್ದು ಲೆಕ್ಕದಲ್ಲಿ ಮಾತ್ರ ತೋರಿಸಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಮುಂದಾಗಬೇಕೆಂದರು.       ಬರ ಪರಿಹಾರ ಕಾಮಗಾರಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯ 10 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದ ಪರಿಸ್ಥಿತಿಯೂ ಬೇರೆಯಾಗಿಲ್ಲ. ಹೀಗಿದ್ದರೂ ರಾಜಕಾರಣಿಗಳು…

ಮುಂದೆ ಓದಿ...

ಫೆ.2, 3ರಂದು ತುಮಕೂರಿನಲ್ಲಿ ಬೃಹತ್ ಉದ್ಯೋಗ ಮೇಳ

 ತುಮಕೂರು:       ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬರುವ ಫೆಬ್ರುವರಿ 2 ಹಾಗೂ 3ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಮೇಳದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜರುಗಿದ ಮೇಳದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮೇಳದಲ್ಲಿ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಉದ್ಯೋಗಾರ್ಥಿಗಳು ಭಾಗವಹಿಸಬಹುದಾಗಿದೆ. ಈ ಮೇಳವನ್ನು ಯಶಸ್ವಿಯಾಗಿಸುವ ಸಲುವಾಗಿ ಸ್ವಾಗತ, ವೇದಿಕೆ, ಆರೋಗ್ಯ ಮತ್ತು ಸ್ವಚ್ಛತಾ, ಆಹಾರ, ಸಮನ್ವಯ ಸಮಿತಿ ಸೇರಿದಂತೆ ಮತ್ತಿತರ ಉಪ ಸಮಿತಿಗಳನ್ನು ರಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯಗಳನ್ನು ನಿಯೋಜಿಸಿದರು.       ನಿರುದ್ಯೋಗಿಗಳಿಗೆ ಸದುಪಯೋಗವಾಗುವಂತೆ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಹಾಗೂ ತಾ.ಪಂ.…

ಮುಂದೆ ಓದಿ...

ವೇಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕ

 ತುಮಕೂರು:       ಜೀವನದಲ್ಲಿ ವೇಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾ ರೆಡ್ಡಿ ಜನಸಂಘಗಳ ಸಹಯೋಗದಲ್ಲಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಮನರು 15ನೇ ಶತಮಾನದಲ್ಲಿಯೇ ಸಮಾಜವನ್ನು ತಿದ್ದಿ-ತೀಡಿ ಸರಿದಾರಿಗೆ ತಂದ ಮಹಾ ದಾರ್ಶನಿಕರು. ನಾವಿಂದು ಆಧುನಿಕತೆಯ ತುತ್ತ ತುದಿಯಲ್ಲಿದ್ದರೂ, ವೈಜ್ಞಾನಿಕವಾಗಿ ಮುಂದುವರೆದಿದ್ದರೂ ಇವರ ಚಿಂತನೆಗಳು ಇಂದಿಗೂ ಮಾನ್ಯವಾಗಿವೆ. ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಯೋಗ, ಕುಟುಂಬ, ಧರ್ಮ-ಅಧರ್ಮ, ಜ್ಞಾನ-ಅಜ್ಞಾನ, ಮುಕ್ತಿ ಮಾರ್ಗ, ಸದ್ಗತಿ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಕುರಿತು 4000ಕ್ಕಿಂತ ಹೆಚ್ಚು ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಸುಧಾರಣಾ ತತ್ವ,…

ಮುಂದೆ ಓದಿ...

ಸರಕಾರಿ ಸಂಸ್ಥೆಗಳಷ್ಟೇ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ:ಶಾಸಕ ಜಿ.ಬಿ.ಜೋತಿಗಣೇಶ್

ತುಮಕೂರು:       ಶಿಕ್ಷಣ ಕ್ಷೇತ್ರಕ್ಕೆ ಸರಕಾರಿ ಸಂಸ್ಥೆಗಳಷ್ಟೇ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ನಗರದ ಬಾಲಭವನದಲ್ಲಿ ಎಸ್.ಹೆಚ್.ವಿ ಶಾಲೆ ವತಿಯಿಂದ ಆಯೋಜಿಸಿದ್ದ ಸ್ಪೂರ್ತಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು , ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದರೆ ಸರಕಾರಿ ಶಾಲೆಗಳಿಂದ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಸಹ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿವೆ. ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದರು.       ನಾನು ಇಂಜಿನಿಯರ್ ಕಲಿಯುವಾಗ ಇದ್ದ 25 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4-5 ಸರಕಾರಿ ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದವು ಖಾಸಗಿ ಶಾಲೆಗಳು,ಇವುಗಳು ಇಲ್ಲದಿದ್ದರೆ ಇನ್‍ಪೋಸಿಸ್ ನಾರಾಯಣಮೂರ್ತಿ ಅಂತಹವರು ಕಲಿಯಲು ಸಾಧ್ಯವಾಗು ತ್ತಿರಲಿಲ್ಲ. ಸಾಮಾನ್ಯ ವರ್ಗದ ಜನರು ಶಿಕ್ಷಣ ಪಡೆಯುವಲ್ಲಿ ಖಾಸಗಿ…

ಮುಂದೆ ಓದಿ...