ಕಾಫಿ ಕುಡಿದು ತಾಯಿ, ಮಗಳು ದುರ್ಮರಣ

ಚಿಕ್ಕಬಳ್ಳಾಪುರ: 

     ಕಾಫಿ ಕುಡಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

      ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಅಕ್ಕುಲಮ್ಮ (70) ಮತ್ತು ನರಸಮ್ಮ (50) ಕಾಫಿ ಕುಡಿದು ಮೃತಪಟ್ಟಿದ್ದಾರೆ. ನರಸಮ್ಮನ ಮೊಮ್ಮಕ್ಕಳಾದ ಅರವಿಂದ್​ (7) ಮತ್ತು ಆರತಿ (5) ಅಸ್ವಸ್ಥರಾಗಿದ್ದು ಅವರನ್ನು ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಮೃತರು ಗ್ರಾಮದ ಅಂಗಡಿಯೊಂದರಿಂದ ಕಾಫಿಪುಡಿ ತಂದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಕಾಫಿ ಸೇವಿಸಿದ ನಂತರ ನಾಲ್ವರೂ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಅಕ್ಕುಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ.  ಕಾಫಿಯಲ್ಲಿ ವಿಷ ಬೆರತಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(Visited 4 times, 1 visits today)

Related posts

Leave a Comment