ಶಾಸಕ ಡಿ.ಸಿ.ಗೌರಿಶಂಕರ್ ರಿಂದ ೨೫ ಲಕ್ಷ ರೂ. ಹಫ್ತ ವಸೂಲಿ : ಸುರೇಶ್‌ಗೌಡ ಆರೋಪ

ತುಮಕೂರು:       ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಅವರು ಕಲ್ಲು ಗಣಿಗಾರಿಕೆ ಮಾಲೀಕರಿಂದ ೨೫ ಲಕ್ಷ ರೂ. ಹಫ್ತ ವಸೂಲಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದ್ದಾರೆ.      ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಸಿ.ಗೌರಿಶಂಕರ ಅವರು ಮತ್ತು ಅವರ ಹಿಂಬಾಲಕರಾದ ಹರಳೂರು ಗ್ರಾಮದ ರುದ್ರೇಶ ಮತ್ತು ಸಂಗಡಿಗರು ದಿನಾಂಕ 16-01-2019 ರಂದು ರಾತ್ರಿ 8.30 ಇಂದ 9 ಗಂಟೆ ಸಮಯದಲ್ಲಿ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಅಕ್ರಮವಾಗಿ ನುಗ್ಗಿ ಕಲ್ಲು ದಿಮ್ಮಿ ತುಂಬಿದ್ದ 6 ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಗೆ ಬಾಟಲ್ ತೋರಿಸಿ ತಿವಿಯುವುದಾಗಿ ಬೆದರಿಸಿ ಅದೇ ಚಾಲಕರಿಂದ ಗ್ರಾನೈಟ್ ಮಾಲೀಕರಿಗೆ ಪೋನು ಮಾಡಿಸಿದ ಶಾಸಕರು ಗ್ರಾನೈಟ್ ಮಾಲೀಕರಿಗೆ ರೂ 50 ಲಕ್ಷ ನೀಡುವಂತೆ ಬೇಡಿಕೆ…

ಮುಂದೆ ಓದಿ...

ಶ್ರೀಗಳ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ ರೂಪಿಸಲು ಆಯವ್ಯಯದಲ್ಲಿ ಮಂಡನೆ

 ತುಮಕೂರು:       ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಸರ್ಕಾರದ ವತಿಯಿಂದ ಕಾರ್ಯಕ್ರಮವೊಂದನ್ನು ರೂಪಿಸಲು ಬರುವ ಆಯವ್ಯಯದಲ್ಲಿ ಮಂಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.       ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗೈಕ್ಯ ಪರಮ ಪೂಜ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿಯವರ ಅವರ ನೆನಪು ಉಳಿಯುವಂತಹ ಸರ್ಕಾರದಿಂದ ಯಾವುದಾದರೊಂದು ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಲು ಬರುವ ಆಯವ್ಯಯದಲ್ಲಿ ಮಂಡಿಸಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.       ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ 5 ದಿನಗಳು ಕಳೆದಿದ್ದು, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡಿರುವ ಶ್ರೀಗಳಂತಹ ಪುಣ್ಯ ಪುರುಷರು ಮತ್ತೊಮ್ಮೆ ಸಾರ್ವಜನಿಕ…

ಮುಂದೆ ಓದಿ...

ಶಿಕ್ಷಣ ಸಚಿವರ ನೇಮಕಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯ!

 ತುಮಕೂರು:       ಪ್ರಾಥಮಿಕ ಶಿಕ್ಷಣ ಸಚಿವರ ನೇಮಕ ಸೇರಿದಂತೆ ವಿವಿಧ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.       ಸಚಿವರಿಲ್ಲದೇ ಶಿಕ್ಷಣ ಇಲಾಖೆ ನಿರ್ಜೀವವಾಗಿದ್ದು ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಪರೀಕ್ಷೆಗಳು ಹತ್ತಿರವಾಗುತ್ತಿದ್ದರು, ಶಿಕ್ಷಣ ಸಚಿವರನ್ನು ನೇಮಿಸದೇ ರಾಜ್ಯ ಸರ್ಕಾರ ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ಕಳೆದ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಈ ಭಾರೀ ಪರೀಕ್ಷೆಗಳು ಸಮೀಪಿಸುತ್ತಿದ್ದರು, ಇಲಾಖೆಗೆ ಸಚಿವರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮಹಮ್ಮದ್ ತಪ್ಸೀರ್ ಅಸಮಾಧಾನ ವ್ಯಕ್ತಪಡಿಸಿದರು.      …

ಮುಂದೆ ಓದಿ...

2019-20ನೇ ಸಾಲಿನ ಆಯ-ವ್ಯಯ ಮಂಡನೆ

ತುರುವೇಕೆರೆ:       ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ಶುಕ್ರವಾರ 2019-20ನೇ ಸಾಲಿನ 11.15.35.000ಕೋಟಿ ಆಯ-ವ್ಯಯವನ್ನು ಮಂಡಿಸಲಾಯಿತು.       ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬಜೆಟ್ ಸಭೆ ಫ್ರಾರಂಭವಾದ ನಂತರ ನಾಲ್ಕನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್ ಬಜೆಟ್ ಪ್ರತಿ ಹಿಡಿದು ಸಭೆಯಲ್ಲಿ ವಿವರವಾಗಿ ಮಂಡಿಸಿದರು.       2019-20ನೇ ಸಾಲಿನ ಒಟ್ಟು ನಿರೀಕ್ಷಿತ ಆದಾಯ 11.29.00.585ಕೋಟಿ ರೂಪಾಯಿಗಳಾಗಿದ್ದು, 11.15.35.000ಕೋಟಿ ವಿವಿಧ ಕಾರ್ಯಗಳಿಗೆ ಖರ್ಚುಮಾಡುವ ಯೋಜನೆಯಿದ್ದು, 13.65.585.ಲಕ್ಷರೂಪಾಯಿಗಳು ಉಳಿತಾಯವಾಗಲಿದೆ ಎಂದು ತಿಳಿಸಿದರು.       ನಂತರ ಆರಂಭಗೊಂಡ ಬಜೆಟ್ ಮೇಲಿನ ಕರ್ಚ-ವೆಚ್ಚದ ಚರ್ಚೆಯಲ್ಲಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಹಲವು ವರ್ಷಗಳಿಂದ ನೆಲಗುದಿಗೆ ಬಿದ್ದಿರುವ ವಾಣಿಜ್ಯ ಸಂಕೀರ್ಣ ಮುಂದುವರಿದ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಬಜೆಟ್‍ನಲ್ಲಿ 1.90.00.000ರೂಪಾಯಿಗಳು ಮೀಸಲಿಟ್ಟಿರುವುದು ಸಂತಸದ ವಿಚಾರ.  ಕಾಮಗಾರಿ…

ಮುಂದೆ ಓದಿ...

ಶಿಷ್ಟಾಚಾರ ಪಾಲಿಸದ ಪ.ಪಂ. ಮುಖ್ಯಾಧಿಕಾರಿಗೆ ಶಾಸಕರ ಕ್ಲಾಸ್

 ತುರುವೇಕೆರೆ:       ಪಟ್ಟಣ ಪಂಚಾಯಿತಿ ಬಜೆಟ್ ಸಭೆಯ ಮುಕ್ತಾಯಕ್ಕೂ ಮುನ್ನ ಸದಸ್ಯರುಗಳ ಸಲಹೆಯನ್ನು ಕೇಳದೆ ಮತ್ತು ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಆಗಮಿಸಿದ ತಹಶೀಲ್ದಾರ್‍ಗೆ ಸ್ವಾಗತ ಕೋರದೆ ಹಾಗೂ ಸಭೆಯಲ್ಲಿ ವಂದನಾರ್ಪಣೆ ಮಾಡದೆ ಸಭೆಯನ್ನು ಅತುರಾತುರವಾಗಿ ಮುಕ್ತಾಯಕ್ಕೆ ಮುಂದಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಶಾಸಕರು ಶಿಷ್ಠಾಚಾರದ ಪಾಠ ಮಾಡಿದರು.       ಬಜೆಟ್ ಸಭೆಯಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಬಸುಮ್, ಸದಸ್ಯರುಗಳಾದ ಶಶಿಶೇಕರ್, ಕೆ.ಟಿ.ಶಿವಶಂಕರ್, ಶ್ರೀನಿವಾಸ್, ನದೀಂ, ನವ್ಯಪ್ರಕಾಶ್, ಮಾನಸಪ್ರಸನ್ನ, ನೇತ್ರಾವತಿ ರಂಗಸ್ವಾಮಿ, ರುದ್ರೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುಂಜುಳಾದೇವಿ, ಇಂಜಿನಿಯರ್ ಸತ್ಯನಾರಯಣ್, ಸಿಬ್ಬಂದಿವರ್ಗ ಹಾಜರಿದ್ದರು.  

ಮುಂದೆ ಓದಿ...