ಸಮಷ್ಟಿ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣಗಳು ಹೊಸ ಭರವಸೆಯಂತೆ ಒದಗಿ ಬಂದಿವೆ

ತುರುವೇಕೆರೆ :       ‘ಧರ್ಮ ಮತ್ತು ರಾಜಕಾರಣಗಳು ಪರಸ್ಪರ ಕೈಜೋಡಿಸಿ ಉಂಟು ಮಾಡುತ್ತಿರುವ ಸಮಕಾಲೀನ ಭಾರತದ ತಲ್ಲಣ ಮತ್ತು ಸಂಘರ್ಷಮಯ ಸನ್ನಿವೇಶ ಕವಿ, ಕಲಾವಿದ ಮತ್ತು ಚಿಂತಕನಿಗೆ ತೀವ್ರ ಸ್ವರೂಪದ ಬೆದರಿಕೆ ಹಾಗು ಆತಂಕ ಸೃಷ್ಟಿಸಿದೆ. ಕವಿಯಾದವನು ಇದನ್ನು ಸವಾಲಾಗಿ ಸ್ವೀಕರಿಸಿ ಮಹತ್ವಕಾಂಕ್ಷೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದು ಸಾಹಿತಿ ಕೆ.ಪಿ.ನಟರಾಟ್ ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.       ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದದಲ್ಲಿ ಜರುಗಿದ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಳಕೆರೆಸುಬ್ರಹ್ಮಣ್ಯಂ ವೇದಿಕೆಯಲ್ಲಿ ಎರಡನಢ ದಿನ ನಡೆದ ನನ್ನ ಕವಿತೆ ನನ್ನದು ಎಂಬ ಕವಿ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.       ಫೇಸ್ ಬುಕ್‍ನಂತಹ ಡಿಜಿಟಲ್ ಸ್ವರೂಪದ ಸಾಮಾಜಿಕ ಜಾಲ ತಾಣಗಳ ಮಾದ್ಯಮಗಳು ಬರೆಯುವ, ಚಿಂತಿಸುವ ಅನುಸಂಧಾನ ಮಾಡುವ ಜ್ಞಾನ ವಿನಿಮಯದ…

ಮುಂದೆ ಓದಿ...

ಬುದ್ಧನ ಕಾರುಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಪಾಲಿಸಿದ ಶ್ರೀಗಳು ವಿಶ್ವರತ್ನಕ್ಕೆ ಸಮಾನ

 ತುಮಕೂರು :       ಬುದ್ಧನ ಕಾರಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ವಿಶ್ವರತ್ನಕ್ಕೆ ಸಮಾನ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.       ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಂದು ಏರ್ಪಡಿಸಿದ್ದ ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ನೆರವನ್ನು ಕೋರದ ಶ್ರೀಗಳು:       ನಾಡಿನ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಗಳ ಸೇವೆ ಅನನ್ಯ. ಲಕ್ಷಾಂತರ ದೀನ-ದಲಿತರು, ಕಡು ಬಡ ಮಕ್ಕಳಿಗೆ ಶಿಕ್ಷಣ, ಅನ್ನ ಹಾಗೂ ವಸತಿ ದಾಸೋಹ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಅವರು ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸರ್ಕಾರದ ನೆರವನ್ನು ಕೋರಿಲ್ಲ. ಪೂಜ್ಯರು ಯಾವುದೇ ರೀತಿಯ ಪ್ರಚಾರಕ್ಕೊಳಗಾಗದೆ 1930 ರಿಂದ ತಮ್ಮ ಅಂತಿಮ ದಿನಗಳವರೆಗೂ…

ಮುಂದೆ ಓದಿ...