ಮೇಗಲಹಳ್ಳಿ ಗ್ರಾಮದ ಮನೆ ಬಾಗಿಲಿಗೆ ಕುಡಿಯುವ ನೀರು ಪೂರೈಕೆ

 ತುಮಕೂರು:       ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮೇಗಲಹಳ್ಳಿ ಗ್ರಾಮದ ಮನೆಗಳ ಬಾಗಿಲಿಗೆ ಕ್ಯಾನ್‍ಗಳ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.       ಮಂಗಳವಾರ ಪಾವಗಡ ತಾಲೂಕು  ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗೆ ಮೇಗಲಹಳ್ಳಿಯಲ್ಲಿರುವ ಎಲ್ಲ ಮನೆಗಳ ಬಾಗಿಲಿಗೆ ಕುಡಿಯುವ ನೀರನ್ನು ಕ್ಯಾನ್ ಮೂಲಕ ಸರಬರಾಜು ಮಾಡಲು ನಿರ್ದೇಶನ ನೀಡಲಾಗಿತ್ತು. ಮೇಗಲಹಳ್ಳಿಯಲ್ಲಿದ್ದ ಆರ್.ಓ. ಪ್ಲಾಂಟ್ ಕೆಟ್ಟು ಹೋಗಿದ್ದರಿಂದ ಗ್ರಾಮಸ್ಥರು 1 ಕಿ.ಮೀ. ದೂರದಿಂದ ಕುಡಿಯುವ ನೀರು ತರುತ್ತಿರುವ ಬಗ್ಗೆ ಕಳೆದ ಫೆಬ್ರುವರಿ 2ರಂದು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬರ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗಿತ್ತು. ಕೂಡಲೇ ಕ್ರಮ…

ಮುಂದೆ ಓದಿ...

ಕೇಂದ್ರ ಸರ್ಕಾರ ಕೃಷಿ ಕಾರ್ಮಿಕರ ಬದುಕನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ : ಮರುಳೀಧರ್ ಹಾಲಪ್ಪ

ಗುಬ್ಬಿ :       ಕೆಲವು ನಿಯಮಗಳೊಂದಿಗೆ ರೈತರಿಗೆ 6 ಸಾವಿರ ರೂಗಳನ್ನು ನೀಡಲು ಮುಂದಾದ ಕೇಂದ್ರ ಸರ್ಕಾರ ಪುಡಿ ಜಮೀನಿನ ರೈತರು ಹಾಗೂ ಕೃಷಿ ಕಾರ್ಮಿಕರ ಬದುಕನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಮರುಳೀಧರ್ ಹಾಲಪ್ಪ ಟೀಕಿಸಿದರು.       ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿದ ಕಾರ್ಯಕರ್ತರು, ಗಾಂಧೀಜಿ ಅವರನ್ನು ಅವಮಾನಿಸಿದ ಘಟನೆಯನ್ನು ಖಂಡಿಸಿ ಕಪ್ಪುಪಟ್ಟಿ ಪ್ರದರ್ಶನದೊಂದಿಗೆ ಮೌನ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು 2.5 ಹೆಕ್ಟೇರ್ ಪ್ರದೇಶ ಹೊಂದಿದ ರೈತರನ್ನು ಮಾತ್ರ ಪರಿಗಣಿಸಿ ಅತಿ ಸಣ್ಣ ರೈತರನ್ನು ಕಡೆಗಣಿಸಿರುವ ಜತೆಗೆ ಅವಿಭಕ್ತ ಕುಟುಂಬದಲ್ಲಿನ ರೈತರನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅವೈಜ್ಞಾನಿಕ ಅನಿಸಿದೆ ಎಂದರು.       ಕೇಂದ್ರ ಬಜೆಟ್‍ನಲ್ಲಿ ಸಾಕಷ್ಟು ನೂನ್ಯತೆಗಳಿವೆ. ಸಮಾಜ ಕಲ್ಯಾಣಕ್ಕೆ 72 ಸಾವಿರ ಕೋಟಿ ರೂ ಬಳಸಲಾಗಿದೆ. ಆದರೆ ರಾಜ್ಯ ಸರ್ಕಾರವೇ…

ಮುಂದೆ ಓದಿ...

ಇಸ್ರೋ : 100 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕರ್ ನಿರ್ಮಾಣ!

 ತುಮಕೂರು:        ನಗರದ ಇಸ್ರೋ ಕ್ಯಾಂಪಸ್‍ನಲ್ಲಿಂದು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 15 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಟ್ಯಾಂಕರ್‍ಗಳ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಲಾಯಿತು.       ಭೂಮಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ತುಮಕೂರಿನಲ್ಲಿ ವಿಶ್ವ ವಿಖ್ಯಾತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲೋಕಸಭಾ ಅಧಿವೇಶನವನ್ನು ಬಿಟ್ಟು ಬಂದಿದ್ದೇನೆ ಎಂದು ತಿಳಿಸಿದರು.       ದಿವಂಗತ ಕೆ.ಲಕ್ಕಪ್ಪನವರ ಪರಿಶ್ರಮದಿಂದ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಟಿ ಕಾರ್ಖಾನೆ ದುರಾದೃಷ್ಠವಶಾತ್ ನಷ್ಟವುಂಟಾಗಿ ಮುಚ್ಚಲ್ಪಟ್ಟಾಗ ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮನ ಒಲಿಸಿ ಇಸ್ರೋ ಸಂಸ್ಥೆಯನ್ನು ತುಮಕೂರಿಗೆ ತರುವಲ್ಲಿ ಸಹಕರಿಸಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹಾಗೂ ಅವರ ತಂಡದವರ…

ಮುಂದೆ ಓದಿ...