ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ 0.25ರಷ್ಟು ಅಂಕ ಇಳಿಕೆ ಮಾಡಿದೆ. ಇದರಿಂದಾಗಿ ಈ ಹಿಂದೆ ಇದ್ದ ಶೇ.6.50 ರೆಪೋ ದರ ಈಗ ಶೇ.6.25ಕ್ಕೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಗೃಹ, ಮೋಟಾರು ವಾಹನ ಸಾಲಗಳ ಮೇಲಿನ ಬಡ್ಡಿದರ ಕಡಿಮೆಯಾಗಲಿವೆ. ಆರ್ಬಿಐನ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಆರ್ಬಿಐ ಬಿಡುಗಡೆ ಮಾಡಿದ ಮೊದಲ ವಿತ್ತೀಯ ನೀತಿ ಇದಾಗಿದೆ. ಆರು ಸದಸ್ಯರನ್ನು ಒಳಗೊಂಡ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರಕ್ಕೆ ಒಪ್ಪಿಗೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು. ಆರ್ಬಿಐನ ಈ ನಿರ್ಧಾರದಿಂದ ಗೃಹ, ಮೋಟಾರು ವಾಹನ ಸಾಲ ಪಡೆಯುವ ಆಕಾಂಕ್ಷಿಗಳಿಗೆ ಇಎಂಐ ಹೊರೆ ಕಡಿಮೆಯಾಗಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಆರ್ಬಿಐನ ಈ ದರ ಇಳಿಕೆ ನೀತಿಯನ್ನು ಅನುಸರಿಸಿ…
ಮುಂದೆ ಓದಿ...Day: February 7, 2019
ಅನ್ನದಾಸೋಹ, ಜ್ಞಾನ ದಾಸೋಹ ಮುಖ್ಯ – ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ತುಮಕೂರು: ಎಲ್ಲಿ ಜ್ಞಾನ ಇರುತ್ತದೆಯೇ, ಆ ಜ್ಞಾನವನ್ನು ಹುಡುಕಿಕೊಂಡು ನಾವು ಜ್ಞಾನ ಇರುವಲ್ಲಿಗೆ ಹೋಗಬೇಕು. ಆಗ ಜ್ಞಾನ ಎಲ್ಲರಿಗೂ ಸಿಗುತ್ತದೆ. ಇಷ್ಟು ವರ್ಷ ನಮ್ಮ ನಡುವೆ ನೂರಾಹನ್ನೊಂದು ವರ್ಷ ಬದುಕಿದ್ದ ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರು ನಡೆದ ದಾರಿಯಲ್ಲಿ ನಡೆದರೆ ಸಾಕು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತುಮಕೂರಿನ ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ಸಓಮೇಶ್ವರಪುರಂ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ 500ನೇ ಸಾಪ್ತಾಹಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಬುತ್ತಿ ಸತ್ಸಂಗದ ಬಗ್ಗೆ ನನಗೆ ತುಂಬಾ ಗೌರವ ಇದೆ. ಈ ಸಂಘದ ಪಿ.ಶಾಂತಿಲಾಲ್ ಮತ್ತು ಟಿ.ಮುರಳೀಕೃಷ್ಣಪ್ಪ ಇಬ್ಬರು ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳು ಅತ್ಯಂತ ಶ್ರೇಷ್ಠ ಎಂದು ಹೇಳಿದರು. …
ಮುಂದೆ ಓದಿ...ಮನೆಗೆ ನುಗ್ಗಿ 10 ಸಾವಿರ ದೋಚಿದ ಕಳ್ಳರು
ಗುಬ್ಬಿ : ಮನೆ ಬಾಗಿಲು ಬೀಗ ಮುರಿದು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, ನಗದು ದೋಚಿದ ಘಟನೆ ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಟವಿ, 10 ಸಾವಿರ ರೂ. ನಗದು ಸೇರಿದಂತೆ ಕೆಲ ಗೃಹೋಪಯೋಗಿ ವಸ್ತುಗಳನ್ನು ದೋಚಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸುಳಿವು ಪಡೆದು ಈ ಕೃತ್ಯವೆಸಗಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದೆ ಓದಿ...