ದೆಹಲಿ: ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಮರಳುತ್ತಲೇ ಟ್ವಿಟ್ ಮಾಡಿದ ಜೇಟ್ಲಿ, “ಮನೆಗೆ ಮರಳಿರುವುದಯ ಸಂತಸ ನೀಡಿದೆ” ಎಂದು ತಿಳಿಸಿದ್ದಾರೆ. ಜೇಟ್ಲಿ (66) ಅವರು ಅನಾರೋಗ್ಯ ಕಾರಣದಿಂದ ನಾರ್ಥ್ ಬ್ಲಾಕ್ನಲ್ಲಿರುವ ತಮ್ಮ ಆಫೀಸ್ಗೆ ಬರುವುದನ್ನು ಕಳೆದ ವರ್ಷದ ಏಪ್ರಿಲ್ನಲ್ಲೇ ಕೊನೆಗೊಳಿಸಿದ್ದರು. ಅದರ ಮರುತಿಂಗಳೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾದರು. ಆನಂತರ ಆಗಸ್ಟ್ನಲ್ಲಿ ತಮ್ಮ ಕಚೇರಿ ಬಂದರಾದರೂ ಜನವರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದರು. ಅಂಗಾಂಶದ ಕ್ಯಾನ್ಸರ್ಗೆ ತುತ್ತಾಗಿದ್ದ ಅವರು ಕಳೆದ ತಿಂಗಳು ಚಿಕಿತ್ಸೆಗೆಂದು ನ್ಯೂಯಾರ್ಕ್ಗೆ ತೆರಳಿದ್ದರು. ಮೇ 14, 2018ರಲ್ಲಿ AIIMS ನಲ್ಲಿ ದೊಡ್ಡ ಸರ್ಜರಿ ಮಾಡಿಸಿಕೊಂಡಿದ್ದ ಜೇಟ್ಲಿ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದರು. ಈ…
ಮುಂದೆ ಓದಿ...Day: February 9, 2019
ಭಾರತೀಯ ಸೈನಿಕರ ಕೈಗೆ ‘ಡೆಡ್ಲಿ’ ಸ್ನೈಪರ್ ರೈಫಲ್ ಗಳು!
ನವದೆಹಲಿ: ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ. ಡೆಡ್ಲಿ ಸ್ನೈಪರ್ ರೈಫಲ್ಸ್ ಎಂದೇ ಕರೆಯಲಾಗುವ ಅತ್ಯಾಧುನಿಕ ಬೆರೆಟ್ಟಾ ಸಂಸ್ಥೆಯ 0.338 ಲಪುವಾ ಮ್ಯಾಗ್ನಮ್ ಸ್ಲಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಹಾಗೂ ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎ095 ಸ್ನೈಪರ್ ರೈಫಲ್ಗಳನ್ನ ಖರೀದಿ ಮಾಡಲಾಗಿದೆ. ಒಂದು ವರ್ಷದ ಹಿಂದೆಯೇ ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಪಾಕ್ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್ ರೈಫಲ್ ಗಳ ಬಳಕೆಯನ್ನು ಭಾರತೀಯ ಸೇನೆ…
ಮುಂದೆ ಓದಿ...ಸಾಂಸ್ಕೃತಿಕ ರಂಗದ ಕೊಡುಗೆಯಲ್ಲಿ ಮಹಿಳೆಯರದೇ ಬಹುಪಾಲು
ತುಮಕೂರು: ಶಿಕ್ಷಣ, ಕ್ರೀಡೆ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದ ಕೊಡುಗೆಯಲ್ಲೂ ಮಹಿಳೆಯರದು ಬಹುಪಾಲು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ “ಮಹಿಳಾ ಸಾಂಸ್ಕೃತಿಕ ಉತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಸಮಾಜದಲ್ಲಿ ಪುರುಷರಷ್ಟೆ ಸಮಾನತೆಯನ್ನು ಪಡೆದುಕೊಳ್ಳುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ಸಾಂಸ್ಕೃತಿಕ ಉತ್ಸವದ ಮೂಲಕ ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಪ್ರತ್ಯೇಕ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ. ಮಹಿಳೆಯರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಬೇಕೆಂದು ಹಾರೈಸಿದರು. ಕಾರ್ಯಕ್ರಮದ…
ಮುಂದೆ ಓದಿ...ರೈತರ ಸಂಕಷ್ಟ ಆನಾವರಣಗೊಳಿಸಿದ “ನೇಗಿಲು” ನಾಟಕ
ತುಮಕೂರು: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ “ನೇಗಿಲು” ಎಂಬ ನಾಟಕದ ಮೂಲಕ ರೈತ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಜಾಗೃತಿ ಮೂಡಿಸಲು ಹೊರಟಿರುವುದು ಶ್ಲಾಘನೀಯ ಕೆಲಸ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ. ಗುಬ್ಬಿ ಪಟ್ಟಣದ ನಾಟಕರತ್ನ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಿ.ಇಂದ್ರಕುಮಾರ್ ರಚಿಸಿರುವ “ನೇಗಿಲು” ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ರೈತರ ಸಮಸ್ಯೆಗಳ ಕುರಿತು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸುದ್ದಿ ಬಿತ್ತರಿಸುವುದು ಕಡಿಮೆಯಾಗಿದೆ. ಒಂದು ರೀತಿಯಲ್ಲಿ ರೈತ ಮಾಧ್ಯಮಗಳಿಗೆ ಟಿಆರ್ಪಿ ಗಳಿಸಿಕೊಡದ ವಿಷಯವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ನಾಟಕದ ಮೂಲಕ ಯುವ ಸಮೂಹ ರೈತರ ಸಂಕಷ್ಟಗಳ…
ಮುಂದೆ ಓದಿ...ಸಿ.ಸಿ. ರಸ್ತೆ. ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಚಾಲನೆ
ತುಮಕೂರು: ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ರವರು ನಗರದ 27ನೇ ವಾರ್ಡಿನ ಅಮರಜ್ಯೋತಿನಗರದಲ್ಲಿ ಪಿ.ಡಬ್ಲು.ಡಿ. ಇಲಾಖೆಯಿಂದ ಎಸ್.ಎಫ್.ಸಿ. ಯೋಜನೆಯಲ್ಲಿ ಕೈಗೊಂಡಿರುವ ಸಿ.ಸಿ. ರಸ್ತೆ. ಮತ್ತು ಸಿ.ಸಿ. ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು. ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ವೇದಮೂರ್ತಿ, ಕುಮಾರ್, ಜಿತೇಂದ್ರ, ಹನುಮಂತಪ್ಪ ಹಾಗೂ ಪಿ.ಡಬ್ಲು.ಡಿ. ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಂದೆ ಓದಿ...