ತಾಲ್ಲೂಕಿನಾದ್ಯಂತ ಕಳ್ಳತನಗಳ ಮರುಕಳುಸಿವಿಕೆ : ಶಾಸಕ ಅಸಮಾಧಾನ

ತುರುವೇಕೆರೆ:       ತಾಲೂಕಿನಾದ್ಯಾಂತ ದೇವಸ್ಥಾನಗಳಲ್ಲಿ ಕಳ್ಳತನಗಳು ಪದೇ ಪದೇ ಮರುಕಳಿಸುತ್ತಿದ್ದರೂ ಪೋಲೀಸ್ ಇಲಾಖೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕೈಚಲ್ಲಿ ಕೂತಿದೆ ಎಂದು ಶಾಸಕ ಮಸಾಲೆಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.       ತಾಲೂಕಿನ ದೇವಾಲಯಗಳಲ್ಲಿ ಸರಣಿಗಳ್ಳತನಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು,  ತಾಲೂಕಿನಲ್ಲಿ ದಿನೇ ದಿನೇ ದೇವಾಲಯಗಳಲ್ಲಿ ಕಳ್ಳತನಗಳು ಹೆಚ್ಚಾಗುತ್ತಿದ್ದು ದೇವಾಲಯಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು ದೇವರ ಹುಂಡಿ ಹೊಡೆದು ಹಣ ದೋಚುವುದು ಹಾಗೂ ಬಂಗಾರದ ಒಡವೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ತಾಲೂಕಿನ ಸಾರ್ವಜನಿಕರಲ್ಲಿ ಭಯ ಭೀತಿಯನ್ನು ಉಂಟುಮಾಡುವ ಹಂತಕ್ಕೆ ದೇವಾಲಯಗಳಲ್ಲಿ ಕಳ್ಳತನಗಳು ಎಗ್ಗಿಲ್ಲದೆ ಸಾಗಿದೆ ಒಂಟಿ ದೇವಾಲಯಗಳಿನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ, ಕಳ್ಳರೀಗ ಊರೊಳಗಿನ ದೇವಾಲಯಗಳಿಗೂ ಕನ್ನ ಹಾಕುವ ಹಂತಕ್ಕೆ ತಲುಪಿದ್ದಾರೆ ಯಾವುದೊ ಒಂದು ಗ್ಯಾಂಗ್ ಸರಣಿಗಳ್ಳತನಕ್ಕೆ ಇಳಿದಿರುವ ರೀತಿಯಲ್ಲಿ ದೇವಾಲಯಗಳಲ್ಲಿ ಕಳ್ಳತನ…

ಮುಂದೆ ಓದಿ...

ಸಿದ್ದಗಂಗಾ ಮಠಕ್ಕೆ ಶಿವರಾಜ್‍ಕುಮಾರ್ ಭೇಟಿ

ತುಮಕೂರು:       ಹ್ಯಾಟ್ರಿಕ್ ಹೀರೋ ನಟ ಶಿವರಾಜ್‍ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ.       ಶಿವರಾಜ್‍ಕುಮಾರ್ ಅವರು ಗದ್ದುಗೆ ದ್ವಾರದ ಮುಂದೆ ಕೆಲಕಾಲ ಕೂತು ನಮಸ್ಕರಿಸಿದರು. ಬಳಿಕ ಹೊಸ ಮಠಕ್ಕೆ ಬಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.         ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, “ಶಿವಕುಮಾರ ಶ್ರೀಗಳು ದೂರವಾದಾಗ ನಾನು ವಿದೇಶದಲ್ಲಿ ಇದ್ದೆ. ಹಾಗಾಗಿ ಬರಲು ಆಗಲಿಲ್ಲ. ಶ್ರೀಗಳ ಮೇಲೆ ಪ್ರೀತಿ ಹಾಗೂ ನಂಟು ಇತ್ತು. ಹಾಗಾಗಿ ಇಂದು ಬಂದು ಗದ್ದುಗೆ ದರ್ಶನ ಪಡೆದಿದ್ದೇನೆ” ಎಂದರು. ಅಲ್ಲದೇ ನಾನು ಇನ್ನು ಮುಂದೆ ಬರುತ್ತಿರುತ್ತೇನೆ. ಶಿವಕುಮಾರ ಶ್ರೀಗಳು ಇನ್ನೂ ನಮ್ಮ ಜೊತೆಯೇ ಇದ್ದಾರೆ ಎನ್ನುವ ಫೀಲ್ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ನಡುವೆ ಎಂದಿನಂತೆ ತಮ್ಮ…

ಮುಂದೆ ಓದಿ...

ಸಾಮೂಹಿಕ ವಿವಾಹಗಳು ಪ್ರೇರಣೆಯಾಗಬೇಕು

ಮಧುಗಿರಿ :       ಆಡಂಬರದ ಮದುವೆಗಳಿಗೆ ಇತಿಶ್ರೀ ಹಾಡಲು ಸಾಮೂಹಿಕ ವಿವಾಹಗಳು ಪ್ರೇರಣೆಯಾಗಬೇಕೆಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀಹನುಮಂತನಾಥಸ್ವಾಮೀಜಿ ತಿಳಿಸಿದರು.       ತಾಲೂಕಿನ ಗಿರೇಗೌಡನಹಳ್ಳಿಯ ಶ್ರೀ ರಂಗನಾಥಸ್ವಾಮಿದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 6 ಜೋಡಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಹಣವಂತರು, ವಿದ್ಯಾವಂತರು ಆಡಂಬರದ ಮದುವೆಗಳಿಗೆ ಮಾರು ಹೋಗದೆ ಸಾಂಪ್ರದಾಯಕ ರೀತಿಯಲ್ಲಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡುವುದರಿಂದ ದುಂದು ವೆಚ್ಚ ಕಡಿಮೆಯಾಗಿ ನವ ದಂಪತಿಗಳು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗಲಿದೆ ಎಂದರು.       ನವದಂಪತಿಗಳು ಕುಟುಂಬಕ್ಕೊಂದು ಮಗು ಯೋಜನೆ ಅಳವಡಿಸಿಕೊಳ್ಳುವುದರಿಂದ ಮಕ್ಕಳನ್ನು ವಿದ್ಯಾವಂತನ್ನಾಗಿ, ಸುಸಂಸ್ಕøತರನ್ನಾಗಿ ಮಾಡಲು ಸಾಧ್ಯ. ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಒತ್ತು ನೀಡುತ್ತಿದ್ದು. ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ನಡೆಸಲು ಮುಂದಾಗಬೇಕು. ಬಡವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ವಿವಾಹಗಳ…

ಮುಂದೆ ಓದಿ...

ಅಪಘಾತ : ಬಸ್-ಬೈಕ್​ ಗೆ ಬೆಂಕಿ ; ಮೂವರ ದುರ್ಮರಣ!

 ಬೆಂಗಳೂರು:        ಬಿಎಂಟಿಸಿ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.       ಬಸವ, ಅವಿನಾಶ್ ಹಾಗೂ ಪ್ರದೀಪ್ ಮೃತರು. ಇಂದು ಮಧ್ಯಾಹ್ನ ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗೆರೆ ಬಳಿ‌ ಈ ಭೀಕರ ಅಪಘಾತ ಸಂಭವಿಸಿದೆ.        ಡಿಕ್ಕಿಯ ರಭಸಕ್ಕೆ ಬಸ್​ ಮತ್ತು ಬೈಕ್​ಗೆ ಬೆಂಕಿ ಹೊತ್ತಿಕೊಂಡು ಉರಿದಿವೆ. ಬಸ್​ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಘಾತದ ಬಳಿಕ ಬಸ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.        ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಎಂಟಿಸಿ ಆಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ಧಾರೆ. ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೇ : ರೌಡಿಶೀಟರ್‍ಗಳಿಗೆ ಎಸ್ಪಿ ವಾರ್ನಿಂಗ್

ತುಮಕೂರು:       ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ಪ್ರೊ ಕಬಡ್ಡಿ ರೀತಿ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ರೌಡಿಶೀಟರ್‍ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.       ಸೋಮವಾರ ಬೆಳಗ್ಗೆ ನಗರದ ಚಿಲುಮೆ ಕಲ್ಯಾಣ ಮಂಟಪದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಗಳ ಲ್ಲಿನ ಸುಮಾರು 249 ರೌಡಿ ಶೀಟರ್‍ಗಳನ್ನು ಕರೆಸಿದ್ದು, ಅವರ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಗಡಿಪಾರು ಮಾಡುವುದಾಗಿ ಎಚ್ಚರಿಸಿದರಲ್ಲದೆ, ಸಮಾರ್ಜಘಾತುಕ ಕೃತ್ಯಗಳಲ್ಲಿ ಭಾಗವಹಿಸಿದ್ರೆ ಕಟ್ಟುನಿಟ್ಟಿನ ಕಾನೂನಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.       ನಗರದ ಶೆಟ್ಟಿಹಳ್ಳಿ ಸೇತುವೆ ಬಳಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡುತ್ತಿದ್ದ ಜಯನಗರ ಠಾಣೆ ಸಬ್ ಇನ್ಸ್ ಪೆಕ್ಟರ್…

ಮುಂದೆ ಓದಿ...

ಲೋಕಸಭೆ ಚುನಾವಣೆ: ಪ್ರಕ್ರಿಯೆಯಿಂದ ತಪ್ಪಿಸಿಕೊಂಡವರಿಗೆ ಶಿಸ್ತು ಕ್ರಮ

 ತುಮಕೂರು:        ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಇಲ್ಲದ ಸಬೂಬು ಹೇಳಿ ಚುನಾವಣಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್‍ಕುಮಾರ್ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತುರ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವ ಎಲ್ಲ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮತ್ತಿತರ ಅಧಿಕಾರಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ನಡೆಯುವ ಎಲ್ಲ ತರಬೇತಿಗಳು ಹಾಗೂ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸೂಚಿಸಿದ ಚುನಾವಣಾ ಕೆಲಸಗಳನ್ನು ನಿಗಧಿತ ಅವಧಿಯಲ್ಲಿ ಮುಗಿಸಬೇಕು ಎಂದರಲ್ಲದೆ ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಲು ಸಿದ್ಧರಾಗಿರಬೇಕು ಎಂದು ಸೂಚಿಸಿದರು.       ನಿಯೋಜಿತ ಎಲ್ಲ ನೋಡಲ್…

ಮುಂದೆ ಓದಿ...

ಬಿಜೆಪಿ ಗೆಲುವಿಗೆ ದಲಿತ ಮತಗಳು ಪ್ರಮುಖ ಪಾತ್ರ ವಹಿಸಬೇಕು

 ತುಮಕೂರು:       ಬಿಜೆಪಿ ಗೆಲುವಿಗೆ ಎಲ್ಲಾ ಲೋಕಸಭಾ ಕ್ಷೇತದಲ್ಲಿ ದಲಿತ ಮತಗಳಿಗೆ ಪ್ರಮುಖ ಪಾತ್ರ ವಹಿಸಬೇಕು. ದಲಿತರು ಪ್ರಮುಖವಾಗಿ ಬಿಜೆಪಿ ಪಕ್ಷದ ಗೆಲುವಿಗಾಗಿ ಶ್ರಮಿಸಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಆನೆಕಲ್ ನಾರಾಯಣಸ್ವಾಮಿಯವರು ಕರೆಕೊಟ್ಟರು.       ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಮತ್ತು ಶಾಸಕರು ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಆತ್ಮಾನಂದ, ಮಾಜಿ ವಿಧಾನ ಪರಿಷತ್ ಸದಸ್ಯರು ಡಾ|| ಹುಲಿನಾಯ್ಕ್‍ರ್, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರು ಎಸ್. ಶಿವಪ್ರಸಾದ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿ.ರಂಗನಾಯ್ಕ್, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷರು ಎಂ.ಎನ್.ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು ಶಾರದ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು & ಹಾಲಿ ಸದಸ್ಯರು ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರು, ಗುಬ್ಬಿ, ಜಿ.ಹೆಚ್.ಜಗನ್ನಾಥ್, ಎಸ್.ಸಿ.ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಕೃಷ್ಣಮೂರ್ತಿ. ಇನ್ನೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದೆ ಓದಿ...