ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ

 ತುಮಕೂರು :       ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥ ಸಪ್ತಮಿ ಅಂಗವಾಗಿ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಯಿತು.       ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5.15 ರಿಂದ 7.15ರ ವರೆಗೆ ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಸಾಮೂಹಿಕವಾಗಿ ನಡೆದ 108 ಸೂರ್ಯ ನಮಸ್ಕಾರದ ದೃಶ್ಯ ಮನಮೋಹಕವಾಗಿತ್ತು.       ನಂತರ ಮಾತನಾಡಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಚನ್ನಬಸಪ್ಪ, ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಉತ್ತಮ ಆರೋಗ್ಯ ಹಾಗೂ ಉತ್ತಮ ಪರಿಸರಕ್ಕಾಗಿ ಯಾವುದೇ ಲಿಂಗ ಭೇದ, ವರ್ಗ ಭೇದ ಇಲ್ಲದೆ ಯೋಗದ ಮೂಲಕ ಸೂರ್ಯ ನಮಸ್ಕಾರ ನಡೆಸಲಾಗಿದೆ ಎಂದರು.       ಸೂರ್ಯ ನಮಸ್ಕಾರ ಮಾಡುವ ಮೂಲಕ ಸಮಾಜದ ಎಲ್ಲರಿಗೂ ಉತ್ತಮ ಆರೋಗ್ಯ…

ಮುಂದೆ ಓದಿ...

ಮೊಬೈಲ್ ಮೋಹ ಬಿಟ್ಟು ಕ್ರೀಡಾಕ್ಷೇತ್ರಕ್ಕೆ ಆಸಕ್ತಿ ನೀಡಿ

 ತುಮಕೂರು:       ಇಂದಿನ ಯುವಜನಾಂಗ ಮೊಬೈಲ್ ಮೋಹ ಬಿಟ್ಟು, ಕ್ರೀಡೆಯಡೆಗೆ ಮುಖಮಾಡಬೇಕು ಎಂದು ತುಮಕೂರು ವಿವಿ ಕುಲಸಚಿವ ಡಾ.ಗಂಗಾನಾಯಕ್ ತಿಳಿಸಿದರು      ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ವಿವಿ ಅಂತರ ಕಾಲೇಜು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪುರುಷ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ 2018-19 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.      ಪ್ರಸ್ತುವ ಯುವಕರು ಮೊಬೈಲ್ ಮೊರೆಹೋಗಿ ಕ್ರೀಡಾಚಟುವಟಿಕೆಯ ಕ್ಷೇತ್ರದೆಡೆಗೆ ನಿರಾಸಕ್ತಿಯ ಮನೋಭಾವನೆ ತಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪಠ್ಯದಂತೆ ಪಠ್ಯೇತರ ಚಟುವಟಿಕೆಗಳಡೆಗೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.       ಮನುಷ್ಯನಿಗೆ ಮಾನಸಿಕ ಆರೋಗ್ಯ ಹೇಗೆ ಮುಖ್ಯವೋ ಹಾಗೆಯೇ, ದೈಹಿಕ ಅರೋಗ್ಯವೂ ಮುಖ್ಯ. ಹಾಗಾಗಿ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು, ಅಧ್ಯಾಪಕರು ಸಹ ಮಕ್ಕಳನ್ನು ಕ್ರೀಡಾ…

ಮುಂದೆ ಓದಿ...

ದೇವರಾಯನದುರ್ಗ ರಸ್ತೆ ಬದಿಯ ಜಂಗಲ್ ತೆರವಿಗೆ ಡಿಸಿ ಸೂಚನೆ

ತುಮಕೂರು:       ತುಮಕೂರು ತಾಲ್ಲೂಕು ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವವು ಮಾರ್ಚ್ 13 ರಿಂದ 25ರವರೆಗೆ ಜರುಗಲಿದ್ದು, ಜಾತ್ರಾ ಸಮಯದಲ್ಲಿ ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆರತಿ ಬಂಡೆಯಿಂದ ದೇವರಾಯನದುರ್ಗ ಗ್ರಾಮದ ರಸ್ತೆವರೆಗೂ ಇರುವ ಹಳ್ಳಗಳನ್ನು ಮುಚ್ಚಿಸಿ, ಡಾಂಬರೀಕರಣಗೊಳಿಸಿ, ರಸ್ತೆ ಬದಿಯಲ್ಲಿರುವ ಜಂಗಲ್ ಅನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.       ತಮ್ಮ ಕಚೇರಿಯಲ್ಲಿ ಸೋಮವಾರ ಜಾತ್ರಾ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು ಮಾರ್ಚ್ 20ರಂದು ನಡೆಯಲಿರುವ ಶ್ರೀ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ವಾಹನ ನಿಲ್ದಾಣ, ಬ್ಯಾರಿಕೇಡಿಂಗ್, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಾತ್ರೆ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರುಗಬೇಕು. ಮುಂಜಾಗ್ರತಾ…

ಮುಂದೆ ಓದಿ...

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತೆಗೆಯಲು ವಸ್ತು ಪ್ರದರ್ಶನ ಸಹಕಾರಿ

ಮಧುಗಿರಿ :        ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ತಿಳಿಸಿದರು.        ತಾಲೂಕಿನ ಮಿಡಿಗೇಶಿ ಸರ್ಕಾರಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಹೊರಹೊಮ್ಮಿಸುವ ಹೊಣೆ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಗುಣಮಟ್ಟದ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ ಪ್ರತಿಯೊಂದು ವಿಷಯವೂ ಕಲಿಕೆಗೆ ಪೂರಕವಾಗಿದೆ ಎಂದರು.      ವಿನೂತನ ಮಾದರಿಯ ವಸ್ತು ಪ್ರದರ್ಶನ :       ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಎಂ.ಎನ್. ರಜನಿ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ನಕ್ಷತ್ರಪುಂಜ, ತಳವಿಲ್ಲದ ಬಾವಿ, ಮ್ಯಾಗ್ನೆಟಿಕ್ ಕಾರ್, ಪೆರಿಸ್ಕೋಪ್, ಟೆಲಿಸ್ಕೋಪ್, ಕೆಲಿಡೋಸ್ಕೋಪ್,…

ಮುಂದೆ ಓದಿ...

ಸವಿತಾ ಸಮಾಜದ ಜನಾಂಗದವರಿಗೆ ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ

 ತುಮಕೂರು:       ಸಮಾಜದಲ್ಲಿ ಹಿಂದುಳಿದ ಸವಿತಾ ಸಮಾಜದ ಜನಾಂಗಕ್ಕೆಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ನಗರ ಸವಿತಾ ಸಮಾಜ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯವಾಗಿರುತ್ತದೆ. ಸರ್ಕಾರವು ಇಂತಹ ಜನಾಂಗಗಳಿಗೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಪುರಾತನ ಕಾಲದಿಂದಲೂ ತಮ್ಮದೇ ಕಸುಬನ್ನಾಧರಿಸಿ ಜೀವನವನ್ನು ಈಗಲೂ ಮುಂದುವರೆಸಿಕೊಂಡು…

ಮುಂದೆ ಓದಿ...