ಅರ್ಹ ಮತದಾರರೆಲ್ಲ ಮತಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ

ತುಮಕೂರು:       ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 18 ವರ್ಷ ತುಂಬಿದವರೆಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕೆಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್ ಭರತ್‍ಕುಮಾರ್ ತಿಳಿಸಿದರು.        ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಪ್ಯಾಟ್ ಹಾಗೂ ಇವಿಎಂ ಪ್ರಾತ್ಯಕ್ಷಿಕೆ, ಸಾರ್ವಜನಿಕರಿಗೆ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 100 ರಷ್ಟು ಮತದಾನವಾಗಬೇಕು. ಅರ್ಹ ಮತದಾರರು ಮತಪಟ್ಟಿಗೆ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಚುನಾವಣೆಯ ಬಗ್ಗೆ ತಪ್ಪು ಕಲ್ಪನೆ ಹೊಂದಿದವರಿಗೆ ಮೊದಲು ಜಾಗೃತಿ ಮೂಡಿಸಬೇಕು. ಮನೆ ಮನೆಗೆ ಭೇಟಿ ನೀಡಿ ವಿವಿಪ್ಯಾಟ್ ಮತ್ತು ಇವಿಎಂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ…

ಮುಂದೆ ಓದಿ...

ಸಣ್ಣ ಕೈಗಾರಿಕಾ ಸಚಿವರ ತವರಲ್ಲೇ ಸೂರಿಲ್ಲದೇ ಕೊರಗುತ್ತಿರುವ ಸರ್ಕಾರಿ ಶಾಲೆ

  ಗುಬ್ಬಿ :       ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂಬ ಸರ್ಕಾರಿ ಶಾಲೆ ಉಳಿಸಿ ಎಂಬ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿರುವುದಕ್ಕೆ ಸಾಕಷ್ಟು ನಿರ್ದೇಶನಗಳಿದ್ದು ಇದರಿಂದ ಪೋಷಕರುಗಳು ಸರ್ಕಾರಿ ಶಾಲೆಗಳತ್ತ ತಮ್ಮ ಮಕ್ಕಳು ಹೆಜ್ಜೆ ಹಾಕದಂತಹ ಸ್ಥಿತಿಯನ್ನು ಶಾಲಾ ಶಿಕ್ಷಕವೃಂದ ಮತ್ತು ಶಿಕ್ಷಣ ಇಲಾಖೆ ತಂದಿಟ್ಟಿರುವುದು ಎಷ್ಟು ಸರಿ.       ಸಣ್ಣ ಕೈಗಾರಿಕಾ ಸಚಿವರ ಕ್ಷೇತ್ರದಲ್ಲೇ ಸೂರಿಲ್ಲದೇ ಮಕ್ಕಳುಗಳು ಧಾರ್ಮಿಕ ಸೂರಿನಡಿಯಲ್ಲಿ ಪಾಠವನ್ನು ಕೇಳುವಂತಹ ಸ್ಥಿತಿ ತಲುಪಿರುವುದು ಈ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳ ದುರಂತವೇ ಸರಿ. ಗುಬ್ಬಿ ಸಮೀಪವೇ ಇರುವ ಹೇರೂರು ಗ್ರಾಮ ಪಂಚಾಯ್ತಿಗೆ ಹೊಂದಿಕೊಂಡಿರುವ ಕಿಟ್ಟದಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದ್ದು ಸುಮಾರು 1-7ನೇ ತರಗತಿಯ ಸುಮಾರು 70 ಮಕ್ಕಳುಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸುಮಾರು 5 ಜನ ಶಿಕ್ಷಕರಿದ್ದು…

ಮುಂದೆ ಓದಿ...

ಶ್ರೀನಗರದಲ್ಲಿ ಯೋಧರ ಮೇಲೆ ದಾಳಿ : ಹೇಡಿತನದ ಪರಮಾವಧಿ

 ತುಮಕೂರು:       ಶ್ರೀನಗರದಲ್ಲಿ ಭಾರತೀಯ ಸೇನಾ ಯೋಧರ ಮೇಲೆ ಮಾಡಿರುವ ಉಗ್ರರ ದಾಳಿ ಖಂಡನೀಯ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ತಿಳಿಸಿದರು.       ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅತ್ಯಂತ ಭೀಕರವಾದ ಈ ದಾಳಿ ಹೇಡಿತನದ ಪರಮಾವಧಿ. ಉಗ್ರರು ಪದೇ ಪದೇ ಇಂಥ ಘೋರ ಕೃತ್ಯವನ್ನು ಎಸಗುತ್ತಲೇ ಬಂದಿದ್ದಾರೆ. ಉಗ್ರರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಶಾಂತಿಯಿಂದ ಇರಲು ಬಯಸುವ ನಮ್ಮ ಭಾರತದಲ್ಲಿ ಪುನರಾವರ್ತಿತವಾಗಿ ಇಂಥ ಘಟನೆಗಳು ಸಂಭವಿಸುತ್ತಿರುವುದು ವಿಷಾದದ ಸಂಗತಿ. ಭಾರತ ಇದಕ್ಕೆ ತಕ್ಕ ಉತ್ತರ ಕೊಡಲಿದೆ. ಇಲ್ಲದೇ ಹೋದಲ್ಲಿ ಗಡಿಭಾಗದಲ್ಲಿರುವ ಯೋಧರು ಹಾಗೂ ಜನಸಾಮಾನ್ಯರಿಗೆ ಉಳಿಗಾಲವಿರುವುದಿಲ್ಲ. ದಾಳಿಯಲ್ಲಿ ಬಲಿಯಾದ ಮಂಡ್ಯ ಜಿಲ್ಲೆಯ ಯೋಧನಿಗೆ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು. ಮಾನವೀಯತೆ ಇರುವ ಪ್ರತಿಯೊಬ್ಬರೂ…

ಮುಂದೆ ಓದಿ...

ಆಶಾ ಕಾರ್ಯಕರ್ತೆಯರ ಸಂಭಾವನೆ 4000 ರೂ.ಗಳಿಗೆ ಏರಿಕೆ

 ತುಮಕೂರು:        ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ ನೀಡುತ್ತಿರುವ 3500 ರೂ.ಗಳ ಸಂಭಾವನೆಯನ್ನು 4000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ತಿಳಿಸಿದರು.       ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ, ಕಿದ್ವಾಯ್ ಸಂಸ್ಥೆ, ಅಪೋಲೋ ಆಸ್ಪತ್ರೆ, ಬಿ.ಜಿ.ಎಸ್. ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿಂದು ಏರ್ಪಡಿಸಿದ್ದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 3500 ರೂ.ಗಳ ಸಂಭಾವನೆ ನೀಡಲಾಗುತ್ತಿತ್ತು. ಪ್ರಸ್ತುತ 500 ರೂ.ಗಳನ್ನು ಹೆಚ್ಚಳ ಮಾಡಿ ಆಯವ್ಯಯದಲ್ಲಿ ಮಂಡಿಸಲಾಗಿದೆ. ಹುದ್ದೆಯನ್ನು ಖಾಯಂಗೊಳಿಸುವ ಬಗ್ಗೆ…

ಮುಂದೆ ಓದಿ...

  ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು

 ತುಮಕೂರು:       ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಂಜಾರ ಜನಾಂಗ ಹಿಂದುಳಿದಿದ್ದು, ಇವರ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಉಪ ವಿಭಾಗಾಧಿಕಾರಿ ಶಿವಕುಮಾರ್ ತಿಳಿಸಿದರು.        ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂತ ಸೇವಾಲಾಲ್ ಕಾಡಿನಲ್ಲಿರುವ ಬಂಜಾರ ಜನಾಂಗಕ್ಕೆ ನಾಗರಿಕತೆಯನ್ನು ಪರಿಚಯಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.       ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಕಾರ್ಯಧ್ಯಕ್ಷ ಮಾತನಾಡಿ ಸಂತ ಸೇವಾಲಾಲ್ ಅವರು ಪ್ರತಿಪಾದಿಸಿದ ಅಹಿಂಸಾ ಮಾರ್ಗ ನಾವೆಲ್ಲಾ ಅನುಸರಿಸಬೇಕು. ಪುರಾತನವಾಗಿರುವ ಬಂಜಾರ…

ಮುಂದೆ ಓದಿ...

ನಾಳೆ ತುಮಕೂರಿನಲ್ಲಿ ಬೃಹತ್ ಉದ್ಯೋಗ ಮೇಳ

 ತುಮಕೂರು:       ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದಲ್ಲಿ ಫೆಬ್ರುವರಿ 16ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.       ಕಾರ್ಯಕ್ರಮಲ್ಲಿ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳು ದಿವ್ಯಸಾನಿಧ್ಯವಹಿಸಲಿದ್ದಾರೆ. ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ ನೆರವೇರಿಸುವರು.       ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು. ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮುಜರಾಯಿ ಇಲಾಖಾ ಸಚಿವ ಪಿ.ಟಿ…

ಮುಂದೆ ಓದಿ...

ಇಂಜಿನಿಯರ್ ಸಭೆಗೆ ಗೈರು: ಕಾರಣ ಕೇಳಿ ನೋಟೀಸ್ ಜಾರಿ ಮಾಡಲು ಸೂಚನೆ

ತುಮಕೂರು:       ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಶಾಲೆಗಳಿಗೆ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಭೆಗೆ ಅಗತ್ಯ ಮಾಹಿತಿ ನೀಡಬೇಕಾಗಿದ್ದ ಇಂಜಿನಿಯರ್ ಗೈರು ಹಾಜರಾಗಿದ್ದರಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾ ಪಂಚಾಯತ್ ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಾ|| ಜಿ.ಸಿ ನವ್ಯಬಾಬು ಸೂಚನೆ ನೀಡಿದರು.       ಜಿಲ್ಲಾ ಪೊಂಚಾಯತಿಯಲ್ಲಿಂದು ಜರುಗಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ 3ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಲ್ಲಿರುವ ವೈದ್ಯರ ಕೊರತೆ, ಪ್ರಾಥಮಿಕ ಆರೋಗ್ಯ ಕೇಂದ್ರ/ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ, ಸಿಸಿ ಕ್ಯಾಮೆರಾ ಅಳವಡಿಕೆಯ ಬಗ್ಗೆ ಕ್ರಮ ಕೈಗೊಳ್ಳಲು ಈಗಾಗಲೇ ಸಮಿತಿ ರಚಿಸಲಾಗಿದೆ. ಆರೋಗ್ಯ ಇಲಾಖಾ ಕಟ್ಟಗಳ ದುರಸ್ಥಿ ಕಾಮಗಾರಿ ಹಾಗೂ ಔಷಧಿಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು…

ಮುಂದೆ ಓದಿ...

ನವಜೋತ್ ಸಿಂಗ್‍ ಸಿದ್ದು ಒಬ್ಬ ದೇಶ ದ್ರೋಹಿ : ಪ್ರಭಾಕರ

       ನಿನ್ನೆ ಜಮ್ಮು ಕಾಶ್ಮೀರದ ಪುಲುವಾಮಾ ಜಿಲ್ಲೆಯಲ್ಲಿ ನಡೆದಿರುವ ಘಟನೆಯನ್ನು ಬಹಳ ಬಲವಾಗಿ ಖಂಡಿಸುತ್ತೇನೆ, ಇಂತಹ ಹೀನ ನೀಚ ಕೃತ್ಯ ಮಾಡುವ ಯಾವೊಬ್ಬನೇ ಆಗಿರಲಿ ಅವರಿಗೆ ತಕ್ಕ ಪಾಠ ನಮ್ಮ ಸೇನೆ ಕಲಿಸಬೇಕು, ಸೇರಿಗೆ ಸವ್ವಾಸೇರು ಎಂಬಂತೆ ಒಂದು ತಲೆಗೆ ಹತ್ತು ತಲೆಗಳನ್ನು ತರಬೇಕು ಇದು ನನ್ನ ಅಪೇಕ್ಷೆ ಮಾನ್ಯ ಪ್ರಧಾನಿಗಳುನನಗೆ ಅನುಮತಿ ಕೊಟ್ಟು ಕೋವಿ ಕೊಡಿ ದೇಶದ ರಕ್ಷಣೆಗಾಗಿ ಭಯೋತ್ಪಾದಕರ ರುಂಡ ಚೆಂಡಾಡುವೆ, ದೇಶದ ರಕ್ಷಣೆಗಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದ ಮಾಜೀ ನಿರ್ದೇಶಕ ಹಾಗು ಬಿಜೆಪಿರಾಜ್ಯ ಕಾರ್ಯಕಾರಿಣಿ ಸದಸ್ಯಪ್ರಭಾಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.       ಪಂಚಾಬಿನ ಕಾಂಗ್ರೇಸ್ ಸಚಿವ ನವಜೋತಸಿಂಗ್ ಸಿದ್ದು ಇವನೊಬ್ಬ ದೇಶದ್ರೋಹಿ ಪಾಕಿಸ್ಥಾನದ ಬಿಲಾಲನ ಮೊಮ್ಮಗ ಆಡಿದ ಹಾಗೆ ಆಡುತ್ತಾನೆ, ನಿನ್ನೆಯ ಘಟನೆಗೆ ಇಡೀ ಪಾಕಿಸ್ತಾನವನ್ನು ದೂರುವುದು…

ಮುಂದೆ ಓದಿ...

ತಡರಾತ್ರಿ ಎಸ್ಪಿ ದಿಢೀರ್ ಭೇಟಿ – ಪೊಲೀಸ್ ಠಾಣೆಗೆ ಬೀಗ!!!

 ತುಮಕೂರು:       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೋನ ವಂಶಿ ಕೃಷ್ಣ ರವರು ತುಮಕೂರು ನಗರವ್ಯಾಪ್ತಿಯಲ್ಲಿ ಬರುವ ಎಲ್ಲಾ ಠಾಣೆಗಳಿಗೆ 13-2-2019 ರ ತಡ ರಾತ್ರಿ ದಿಢೀರ್ ಬೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಕಂಡು ದಂಗಾಗಿ ಹೋಗಿದ್ದಾರೆ.       ಹೌದು ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಪೊಲೀಸ್ ಠಾಣೆಗೆ ಬೀಗ ಜಡಿದು ಅಲ್ಲಿಯ ಸಿಬ್ಬಂದಿ ಮಲಗಿಬಿಟ್ಟಿದ್ದರು ಇದನ್ನು ಗಮನಿಸಿದ ಮಾನ್ಯ ಎಸ್ಪಿ ಸಾಹೇಬರಿಗೆ ಮಾತುಗಳು ಬಾರದಾಗಿದ್ದವು. ಇನ್ನು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಬಾಗಿಲು ತೆರೆದು ಅಲ್ಲಿಯ ಸಿಬ್ಬಂದಿ ಗೊರಕೆ ಹೊಡೆಯುತ್ತಿದ್ದರು. ಠಾಣೆಯ ಒಳಗೆ ಆಗಮಿಸಿರುವುದು ಎಸ್ಪಿ ಸಾಹೇಬರೆಂಬ ಕನಿಷ್ಟ ಪ್ರಜ್ಞೆ ಅಲ್ಲಿ ಕರ್ತವ್ಯ ದಲ್ಲಿದ್ದ ಸಿಬ್ಬಂಧಿಗಳಿಗಿರಲಿಲ್ಲ. ಪೊಲೀಸ್ ಕಂಟ್ರೋಲ್ ರೂಮ್ ಗೆ ಕಾಲ್ ಕೊಟ್ಟರೆ ಅದನ್ನು ಸ್ವೀಕರಿಸುವ ಸೌಜನ್ಯ ಅಲ್ಲಿಯ ಸಿಬ್ಬಂದಿಗಿರಲಿಲ್ಲ ಅವರೂ ಸಹ ಮಲಗಿಬಿಟ್ಟಿದ್ದರು.ಜಿಲ್ಲಾ ಪೊಲೀಸ್  ನಿಯಂತ್ರಣ ಕೊಠಡಿಯ ಸಿಬ್ಬಂದಿ…

ಮುಂದೆ ಓದಿ...