ಕುರಿ ಮೈತೊಳೆಯಲು ಹೋಗಿ ನೀರುಪಾಲಾದ ಕುರಿಗಾಹಿ

 ಗುಬ್ಬಿ:        ಕೆರೆಯಲ್ಲಿ ಕುರಿ ಮೈತೊಳೆಯಲು ಹೋದ ವ್ಯಕ್ತಿಯೋರ್ವ ಆಯತಪ್ಪಿ ನೀರಿನಲ್ಲಿ ಮುಳುಗಿ  ಸಾವನ್ನಪ್ಪಿರುವ ಘಟನೆ  ತಾಲ್ಲೂಕಿನ ಕಗ್ಗರೆಯಲ್ಲಿ ನಡೆದಿದೆ.        ರಾಜಣ್ಣ(46) ಸಾವನ್ನಪ್ಪಿರುವ ದುರ್ದೈವಿ. ರಾಜಣ್ಣ ತಮ್ಮ ಕುರಿಗಳನ್ನು ಕಗ್ಗರೆ ಕೆರೆಯಲ್ಲಿ ತೊಳೆಯುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.        ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಬೆಂಗಳೂರಿನಂತೆ ತುಮಕೂರು ನಗರದ ಅಭಿವೃದ್ಧಿಗೆ ಆದ್ಯತೆ

ತುಮಕೂರು:         ತುಮಕೂರು ನಗರವನ್ನು ಬೆಂಗಳೂರಿನಂತೆ ಅಭಿವೃದ್ಧಿಪಡಿಸಲು ಪ್ರಥಮಾದ್ಯತೆ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ತಿಳಿಸಿದರು.         ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ಬೆಂಗಳೂರಿನ ನಂತರ ತುಮಕೂರು ನಗರ ಮುಂಚೂಣಿಯಲ್ಲಿದ್ದು, ಬೆಂಗಳೂರಿನ ಮಾದರಿಯಲ್ಲಿ ತುಮಕೂರು ನಗರಕ್ಕೂ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಬೆಂಗಳೂರಿನ ಜನದಟ್ಟಣೆ ಕಡಿಮೆಯಾಗಲಿದೆ ಎಂದು ತಿಳಿಸಿದರು.       ನಗರದ ಅಭಿವೃದ್ಧಿಗಾಗಿ ಗುಬ್ಬಿಗೇಟ್‍ನಿಂದ ಐಡಿಎಸ್‍ಎಂಟಿ ಬಡಾವಣೆವರೆಗೆ ಹೊರ ವರ್ತುಲದಲ್ಲಿ 2 ಕಿ.ಮೀ. ಉದ್ದದ ರಿಂಗ್ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತರಿಗೆ ಭೂಸ್ವಾಧೀನ ವೆಚ್ಚ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ…

ಮುಂದೆ ಓದಿ...

ವೀರ ಯೋಧ ಗುರು ಕುಟುಂಬಕ್ಕೆ ಶಾಸಕರಿಂದ 1 ಲಕ್ಷ ಪರಿಹಾರ ಘೋಷಣೆ!

ತುಮಕೂರು:       ಪುಲ್ವಾಮದಲ್ಲಿ ಭಯೋತ್ಪಾಧಕರ ಧಾಳಿಯಿಂದ ವೀರ ಮರಣವನ್ನಪ್ಪಿದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರೀಶಂಕರ್ ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಘೋಷಿಸಿದ್ದಾರೆ .       ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಾದ ಕಣಕುಪ್ಪೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.ಹೆಬ್ಬೂರು ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಸಿ ಸಿ ನಿರ್ಮಾಣಕ್ಕೆ ಶಂಕು ಸ್ತಾಪನೆ.ಗರಗದ ಕುಪ್ಪೆ ಆಂಜನೇಯ ಸ್ವಾಮಿ ದೇವಸ್ತಾನದ ಬಳಿ ರಸ್ತೆ ನಿರ್ಮಾಣಕ್ಕೆ ಶಂಕು ಸ್ತಾಪನೆ, ಕೋಡಿ ಮುದ್ದನಹಳ್ಳಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ,ಗೋವಿಂದರಾಜಪುರ ಸಿ ಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ತಾಪನೆ ರಿಸಾಲ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ,ನಾಗೇನಹಳ್ಳಿಯಲ್ಲಿ ದೇವಸ್ತಾನ ನಿರ್ಮಾಣಕ್ಕೆ ಶಂಕುಸ್ತಾಪನೆ,ಹೆಬ್ಬೂರಿನಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಹೆಬ್ಬೂರು ಸರ್ಕಲ್ ನಲ್ಲಿ…

ಮುಂದೆ ಓದಿ...

ಮೋದಿಜೀ ಮತ್ತೊಮ್ಮೆ ಪ್ರಧಾನಿಯಾಗಲು ಗೋ-ಪೂಜಾ ಕಾರ್ಯಕ್ರಮ

ತುಮಕೂರು:         ಕೃಷಿ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಕೊಟ್ಟಿರುವ ನರೇಂದ್ರ ಮೋದಿಜೀ ಮತ್ತೊಮ್ಮೆ  ಪ್ರಧಾನಿ ಆಗಲು ರಾಜ್ಯಾದ್ಯಾಂತ ರೈತಮೋರ್ಚಾದಿಂದ ಗೋ-ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.       ತುಮಕೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಗೋ-ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರಾದ ಶ್ರೀ ಎಸ್.ಶಿವಪ್ರಸಾದ್ ಉದ್ಘಾಟಿಸಿ, ಮಾತನಾಡುತ್ತಾ ರೈತನ ವಾರ್ಷಿಕ ವರಮಾನ ದ್ವಿಗುಣಗೊಳಿಸಲು ಕಳೆದೈದು ವರ್ಷಗಳಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (ಪ್ರತಿವರ್ಷ 6000 ರೂಪಾಯಿ) ಬೇವು ಮಿಶ್ರಿತ ಯೂರಿಯದೊಂದಿಗೆ ದೇಶದ ರೈತರಿಗೆ ಸಮರ್ಪಕ ರಸಗೊಬ್ಬರಗಳನ್ನು ನೀಡಿರುವುದು, ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿ ವಿದ್ಯುತ್ ಸಂಪರ್ಕ ಇಲ್ಲದ 18452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಮಾಡಿರುವುದು, ಇ-ಮಾರುಕಟ್ಟೆಗಳಿಗೆ ಅನುದಾನ ನೀಡಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಿರುವುದು, ರೈತರ 22 ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು…

ಮುಂದೆ ಓದಿ...