3ಡಿ ಚಿತ್ರಗಳಿಂದ ತುಮಕೂರು ನಗರಕ್ಕೆ ಹೊಸ ಮೆರಗು

 ತುಮಕೂರು:       ತುಮಕೂರು ನಗರವನ್ನು ಪರಿಸರ ಸ್ನೇಹಿ, ಉತ್ತಮ, ಸುಂದರ ನಗರ ಮಾಡಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆಗಳು ಜಂಟಿಯಾಗಿ ಕೈಗೊಂಡಿರುವ ಗೋಡೆಗಳ ಮೇಲೆ ವರ್ಣರಂಜಿತ 3ಡಿ ಚಿತ್ರಗಳನ್ನು ಬಿಡಿಸುತ್ತಿರುವ ಈ ಕಾರ್ಯ ನಗರಕ್ಕೆ ಹೊಸ ಮೆರಗು ತರಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.       ನಗರವನ್ನು ಸುಂದರವಾಗಿಸುವ ಉದ್ದೇಶದಿಂದ ನಗರದ ಪ್ರವೇಶ ದ್ವಾರ ಬಟವಾಡಿ ಪ್ರದೇಶದಲ್ಲಿ ಏರ್ಪಡಿಸಿದ್ದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಲವಾರು ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು, ನಗರದ ಗೋಡೆಯ ಮೇಲೆ ಚಿತ್ರವನ್ನು ಬಿಡಿಸುವ ಕಾರ್ಯಕ್ರಮದ ಮೂಲಕ ನಗರ ಇನ್ನಷ್ಟು ಸುಂದರ ಕಾಣಲಿದೆ. ಇಂತಹ ಕಾರ್ಯಕ್ರಮಗಳಿಂದ ದೃಶ್ಯ ಕಲೆಗಳಿಗೆ ಮಹತ್ವ ಕೊಟ್ಟಂತಾಗುತ್ತದೆ.       ತೋಟಗಾರಿಕೆ ಇಲಾಖೆಯು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದು,…

ಮುಂದೆ ಓದಿ...

ಕೊರಟಗೆರೆ : 47 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಡಿಸಿಎಂ ಶಂಕುಸ್ಥಾಪನೆ

 ತುಮಕೂರು :       ಕೊರಟಗೆರೆ ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ 47.49ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.       ಕೊರಟಗೆರೆ ಪಟ್ಟಣ ಪರಿಮಿತಿಯಲ್ಲಿ 15ಕೋಟಿ ರೂ.ಗಳ ವೆಚ್ಚದ ಹುಣಸನಹಳ್ಳಿ-ಚಿಕ್ಕಹಳ್ಳಿ(ಎಸ್.ಹೆಚ್-3) 2.40 ಕಿ.ಮೀ. ರಸ್ತೆಗೆ ವೈಟ್-ಟಾಪಿಂಗ್, ತಾಲೂಕಿನ ವ್ಯಾಪ್ತಿಯಲ್ಲಿ 18.36ಕೋಟಿ ರೂ.ಗಳ ವೆಚ್ಚದಲ್ಲಿ ಬಾಗೇಪಲ್ಲಿ-ಹಲಗೂರು (ರಾಜ್ಯ ಹೆದ್ದಾರಿ-94ರ ಸರಪಳಿ 80.57 ಕಿ.ಮೀ ರಿಂದ 103.87 ಕಿ.ಮೀ.ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿ 10.51ಕೋಟಿ ರೂ.ಗಳ ವೆಚ್ಚದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ-ಜೋನಿಗರಹಳ್ಳಿ ಸೇರುವ(ಸರಪಳಿ 13.10 ಕಿ.ಮೀ.ವರೆಗೆ) ರಸ್ತೆ ಹಾಗೂ 18.62ಕೋಟಿ ರೂ.ಗಳ ವೆಚ್ಚದಲ್ಲಿ ಮಧುಗಿರಿ ತಾಲೂಕು ವ್ಯಾಪ್ತಿ ಕೊರಟಗೆರೆ–ಆಂಧ್ರಪ್ರದೇಶ ಗಡಿಯ ಕೊಡಗದಾಲ-ಐ.ಡಿ ಹಳ್ಳಿ ಮಾರ್ಗವಾಗಿ (ರಾಜ್ಯ ಹೆದ್ದಾರಿ-160 ಸರಪಳಿ 13 ಕಿ.ಮೀ. ರಿಂದ…

ಮುಂದೆ ಓದಿ...

ಸಮರ್ಪಕ ಬರ ನಿರ್ವಹಣೆಗೆ ಡಿಸಿಎಂ ಸೂಚನೆ

 ತುಮಕೂರು:       ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ನೆಪ ಹೇಳದೆ ಬರ ನಿರ್ವಹಣೆ ಮಾಡಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ರಾಜ್ಯದ 176 ತಾಲೂಕುಗಳ ಪೈಕಿ 158 ತಾಲೂಕುಗಳು ಬರಪೀಡಿತವಾಗಿವೆ. ಜಿಲ್ಲೆಯ ಐದಾರು ತಾಲೂಕುಗಳು ಬರಪೀಡಿತಕ್ಕೊಳಗಾಗಿದ್ದನ್ನು ಮಾತ್ರ ನಾನು ಕೇಳಿದ್ದೆ. ಮಳೆಯ ಅಭಾವದಿಂದ ಈ ವರ್ಷ ಜಿಲ್ಲೆಯ ಎಲ್ಲ ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆ ನಿವಾರಣೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.       ಈಗಾಗಲೇ…

ಮುಂದೆ ಓದಿ...

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

 ತುಮಕೂರು:       ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ. ಶಿಕ್ಷಕರು ಸಮಾಜ ಹಾಗೂ ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿಜ್ಞಾನದಲ್ಲಿ ಹೊಸ-ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಂದ ಹೊರ ಹೊಮ್ಮಿಸಿಬೇಕು ಈ ದಿಸೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ನ್ನು ಉತ್ತಮ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕೆಂದು ಸಾ.ಶಿ ಇಲಾಖೆಯ ಉಪನಿರ್ದೇಶಕರಾದ ಕೆ. ಮಂಜುನಾಥ್ ತಿಳಿಸಿದರು.       ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಪ್ರೌಢಾಶಾಲೆಯಲ್ಲಿ ಏರ್ಪಡಿಸಿದ್ದ ಅಂತರಶಾಲಾ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಬಿ.ಆರ್.ಸಿ ಗಂಗಹನುಮಯ್ಯ ಮಾತನಾಡಿ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕವಾಗಿವೆ, ವಿದ್ಯಾರ್ಥಿಗಳು ತಮಗೆ ಗೊತ್ತಿರದ ವಿಚಾರಗಳನ್ನು ಶಿಕ್ಷಕರಿಂದ, ತಜ್ಞರಿಂದ, ಮಾಧ್ಯಮಿಗಳಿಂದ ಹಾಗೂ ಅಂತರ್ಜಾಲದಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಬೇಕೆಂದು ತಿಳಿಸಿದರು.       ಸಮಾರಂಭದ ಅಧ್ಯಕ್ಷತೆವಹಿಸಿದ್ದ ಡಯಟ್‍ನ ಪ್ರಾಂಶುಪಾಲರಾದ ಸಿ. ನಾಗಮಣಿ…

ಮುಂದೆ ಓದಿ...