ಪವರ್‍ಗ್ರಿಡ್ ಸಂಸ್ಥೆಯಿಂದ ರೈತರಿಗೆ ಅನ್ಯಾಯ: ಚುನಾವಣೆ ಬಹಿಷ್ಕಾರದ ಎಚ್ಚರಿಕೆ

 ತುಮಕೂರು:       ಪವರ್ ಗ್ರಿಡ್ ಸಂಸ್ಥೆ ಮತ್ತು ಕೂಡ್ಗಿ ಸಂಸ್ಥೆಯಿಂದ ಅನ್ಯಾಯಕ್ಕೊಳಗಾದ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರವನ್ನು ಮುಂಬರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಜಿಲ್ಲಾಧಿಕಾರಿಗಳು ಸಭೆ ಕರೆದು ರೈತರಿಗೆ ಸೂಕ್ತ ಪರಿಹಾರ ನೀಡುವ ಅನುಮೋದನೆ ನೀಡಬೇಕು ಇಲ್ಲದಿದ್ದರೆ ರೈತರು ಕುಟುಂಬ ಸಮೇತ ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿಕ ಸಮಾಜ, ನವದೆಹಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕಂಚೇನಹಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಸಮಾಜ ನವದೆಹಲಿ ಜಿಲ್ಲಾಧ್ಯಕ್ಷ ಸುರೇಶ್ ಕಂಚೇನಹಳ್ಳಿ ತುಮಕೂರು ತಾಲ್ಲೂಕಿನ ಬೆಳ್ಳಾವಿ ಮತ್ತು ಕೋರಾ ಹೋಬಳಿ, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕಸಬಾ ಮತ್ತು ಹುಲಿಕುಂಟೆ ಹೋಬಳಿ, ಮಧುಗಿರಿ ತಾಲ್ಲೂಕಿನ ಕಸಬಾ, ದೊಡ್ಡೇರಿ ಹೋಬಳಿ, ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಗಳಲ್ಲಿನ ರೈತರ…

ಮುಂದೆ ಓದಿ...

ಋತುಮಾನ ಬದಲಾದಂತೆ ಮಳೆ ಕಡಿಮೆಯಾಗುತ್ತಿದೆ -ಶಾಸಕ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ:       ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಯಲು ಸರ್ಕಾರ ಯತ್ತೇಚ್ಛವಾಗಿ ಹಣ ನೀಡುತ್ತಿದೆ ಇದನ್ನು ಉಪಯೋಗಿಸಿಕೊಳ್ಳುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.       ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಎಸ್.ಎಂ.ಎಫ್, ಎನ್.ಆರ್.ಇ.ಜಿ ಹಾಗೂ ಕೆ.ಎ.ಪಿ.ವೈ ಯೋಜನೆಯಡಿ ರೈತರಿಗೆ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳು ಹಾಗೂ ಯೋಜನೆಯ ರೂಪುರೇಷೆಗಳ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ನಮ್ಮ ಹಿರಿಯರು ತೋಪುಗಳು ನೆಡುತೋಪು, ಅರಣ್ಯ ಹಾಗೂ ಕೃಷಿ ಅರಣ್ಯ ಭೂಮಿಯಾಗಿ ವಿಂಗಡಿಸಿ ಮರಗಿಡಗಳನ್ನು ಬೆಳೆಸಿದ್ದರು. ಈಗ ವಿದ್ಯಾವಂತರಾಗುತ್ತಿದ್ದು, ಸ್ವಾರ್ಥ ಹೆಚ್ಚಾಗುತ್ತಿದೆ. ನಮ್ಮ ಕಣ್ಣುಮುಂದೆ ಏನು ನಡೆಯುತ್ತಿದ್ದರೂ ನಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದೇವೆ. ತಂಪಿರುವ ಕಡೆ ಮಳೆಯಾಗುತ್ತಿದ್ದು, ಮಳೆ ಇರುವ ಕಡೆ ತಂಪಿದೆ ಋತುಮಾನ ಬದಲಾದಂತೆ ಮಳೆ ಕಡಿಮೆಯಾಗುತ್ತಿದೆ. ಕರ್ನಾಟಕದ 7 ರಿಂದ 8 ಜಿಲ್ಲೆಗಳ ಭೂಮಿ ಬರಡಾಗುತ್ತಿದ್ದು, ನಾವು…

ಮುಂದೆ ಓದಿ...

ವಿ.ವಿ. ಘಟಿಕೋತ್ಸವ : ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ಸಂಭ್ರಮ

 ತುಮಕೂರು:       ತುಮಕೂರು ವಿಶ್ವವಿದ್ಯಾನಿಲಯದಲ್ಲಿಂದು ನಡೆದ ವಾರ್ಷಿಕ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಪೋಷಕರು ಸಂಭ್ರಮಿಸಿದರು.       ಈ ಘಟಿಕೋತ್ಸವದಲ್ಲಿ 67 ಮಂದಿಗೆ ಪಿಎಚ್‍ಡಿ, 68 ವಿದ್ಯಾರ್ಥಿಗಳಿಗೆ 89 ಚಿನ್ನದ ಪದಕ ಹಾಗೂ 9442 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೆಚ್ಚು ಚಿನ್ನದ ಪದಕ ಪಡೆದವರು:-       ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ಕೆ.ಆರ್ ಕಿಶೋರ್‍ಕುಮಾರ್ 5 ಚಿನ್ನದ ಪದಕ ಹಾಗೂ ಎಂ.ಎ ಕನ್ನಡ ವಿಭಾಗದಲ್ಲಿ ಕೆ.ಎಂ. ಗೋವಿಂದರಾಜು ಅವರಿಗೆ 4 ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬಿ.ಎ ಕನ್ನಡ (ಐಚ್ಛಿಕ)ವಿಭಾಗದಲ್ಲಿ ಕೆ.ಎನ್. ಪವನ, ಬಿ.ಕಾಂ ವಿಭಾಗದಲ್ಲಿ ಕೆ.ವಿ ಶ್ರೀವಲ್ಲಿ, ಬಿ.ಎಸ್ಸಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಚಿರಾಗ್ ಎಸ್., ಎಂ.ಕಾಂ ವಿಭಾಗದ ಕೆ.ಎನ್. ವಸುಧ ಅವರು ತಲಾ 3 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ…

ಮುಂದೆ ಓದಿ...

ಸೌಂದರ್ಯ ಪ್ರಜ್ಞೆ ಇದ್ದವರು ಸಾಮರಸ್ಯ ಬದುಕು ರೂಪಿಸುತ್ತಾರೆ

  ತುರವೇಕೆರೆ:       ಸಾಂಸ್ಕೃತಿಕ ಹಾಗೂ ಸೌಂದರ್ಯ ಪ್ರಜ್ಞೆ ಇದ್ದವರು ನಮ್ಮ ದೇಶದ ಕಲೆ, ಸಂಸೃತಿ ಪ್ರೀತಿಸುತ್ತಾ ಸಮಾಜದಲ್ಲಿ ಸಾಮರಸ್ಯ ಬದುಕು ರೂಪಿಸುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದರು.      ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗ ಮಂದಿರ ಆವರಣದಲ್ಲಿ ಸೋಮವಾರ ಸಂಜೆ ಸಂಗಮ ಸಾಂಸ್ಕೃತಿಕ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ, ರೊಟರಿ ಕ್ಲಬ್ ತುರುವೇಕೆರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಬಿದರೆ ಆಳ್ವಾಸ್ ಸಂಸ್ಥೆಯು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ರಾಜ ಮಹಾರಾಜರ ಕಾಲದಲ್ಲಿ ತಮ್ಮ ನಾಡಿನ ಕಲೆ, ಸಂಸೃತಿಯನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳಸುತ್ತಿದ್ದರು. ಈಗ ಸರ್ಕಾರಗಳು ಸಹ ನಮ್ಮ ಕಲೆ ಸಂಸೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಆಳ್ವಾಸ್ ನುಡಿ ಸಿರಿ…

ಮುಂದೆ ಓದಿ...