ನಾಳೆ ತುಮಕೂರಿಗೆ ಸಿಎಂ ಭೇಟಿ

ತುಮಕೂರು:        ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ(ಮಾರ್ಚ್ 2) ತುಮಕೂರಿಗೆ ಆಗಮಿಸುತ್ತಿದ್ದಾರೆ .       ಮಧ್ಯಾಹ್ನ 1 ಗಂಟೆಗೆ ನಗರಕ್ಕೆ ಭೇಟಿ ನೀಡಿ ಗಾಜಿನ ಮನೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದೆ ಓದಿ...

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸ್ತ್ರೀಶಕ್ತಿ ಯೋಜನೆ ಜಾರಿ

 ತುಮಕೂರು:       ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ದೃಷ್ಟಿಯಿಂದ ಸರ್ಕಾರವು ಸ್ತ್ರೀಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ “ಸ್ತ್ರೀ ಶಕ್ತಿ ಸಮಾವೇಶ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಶಕ್ತಿ ಗುಂಪುಗಳು ಮಹಿಳೆಯರಿಗೆ ಹೊಸ ಚೈತನ್ಯ ನೀಡಿ ಆರ್ಥಿಕ, ಸಾಮಾಜಿಕ ಸದೃಢತೆಯನ್ನು ತಂದುಕೊಟ್ಟಿದೆ. ಸ್ತ್ರೀಶಕ್ತಿ ಸಂಘಗಳು ಅನೇಕ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಎಂದು ತಿಳಿಸಿದರು.       ಜಿಲ್ಲೆಯಲ್ಲಿ 10937 ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿದ್ದು, 1.20 ಲಕ್ಷಕ್ಕೂ ಹೆಚ್ಚು ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದು…

ಮುಂದೆ ಓದಿ...

ತುಮಕೂರು ಜಿಲ್ಲೆಯ 3 ತಾಲ್ಲೂಕುಗಳಲ್ಲಿ CBNAAT ಕ್ಷಯ ಪತ್ತೆ ಯಂತ್ರ

 ತುಮಕೂರು:       ಜಿಲ್ಲೆಯ ತಿಪಟೂರು, ಪಾವಗಡ, ತುಮಕೂರು ತಾಲ್ಲೂಕುಗಳಲ್ಲಿ ಒಆಖ ಕ್ಷಯ ಪತ್ತೆಗಾಗಿ ಜೀನ್ ಎಕ್ಸ್‍ಪರ್ಟ್ (CBNAAT) ಯಂತ್ರವನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು(ಯೋಜನೆಗಳ) ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.       ಅಃಓಂಂಖಿ ಯಂತ್ರದ ನೆರವಿನಿಂದ ಸೂಕ್ಷ್ಮತೆಯಿಲ್ಲದ ರೋಗನಿರೋಧಕ ಕ್ಷಯ (MDR) ರೋಗವನ್ನು 2 ಗಂಟೆಗಳ ಅವಧಿಯಲ್ಲಿಯೇ ಪತ್ತೆ ಮಾಡಬಹುದಾಗಿದೆ. ಪ್ರಾಥಮಿಕ ಹಂತದ ಚಿಕಿತ್ಸೆಗೆ ಸ್ಪಂದಿಸದವರನ್ನು MDR ಕ್ಷಯ ರೋಗಿಗಳೆಂದು ಗುರುತಿಸಲಾಗುವುದು. ಇವರಿಗೆ ನಗರದ ಶ್ರೀದೇವಿ…

ಮುಂದೆ ಓದಿ...

ದುಡಿಯುವ ಕೈಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ – ಸಂಸದ ಎಸ್.ಪಿ.ಎಂ

ತುಮಕೂರು:       ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕ ಕೈಗಳಿಗೆ ಎಲ್ಲರಂತೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.       ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳ ಸಹಯೋಗದಲ್ಲಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ “ಕಾರ್ಮಿಕ ಸಮ್ಮಾನ ಪ್ರಶಸ್ತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಕಾರ್ಯಕ್ರಮಗಳ ಸೌಲಭ್ಯ ತಲುಪಬೇಕು. ಕಟ್ಟಡ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ವಿಮಾ ಸೌಲಭ್ಯ ನೀಡಲು ಅನುದಾನ ಲಭ್ಯವಿದ್ದು, ಅಧಿಕಾರಿಗಳು ಸೌಲಭ್ಯಗಳನ್ನು ಶೀಘ್ರವೇ ಅರ್ಹರಿಗೆ ನೀಡಬೇಕು. ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ, ಹೆರಿಗೆ, ಮದುವೆಗಾಗಿ ಧನಸಹಾಯ ಹಾಗೂ ವಸತಿ…

ಮುಂದೆ ಓದಿ...

ನೀರನ್ನು ವ್ಯರ್ಥಮಾಡದೇ ಬಳಸಿ – ಶಾಸಕ ಎಂ.ವಿ. ವೀರಭದ್ರಯ್ಯ

ಮಧುಗಿರಿ :       ಇಂದಿನ ಪರಿಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಎಲ್ಲರಿಗೂ ಅಗತ್ಯವಾಗಿದ್ದು, ಜನತೆ ನೀರನ್ನು ವ್ಯರ್ಥ ಮಾಡದೇ ಬಳಸಿಕೊಳ್ಳಬೇಕು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.       ಪಟ್ಟಣದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಒಂದೇ ದಿನದಲ್ಲಿ 6 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಈಗ ಒಂದು ಶುದ್ದ ಕುಡಿಯುವ ನೀರಿನ ಘಟಕ ಮಾತ್ರ ಕಾರ್ಯನಿರ್ವಹಹಿಸುತ್ತಿದ್ದು, ಇದರಿಂದ ಜನತೆಗೆ ಕುಡಿಯುವ ನೀರಿಗೆ ಬಹಳ ತೊಂದರೆಯುಂಟಾಗಿತ್ತು. ಇದನ್ನು ಮನಗಂಡು ಸರ್ಕಾರದ ವತಿಯಿಂದ ಅನುಧಾನ ಬಿಡುಗಡೆಗೊಳಿಸಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ 6 ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.       ಈ ಸಂದರ್ಭದಲ್ಲಿ ಲಿಂಗೇನಹಳ್ಳಿ ಮತ್ತು ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ…

ಮುಂದೆ ಓದಿ...

ಮಾನವೀಯತೆ ನಂತರ ರಾಜಕೀಯ: ಶಾಸಕ ಗೌರಿಶಂಕರ್

ತುಮಕೂರು:       ಗ್ರಾಮಾಂತರ ಜನರ ಋಣ ನನ್ನ ಮೇಲಿದೆ, ಮತ ಹಾಕಿ ಕೊಲಿ ಮಾಡಲು ಕಳುಹಿಸಿಕೊಟ್ಟಿದ್ದಾರೆ, ಕೆಲಸ ಮಾಡಿ ಋಣ ತೀರಿಸುತ್ತೇನೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.       ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಜಿ.ಪಂ.ವ್ಯಾಪ್ತಿಯಲ್ಲಿ 311 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ, ಶಾಸಕನಾದ ಮೇಲೆ ಲೂಟಿ ಮಾಡಿದ, ಅದು ಇದು ಎಂದೆಲ್ಲ ಮಾಜಿ ಶಾಸಕರು ಮಾತನಾಡುತ್ತಾರೆ, ನನ್ನ ಕುಟುಂಬ ಇಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಮೊದಲು ನೀವು ಮಾನವೀಯತೆ ರೂಢಿಸಿಕೊಳ್ಳಿ ನಂತರ ರಾಜಕಾರಣ ಮಾಡೋಣ, ತಂದೆಗೆ ಹುಷಾರಿಲ್ಲದ ಸಮಯದಲ್ಲಿ ಮಾತೆತ್ತಿದ್ದರೆ ಕಿರುಕುಳ ನೀಡಿದರು ಎಂದು ಭಾವುಕರಾದರು.       ನಾನು ಇಂಡಿಯಾ ಇನ್ ಇಂಡಿಯಾ ಪ್ರಾಡೆಕ್ಟ್, ಅವ್ರು ಮೇಡ್ ಇನ್ ಚೀನ್ ಯೂಸ್ ಅಂಡ್ ಥ್ರೋ…

ಮುಂದೆ ಓದಿ...

ಬಿ.ಸತ್ಯನಾರಾಯಣ್ ರಿಂದ ಕ.ರಾ.ರ.ಸಾ.ನಿಗಮದ ಕಛೇರಿ ಪರಿಶೀಲನೆ

 ತುಮಕೂರು:       ಶಿರಾ ವಿಧಾನ ಸಭಾ ಕ್ಷೇತ್ರ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ ಅವರು ತುಮಕೂರು ವಿಭಾಗದ ಕಛೇರಿಗೆ ಭೇಟಿ ನೀಡಿ ವಿಭಾಗೀಯ ಕಛೇರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲಿಸಿದರು.       ಈ ಸಂದರ್ಭದಲ್ಲಿ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರ ಕುಮಾರ್ ಹಾಗೂ ವಿಭಾಗದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದೆ ಓದಿ...

ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಗ್ರಹ

ತುಮಕೂರು:      ನಗರದ ಖಾಸಗೀ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡರವರು ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ವಿರುದ್ಧ ಹರಿಹಾಯ್ದರು.       ಗೌರಿಶಂಕರ್ ವಿರುದ್ಧ ಎಕ್ಸ್ಟ್ರಾಕ್ಷನ್ ಕೇಸು ದಾಖಲಿಸಲಬೇಕು ಮತ್ತು ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಯನ್ನು ಮುಖ್ಯ ಸಾಕ್ಷಿಯಾಗಿ ಪರಿಗಣಿಸಬೇಕು. ಭೂ ವಿಜ್ಞಾನಿಯವರು ಗಣಿ ಇಲಾಖೆಯ ಉಪ ನಿರ್ದೇಶಕರಿಗೆ ನೀಡಿರುವ ಹೇಳಿಕೆಯನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಶಾಸಕರು ಕಾನೂನನ್ನು ಕೈಗೆತ್ತಿಕೊಂಡಿರುವುದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಪಾರದರ್ಶಕ ತನಿಖೆಗೆ ಅನುವುಮಾಡಿಕೊಡಬೇಕು. ತಮ್ಮ ಪಕ್ಷದ ಶಾಸಕನನ್ನು ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.       ದಿನಾಂಕ 21-.01-2019 ರಂದು ಭ್ರಷ್ಠಾಚಾರ ನಿಗ್ರಹದಳದ ಪೋಲೀಸ್ ಉಪಾದೀಕ್ಷಕರಿಗೆ ದೂರು ನೀಡಲಾಗಿದ್ದು ಸದರೀ…

ಮುಂದೆ ಓದಿ...