ಮಹಾಶಿವರಾತ್ರಿ : ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಂದ ಮಧುಗಿರಿ ಶ್ರೀ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಧುಗಿರಿ:-       ಪಟ್ಟಣದ ಹೃದಯ ಭಾಗದಲ್ಲಿ ಹರಿಹರ ಸಂಗಮದಂತೆ ಮಧುಗಿರಿಯ ಎರಡು ಕಣ್ಣುಗಳಂತೆ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳಿವೆ. ಮಹಾಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕøತಿಕ ಭಜನಾ ಕಾರ್ಯಕ್ರಮಗಳು, ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಧ್ಯೆರಾತ್ರಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.      ದೇವಸ್ಥಾನದ ಇತಿಹಾಸ:       ಜಗತ್ತಿನ ಜೀವನದಲ್ಲಿ ಜನತೆಯ ನಂಬುಗೆಯ ಶಕ್ತಿಯಿಂದ ಭಕ್ತಿಪೂರ್ಣದಿಂದ ವಿವಿಧ ರೂಪದಿಂದ ಪರಮಾತ್ಮನು ತನ್ನ ದರ್ಶನವನ್ನು ಅನೇಕ ಕಡೆ ಪ್ರದರ್ಶನ ಮಾಡಿ ತೋರಿಸಿರುವಂತೆ ವನದೇವತೆಯ ಮಡಿಲೆನಿಸಿದ ಈ ಮಧುಗಿರಿ ಎಂಬ ಸುಗ್ರಾಮದಲ್ಲಿ ಉದ್ಭವಿಸಿ ಜನತೆಯನ್ನು ಮುಗ್ಧಗೊಳಿಸಿರುತ್ತಾನೆ. ಈ ಮೂರ್ತಿಯು ಪ್ರಪಂಚಕ್ಕೆ ಸುಪ್ರಸಿದ್ದವಾದ ಕಾಶೀಲಿಂಗ ಮೂರ್ತಿಯನ್ನು ಹೋಲುತ್ತದೆ ಇಂತಹ ದಿವ್ಯ ಸುಂದರ ಉದ್ಬವ ಮೂರ್ತಿಯ…

ಮುಂದೆ ಓದಿ...

ವಿಜಯ ಸಂಕಲ್ಪ ಯಾತ್ರೆ : ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ

ಮಧುಗಿರಿ :       ನರೇಂದ್ರ ಮೋದಿಯ ಜನಪರ ಆಡಳಿತವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಮತ್ತೊಮ್ಮೆ ಮೋದಿ ಕೇಂದ್ರದಲ್ಲಿ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಧುಗಿರಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಇ.ರಮೇಶ್‍ರೆಡ್ಡಿ ತಿಳಿಸಿದರು.        ಪಟ್ಟಣದ ಶ್ರೀದಂಡಿನ ಮಾರಮ್ಮ ದೇಗುಲದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸಮರ್ಥವಾಗಿ ಅಭಿವೃದ್ಧಿಯಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮೋ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಅದಮ್ಯ ವಿಶ್ವಾಸವಿದೆ. ಅದಕ್ಕಾಗಿ ಕ್ಷೇತ್ರದ ಕಾರ್ಯಕರ್ತರ ಮನೆ ಮನೆಗೂ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ಜನಪರ ಆಡಳಿತವನ್ನು ಮನದಟ್ಟು ಮಾಡಿಕೊಡಬೇಕಿದೆ. ಆಯುಶ್ಮಾನ್ ಭಾರತ್, ಫಸಲ್‍ಭೀಮಾ, ಉಜ್ವಲ್, ಕಿಸಾನ್ ಸಮ್ಮಾನ್ ಹಾಗೂ ಇತರೆ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಜನಪರ ಯೋಜನೆಗಳನ್ನು ಪ್ರಚಾರ…

ಮುಂದೆ ಓದಿ...

ಪೊಲೀಸ್ ಠಾಣೆಯ ಮುಂದೆ ಮಲಗಿ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಪ್ರತಿಭಟನೆ

  ತುಮಕೂರು :       ಬಿಜೆಪಿ ಮುಖಂಡನೊರ್ವನನ್ನು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದಕ್ಕೆ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದಾರೆ.       ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ಕ್ಯಾತಸಂದ್ರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು.       ಈ ಹಿನ್ನಲೆಯಲ್ಲಿ ಆಕ್ರೊಶಗೊಂಡ ಬಿ.ಸುರೇಶ್ ಗೌಡರು, ತುಮಕೂರು ಗ್ರಾಮಾಂತರ ಕ್ಷೇತ್ರದ ಊರ್ಡಿಗೆರೆ ಹೋಬಳಿ ಬೆಟ್ಟಸೀತಕಲ್ಲು ಗ್ರಾಮದ ವಾಸಿಯಾದ ತಾಪಂ ಸದಸ್ಯರು ಆಗಿರುವ ಹನುಮಂತರಾಜು ದಲಿತ ಸಮುದಾಯಕ್ಕೆ ಸೇರಿರುವ ಇವರ ಮೇಲೆ ಇದೇ ಗ್ರಾಮದ ಜೆಡಿಎಸ್ ಬೆಂಬಲಿತ ಗ್ರಾಪಂ…

ಮುಂದೆ ಓದಿ...

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಇಬ್ಬರಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು

 ತುಮಕೂರು:       ಗಂಡ, ಅತ್ತೆ, ಮಾವಂದಿರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಗರದ ಗೋಕುಲ ಬಡಾವಣೆ ನಿವಾಸಿ ರಾಜೇಶ್ವರಿ ಹಾಗೂ ಈಕೆಯ ತಮ್ಮ ಮೋಹನ್ ಕುಮಾರ್ ಅವರಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.       ಆರೋಪಿ ರಾಜೇಶ್ವರಿಯು ತನ್ನ ಗಂಡ ಆನಂದ, ಮಾವ ರಾಮಕೃಷ್ಣ ಹಾಗೂ ಅತ್ತೆ ನಿಂಗಮ್ಮ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈಕೆಯು ಮನೆಯಲ್ಲಿ ಸರಿಯಾಗಿ ಕೆಲಸ ಮಾಡದೆ, ಮನೆಯವರನ್ನು ಗೌರವ ತೋರದೆ ಏಕವಚನದಲ್ಲಿ ಬೈಯುವುದು, ಗಂಡನನ್ನು ಷಂಡನನ್ನ ಮಗ ಎಂದು ಪದೇಪದೇ ಹಿಯ್ಯಾಳಿಸಿ ತವರು ಮನೆಗೆ ಹೋಗುವುದು, ತನ್ನ ತಮ್ಮ ಮೋಹನ್‍ಕುಮಾರ್‍ನೊಂದಿಗೆ ಸೇರಿ ನೀವೆಲ್ಲಾ ಇರುವುದಕ್ಕಿಂತ ಕೆರೆಗೋ-ಬಾವಿಗೋ ಬಿದ್ದು ಸಾಯಿರಿ. ವರದಕ್ಷಿಣೆ ಕೇಸು ಕೊಟ್ಟು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು…

ಮುಂದೆ ಓದಿ...

15 ದಿನಗಳೊಳಗಾಗಿ ರೈತರಿಗೆ ಬೆಳೆ ವಿಮಾ ಪರಿಹಾರ ಧನವನ್ನು ಪಾವತಿಸುವಂತೆ ತಾಕೀತು

 ತುಮಕೂರು:         ಜಿಲ್ಲೆಯು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನಲೆಯಲ್ಲಿ ಬೆಳೆ ನಷ್ಟದ ವಾಸ್ತವಿಕ ಪರಿಸ್ಥಿತಿಯನ್ನು ಅರಿತು 15 ದಿನಗೊಳಗಾಗಿ ಸಂಕಷ್ಟದಲ್ಲಿರುವ ಅರ್ಹ ರೈತರ ಖಾತೆಗೆ ಪರಿಹಾರಧನವನ್ನು ಜಮಾ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಕೃಷಿ ಇಲಾಖೆ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಅವರಿಗೆ ತಾಕೀತು ಮಾಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 9551 ರೈತರ ಅರ್ಜಿಗಳು ತಿರಸ್ಕೃತಗೊಂಡಿರುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಅವರು ಪ್ರಶ್ನಿಸಿದಾಗ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಉತ್ತರಿಸುತ್ತಾ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಲೋಪದೋಷದಿಂದ ಅರ್ಜಿಗಳು ತಿರಸ್ಕøತವಾಗಿವೆ. ಬೆಳೆ ನಷ್ಟ ಪರಿಹಾರ ಧನವನ್ನು ವಿತರಿಸಲು ಕೇಂದ್ರ ಸರ್ಕಾರದಿಂದ ಈಗಾಗಲೇ 681ಲಕ್ಷ ರೂ.ಗಳ ಹಣ ಬಿಡುಗಡೆಯಾಗಿದ್ದು,…

ಮುಂದೆ ಓದಿ...

ಮುಸ್ಲಿಂ ಕಾಲೋನಿಗಳಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣ – ಶಾಸಕ ಮಸಾಲಾಜಯರಾಮ್

ತುರುವೇಕೆರೆ :       ವಿಧಾನಸಭಾ ಕ್ಷೇತ್ರದ ಮುಸ್ಲಿಂ ಕಾಲೋನಿಗಳಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.       ತಾಲೂಕಿನ ಅಕ್ಕಳಸಂದ್ರ ಕಾಲೋನಿ 20 ಲಕ್ಷ ಹಾಗೂ ಚಂಡೂರು ಮುಸ್ಲಿಂ ಕಾಲೋನಿ 10 ಲಕ್ಷ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಮಂಜೂರಾದ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಿ.ಸಿ ರೋಡ್ ಮತ್ತು ಬಾಕ್ಸ್‍ಚರಂಡಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿಶೇಷ ಅನುದಾನವನ್ನು ತಂದು ಮುಸ್ಲಿಂ ಕಾಲೋನಿಗಳಿಗೆ ಕಾಂಕ್ರೇಟ್ ರಸ್ತೆ, ಚರಂಡಿ ಕಾಮಗಾರಿಗಳನ್ನು ಈಗಾಗಲೇ ಮಾಯಸಂದ್ರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರು ಕಳಪೆ ಮಾಡದಂತೆ ಸಾರ್ವಜನಿಕರು ಹೆಚ್ಚು ನಿಗಾವಹಿಸಿ ಉತ್ತಮ ಗುಣಮಟ್ಟ ಕಾಮಾಗಾರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ರಸ್ತ ಅಭಿವೃದ್ದಿ…

ಮುಂದೆ ಓದಿ...