ಸರ್ಕಾರದ ನೀತಿ ಖಂಡಿಸಿ ಕ್ರಷರ್ ಮಾಲೀಕರ ಪ್ರತಿಭಟನೆ

 ತುಮಕೂರು :        ರಾಜ್ಯ ಸರ್ಕಾರದ ದಿನಕ್ಕೊಂದು ನೀತಿಯ ಮೂಲಕ ಕ್ವಾರಿ ಮತ್ತು ಕ್ರಷರ್ಗಳ ಮಾಲೀಕರ ಮೇಲೆ ಗಧಾ ಪ್ರಹಾರ ನಡೆಸುತ್ತಿರುವುದನ್ನು ಹಾಗೂ ಎರಡೆರಡು ತೆರಿಗೆ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಫೆಡರೇಷನ್ ಆಫ್ ಕರ್ನಾಟಕ ಕ್ಯಾರಿ ಮತ್ತು ಸ್ಟೋನ್ ಕ್ರಷರ್ ಒನ¾õï್ಸ ಅಸೋಸಿಯೇಷನ್ಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕ್ರಷರ್ ಮಾಲೀಕರು ಹಾಗೂ ಕಾರ್ಮಿಕರು ಸರ್ಕಾರದ ದ್ವಂದ್ವ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರು ಸಂಘದ ರಾಜ್ಯ ಕಾರ್ಯದರ್ಶಿ ಭಾಸ್ಕರ್, ಜೆಲ್ಲಿ ಕ್ರಷರ್ ಹಾಗೂ…

ಮುಂದೆ ಓದಿ...

ವೈಭವದ ಸಿದ್ದಲಿಂಗೇಶ್ವರಸ್ವಾಮಿ ರಥೋತ್ಸವ

ತುಮಕೂರು:       ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತವಾಗಿ ಇಂದು ನಡೆಯಿತು.       ನಡೆದಾಡುವ ದೇವರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ರಥೋತ್ಸವ ಇದಾಗಿದ್ದು, ಮಧ್ಯಾಹ್ನ 12.10 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಹಿರಿಯ ಶ್ರೀಗಳಂತೆ ರಥದ ಬಲಭಾಗದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.       ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯನ್ನು ಶ್ರೀಗಳ ಗದ್ದುಗೆ ಬಳಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನಂತರ ರಥದ ಸುತ್ತ ಮೂರು ಸುತ್ತು ಸುತ್ತಿದ ನಂತರ ರಥಕ್ಕೆ ಕೂರಿಸಲಾಯಿತು. ನಂತರ ಸಿದ್ದಲಿಂಗ ಸ್ವಾಮೀಜಿಯವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಚಾಲನೆ ನೀಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ…

ಮುಂದೆ ಓದಿ...

ವಿಜ್ಞಾನ ಶಿಕ್ಷಣ : “ಲ್ಯಾಬ್-ಆನ್-ಬೈಕು”

 ತುಮಕೂರು:       ನಗರದ ನಾಗರಿಕರಿಗೆ ಅತ್ಯಾಧುನಿಕ ರೀತಿಯಲ್ಲಿ ಸ್ಮಾರ್ಟ್ ರಸ್ತೆ, ಮಲ್ಟಿ ಯುಟಿಲಿಟಿ ಮಾಲ್, ಸ್ಮಾರ್ಟ್ ಲಾಂಜ್, ಎಲ್‍ಇಡಿ ಲೈಟ್ಸ್, ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ಸ್ಮಾರ್ಟ್ ಉದ್ಯಾನವನ ಹೀಗೆ ಅಗತ್ಯವಿರುವ ಹಲವಾರು ಸೌಲಭ್ಯ ಹಾಗೂ ಸಂಪರ್ಕ ಸಾಧನಗಳನ್ನು ಒದಗಿಸಲು ಹೊರಟಿರುವ ಸ್ಮಾರ್ಟ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಸದ್ದಿಲ್ಲದೆ ಲ್ಯಾಬ್ ಆನ್ ಬೈಕು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಏನಿದು ಲ್ಯಾಬ್ ಆನ್ ಬೈಕು:         ಕಾರ್ಯಕ್ರಮದಲ್ಲಿ ವಿಜ್ಞಾನ ಬೋಧಕರು ತಮ್ಮ ಮೊಬೈಲ್ ಲ್ಯಾಬ್ ಕಿಟ್‍ಗಳೊಂದಿಗೆ ದ್ವಿಚಕ್ರದಲ್ಲಿ ಒಂದು ಶಾಲೆಯಿಂದ ಮೊತ್ತೊಂದು ಶಾಲೆಗೆ ಪ್ರಯಾಣಿಸಿ ಮಕ್ಕಳಿಗೆ ಹಸ್ತಸ್ಪರ್ಶಿ ವಿಧಾನದ ಮೂಲಕ ವಿಜ್ಞಾನ ಶಿಕ್ಷಣದ ಬೋಧನೆ ಹಾಗೂ ತರಬೇತಿ ನೀಡಿದ್ದಾರೆ. ಇದಕ್ಕಾಗಿ 9 ಬೋಧನಾ ಸಿಬ್ಬಂದಿಯೊಂದಿಗೆ ಒಂದು ಮೊಬೈಲ್ ಸೈನ್ಸ್ ಲ್ಯಾಬ್ ಹಾಗೂ 3 ಬೈಕ್‍ಗಳನ್ನು ಬಳಸಿಕೊಳ್ಳಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಾತ್ರ:…

ಮುಂದೆ ಓದಿ...

ಯುವಕರು ತಮ್ಮನ್ನು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು

ಕೊರಟಗೆರೆ :       ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ತಮ್ಮಗಳನ್ನು ತೊಡಗಿಸಿಕೊಂಡರೆ ಉತ್ತಮ ಸಾಮಾಜಿಕ ಪರಿಸರ ನಿರ್ಮಾಣವಾಗುತ್ತದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷರಾದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.       ಅವರು ಶ್ರೀರಣಬೈರೆಗೌಡ ಯುವಸೇವಾ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾಸಮೀತಿ ಅವರಿಂದ ಪಟ್ಟಣದ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾಶಿವರಾತ್ರಿಯಂದು ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರು ಆಧುನಿಕತೆಯ ಮೋಜಿಗೆ ಬಿದ್ದು, ಸಮಾಜದ ಒಳಿತನ್ನು ಮರೆತು, ಹಿರಿಯರಲ್ಲಿನ ಗೌರವವನ್ನು ಸಹ ಕಳೆದುಕೊಳ್ಳುತ್ತಾ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಕರು ತಮ್ಮ ದೈನಂದಿನ ಕೆಲಸಗಳೊಂದಿಗೆ ಧಾರ್ಮಿಕತೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿಯಾಗುತ್ತದೆ, ಯುವಕರು ಧಾರ್ಮಿಕತೆಯನ್ನು ಮತ್ತು ದೈವತ್ವದ ಮಹತ್ವದ ಬಗ್ಗೆ ತಿಳಿದುಕೊಂಡರೆ ಮಾನಸಿಕವಾಗಿ ಸದೃಡರಾಗುವುದರೊಂದಿಗೆ ಏಕಾಗ್ರತೆಯನ್ನು…

ಮುಂದೆ ಓದಿ...

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಹಾಲಿ ಶಾಸಕ ಮಸಾಲೆ ಜಯರಾಮ್ ತಿರುಗೇಟು

ತುರುವೇಕೆರೆ:       ಸರ್ಕಾರ ಅಭಿವೃದ್ದಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಬೇಕಾದರೆ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಗುರಿ ನಿಗದಿಗೊಳಿಸಿ ಕ್ರಿಯಾಯೋಜನೆ ರೂಪಿಸಲಾಗಿರುತ್ತದೆ, ಅದರಂತೆ ನೆನಗುದಿಗೆ ಬಿದ್ದಿರುವ ಹಿಂದಿನ ಕಾಮಗಾರಿಗಳನ್ನು ಚಾಲನೆಗೊಳಿಸುವ ಕೆಲಸ ಆಯಾ ಸ್ಥಳೀಯ ಶಾಸಕರ ಜವಬ್ದಾರಿಯಾಗಿರುತ್ತದೆ ಎಂಬುದನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಅರಿಯಬೇಕಿದೆ ಎಂದು ಶಾಸಕ ಮಸಾಲೆಜಯರಾಮ್ ತಿರುಗೇಟು ನೀಡಿದರು.       ತಾಲೂಕಿನ ದಬ್ಬೇಗಟ್ಟ ಹೋಬಳಿ ಗುರುವಿನಮಠ ಗ್ರಾಮದಲ್ಲಿ 96ಲಕ್ಷವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಡಿದ ಅವರು ಈ ಹಿಂದಿನ ಸರ್ಕಾರದಲ್ಲಿ ಮುಂಜೂರಾದ ಕಾಮಗಾರಿಗಳಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನ ಹಾಗೂ ಸರ್ಕಾರದ ಮಟ್ಟದಲ್ಲಿ ಕ್ಷೇತ್ರಕ್ಕೆ ಬೇಕಾಗಿರುವ ಕಾಮಗಾರಿಗಳನ್ನು ಅನುಮೋದನೆಗೊಳಿಸಿಕೊಂಡು ಬರುವ ತಾಕತ್ತು ನನಗಿದೆ. ಕ್ಷೇತ್ರದ ಅಭಿವೃದ್ದಿ ಮಾಡುತ್ತಿರುವ ನನಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಪುಕ್ಕಟೆ ಸಲಹೆ ಅವಶ್ಯಕತೆಯಿಲ್ಲ, ಜನರು ಅಧಿಕಾರ ಕೊಟ್ಟಿರುವುದು ನನಗೆ ತಾಲೂಕಿನ ಕ್ಷೇತ್ರದ ಜನರ ಪರವಾಗಿ…

ಮುಂದೆ ಓದಿ...