ಪಿಡಿಓ ವಿರುದ್ಧ ನಿವೃತ್ತ ಶಿಕ್ಷಕನ ಆರೋಪ

ತುರುವೇಕೆರೆ:       ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಿ.ಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತಾಗಿದ್ದು ಆದರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಮ್ಮ ಸಹೋದರರೊಡಗೂಡಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಮಾಹಿತಿ ಹಕ್ಕು ಅಧಿನಿಯಮದಡಿ ದೇವಾಲಯದ ಖಾತೆ ನಕಲು ಕೇಳಿದರೆ ದಾಖಲೆ ನೀಡುತ್ತಿಲ್ಲವೆಂದು ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಹೆಚ್.ಎಲ್.ಕೃಷ್ಣಮೂರ್ತಿ ಆರೋಪಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತು ಈ ದೇವಾಲಯದ ನಿರ್ಮಾಣವನ್ನು ನಮ್ಮ ತಂದೆಯವರು ತಮ್ಮ ಸ್ವಂತ ಜಾಗದಲ್ಲಿ ಸ್ವಂತ ಕರ್ಚಿನಲ್ಲಿ ನಿರ್ಮಿಸಿದ್ದರು. ನಾವು ಮೂವರು ಸಹೋದರರು ಆದರೆ ನನ್ನನ್ನು ಹೊರತುಪಡಿಸಿ ದೇವಾಲಯದ ಜಾಗವನ್ನು ನನ್ನ ಸಹೋದರರು ಖಾತೆ ಮಾಡಿಸಿಕೊಂಡಿರುವ ಸಂಶಯ ನನ್ನಲಿದೆ. ದೇವಾಲಯದ ಪೂಜಾಕೈಂಕರ್ಯಗಳಿಂದ ನನ್ನನ್ನು ಹೊರಗಿಟ್ಟಿರುವುದು ಒಂದೆಡೆಯಾದರೆ ದೇವಾಲಯದ ಖಾತೆ ನಕಲನ್ನು…

ಮುಂದೆ ಓದಿ...

ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಿ – ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ :        ಚುನಾವಣೆಯಲ್ಲಿ ನೀಡಿದ ಮಾತಿನಂತೆ ಈ ಗ್ರಾಮದ ರಸ್ತೆಗೆ ಅನುದಾನ ನೀಡಿದ್ದು, ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.       ಮಧುಗಿರಿ ತಾಲೂಕು ಕಸಬಾ ಹೋಬಳಿಯ ಸೋಗೇನಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸೋಗೇನಹಳ್ಳಿ-ಗೊಲ್ಲರಹಟ್ಟಿ-ಗೌರಿಬಿದನೂರು-ಹಿಂದೂಪೂರ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಂತಿಯ ವಾತವರಣವನ್ನು ನಾನು ಬಯಸಿದ್ದು, ಜನರ ಸೇವಕರಂತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಗುರಿಯಾಗಿದ್ದು, ಯಾರೂ ರಾಜಕೀಯ ಬೆರಸಬಾರದು ಎಂದರು.       ಅಭಿವೃದ್ಧಿ ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯ 410 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೀರಾವರಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. 3-4 ವರ್ಷಗಳಲ್ಲಿ ನೀರು ನಮ್ಮ ಕೆರೆಗಳಿಗೆ ಹರಿಯಲಿದೆ. ಆದ್ದರಿಂದ ಎಲ್ಲರೂ ಧೈರ್ಯದಿಂದ…

ಮುಂದೆ ಓದಿ...

  ಕಾನೂನು ಎಲ್ಲರ ಸ್ವತ್ತು

ಚಿಕ್ಕನಾಯಕನಹಳ್ಳಿ:       ಕಾನೂನು ಎಲ್ಲರ ಸ್ವತ್ತು ಕುಟುಂಬದಲ್ಲಿ ಅತ್ತೆ ಹಾಗೂ ಗಂಡ ಎನೋ ಅಂದರು ಅಂತ ಸಣ್ಣ ಪುಟ್ಟ ವಿಚಾರಗಳಿಗೆ ನ್ಯಾಯಾಲಯದ ಮೆಟ್ಟಿಲನ್ನು ಯಾರೂ ಹತ್ತಬೇಡಿ. ಮಹಿಳೆಯರಿಗೆ ನೀಡಿರುವ ಕಾನೂನು ಸೌಲಭ್ಯಗಳನ್ನು ನ್ಯಾಯೋಚಿತವಾಗಿ ಪಡೆದು ಸದುಪಯೋಗ ಮಾಡಿಕೊಂಡು ಸಾಮರಸ್ಯ ಜೀವನದಲ್ಲಿ ಮಹಿಳೆಯರು ಮುಂದೆ ಹೋಗಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ ಪ್ರಮೀಳಾ ಹೇಳಿದರು.       ಅವರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಮೊದಲು ಬಾಲ್ಯಾವಸ್ಥೆಯಲ್ಲಿ ಮಹಿಳೆಗೆ ಜವಬ್ದಾರಿ ಹೆಚ್ಚಿಸಿ ಶಿಕ್ಷಣ ವಂಚಿತಳಾಗುತ್ತಿದ್ದಳು ಮಹಿಳೆಯ ಶೋಷಣೆ ಹಾಗೂ ಭ್ರೂಣ ಹತ್ಯೆ ಇವುಗಳಲ್ಲೂ ಮಹಿಳೆ ಸಿಲುಕಿ ನಲುಗಿದ್ದಳು ಕಾಲ ಬದಲಾದಂತೆ ನಾಗರೀಕತೆ ಬೆಳೆದಂತೆ ಮಹಿಳೆ ಶಿಕ್ಷಣ ಪಡೆಯುವತ್ತ ಸಾಗಿ…

ಮುಂದೆ ಓದಿ...