ಪತ್ರಕರ್ತರು ತಮ್ಮ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು -ಸಂಸದ ಮುದ್ದಹನುಮೇಗೌಡ

ತುಮಕೂರು :       ಜಾತಿ, ಧರ್ಮ,  ಸ್ವಾರ್ಥ ಮುಕ್ತವಾಗಿ ಸಾಹಿತಿ, ಪತ್ರಕರ್ತ ಸಮಾಜಮುಖಿ, ಜೀವನ್ಮುಖಿಯಾಗಿ ಸಮಾಜ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಸಮ ಸಮಾಜ ನಿರ್ಮಾಣವಾಗಲಿದೆ ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.       ನಗರದ ಕೆಇಬಿ ಇಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಬೆಂಕಿಯ ಬಲೆ ದಿನ ಪತ್ರಿಕೆ ಏರ್ಪಡಿಸಿದ್ದ 15ನೇ ವಾರ್ಷಿಕೋತ್ಸವ, ಪ್ರತಿಭಾಪುರಸ್ಕಾರ, ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ, ಸಮಾಜದಲ್ಲಿ ಅಸಮಾನತೆ, ವಿಘಟನೆಗಳು ಹೆಚ್ಚುವುದರಿಂದ ಶೋಷಿತರು, ಆರ್ಥಿಕ ಮತ್ತು ಸಮಾಜಿಕವಾಗಿ ಬಲಾಢ್ಯರಾಗಲು ಸಾಧ್ಯವಾಗುವುದಿಲ್ಲ. ಸಂಸ್ಕøತಿ, ಸಂಸ್ಕಾರಗಳನ್ನು ಬೆಳೆಸುವಲ್ಲಿ ಶಿಕ್ಷಣ ಪ್ರಜ್ಞೆ ಮಹತ್ವ ಕಾರ್ಯ ನಡೆಸಲಿದೆ. ಹೀಗಾಗಿ ಸಾಹಿತಿ, ಪತ್ರಕರ್ತರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಆ ಕಾರ್ಯವನ್ನು ಬೆರಳಿಣಿಕೆಯಷ್ಟು ಜನ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.       ಬಡವರು, ಶೋಷಿತರು, ಮಹಿಳೆಯರ ಪರವಾದ ನಿಲುವುಗಳು ಕಂಠಸ್ಥಾಯಿಯಾಗದೆ ಹೃದಯದಿಂದ…

ಮುಂದೆ ಓದಿ...