ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ – ಶಾಸಕ ಪ್ರೀತಂಗೌಡ

ತುಮಕೂರು:       ದೇಶ ಸಧೃಢವಾಗಿ, ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಇದಕ್ಕೆ ಇಂದಿನಿಂದಲೇ ಮೋದಿಯವರ ಸಾಧನೆ ಕುರಿತು ಪ್ರಚಾರ ಮಾಡುವುದಾಗಿ ಸಂಕಲ್ಪ ಮಾಡಬೇಕೆಂದು ಹಾಸನದ ಶಾಸಕರಾದ ಪ್ರೀತಂಗೌಡರವರು ಕರೆ ನೀಡಿದರು.       ತುಮಕೂರು ಜಿಲ್ಲಾ ಬಿಜೆಪಿವತಿಯಿಂದ ಸಿದ್ಧಗಂಗಾ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಬುದ್ಧರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಾ 60 ವರ್ಷಗಳ ಕಾಲ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದ ಕಾಂಗ್ರೆಸ್ ಸರ್ಕಾರ ತೊಲಗಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಜನ ಅಧಿಕಾರ ನೀಡಿದರು ಪ್ರಧಾನಿಯಾದ ದಿನದಿಂದಲೂ ಎಂದೂ ರಜೆಯನ್ನು ಪಡೆಯದೆ 18 ಗಂಟೆಗೂ ಹೆಚ್ಚಿನ ಕಾಲ ದೇಶದ ಏಳ್ಗೆಗಾಗಿ ದುಡಿಯುತ್ತಿದ್ದು, ವಿಶ್ವನಾಯಕರಾಗಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯದಿದ್ದಾರೆ. ದೇಶದ ಅಭಿವೃದ್ಧಿಗಾಗಿ ತನ್ನನ್ನು ತಾನು ಅರ್ಪಿಸಿರುವ ಮೋದಿಜೀ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳು ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.    …

ಮುಂದೆ ಓದಿ...

ಕೊರಟಗೆರೆ : ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಶಾಲೆ

ಕೊರಟಗೆರೆ:       ಈ ಸರಕಾರಿ ಶಾಲೆಯಲ್ಲಿ ಓದಿದ ಎಷ್ಟೋ ವಿಧ್ಯಾರ್ಥಿಗಳು ಇವತ್ತು ರಾಜ್ಯ ಸೇರಿದಂತೆ ಹೊರರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತೀದ್ದಾರೆ. ಅದರೆ ಇವಾಗ ಮುಖ್ಯ ಶಿಕ್ಷಕರ ನಿರ್ಲಕ್ಷದಿಂದ ಶಾಲೆಯ ಅವರಣದಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.       ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ ಇರುವ ಹೊಳವನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದಿದ ಎಷ್ಟೂ ವಿಧ್ಯಾರ್ಥಿಗಳು ಇಂದು ಐಎಎಸ್ ಹಾಗೂ ಐಪಿಎಸ್‍ಯಂತ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತೀದ್ದಾರೆ. ಇಂತಹ ಶಾಲೆಯನ್ನ ಉಳಿಸಿ ಬೆಳಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ಶಾಲೆಯ ಅವಧಿ ಮುಗಿದ ನಂತರ ಶಾಲೆಯ ಮುಖ್ಯ ಶಿಕ್ಷಕರು ಗೇಟ್ ಬೀಗ ಹಾಕಿಕೊಂಡು ಹೋಗುವುದಿಲ್ಲ ಅದ್ದರಿಂದ ಸಂಜೆಯಾದ ತಕ್ಷಣ ಶಾಲೆಯ ಅವರಣದಲ್ಲಿ ಅನೈತಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ.       ವಿಪರೀತ ಗಲೀಜು ಮಾಡಿ…

ಮುಂದೆ ಓದಿ...

ಜೆಡಿಎಸ್ ಪಾಲಾದ ತುಮಕೂರು ಲೋಕಸಭಾ ಕ್ಷೇತ್ರ : ಅಂದು ಭಾಸ್ಕರಪ್ಪ; ಇಂದು ಬಾಬಣ್ಣ

ತುಮಕೂರು:       ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದ್ದು ಅಂತಿಮವಾಗಿ ಜ್ಯಾತ್ಯಾತಿತ ಜನತಾದಳ ತಮ್ಮ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ.       ಸಿ.ಬಿ.ಸುರೇಶ್ ಬಾಬು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಕಣಕ್ಕಿಳಿಸುವುದಾಗಿ ಜಾತ್ಯಾತೀತ ಜನತಾದಳದ ವರಿಷ್ಠರು ತೀರ್ಮಾನಿಸಿದ್ದು ಬಹಳ ದಿನಗಳಿಂದ ಗೊಂದಲದಲ್ಲಿದ್ದ ಎರಡೂ ಪಕ್ಷಗಳ ಮತದಾರರು ನಿರಾಳರಾಗಿದ್ದಾರೆ.       ಹಾಲಿ ಕಾಂಗ್ರೆಸ್ ಪಕ್ಷದ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಮತ್ತೆ ಅಭ್ಯರ್ಥಿಯಾಗಬಹುದೆಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಜೆಡಿಎಸ್ ತನ್ನ ಪಕ್ಷದ ಹಿತದೃಷ್ಟಿಯಿಂದ ಸ್ಥಾನ ಬಿಟ್ಟುಕೊಡದೇ ಪಟ್ಟು ಹಿಡಿದು ತನ್ನದಾಗಿಸಿಕೊಂಡಿದೆ.       ಬಹಳ ವರ್ಷಗಳ ನಂತರ ಅಂದರೆ ಕುರುಬ ಸಮುದಾಯದ ಸಿಎನ್ ಬಾಸ್ಕರಪ್ಪನವರ ನಂತರ ಸುರೇಶ್ ಬಾಬು ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡುವ ಸಾದ್ಯತೆಯಿದೆ.  …

ಮುಂದೆ ಓದಿ...