ತುಮಕೂರು ಕ್ಷೇತ್ರ ಜೆಡಿಎಸ್ ತೆಕ್ಕೆಗೆ : ಕಾಂಗ್ರೆಸ್ ಪ್ರತಿಭಟನೆ!!

ತುಮಕೂರು:        ತುಮಕೂರು ರಾಜ್ಯದಲ್ಲಿ ಹಾಲಿ ಸಂಸದರು ಇರುವ ಲೋಕಸಭಾ ಕ್ಷೇತ್ರಗಳ ಪೈಕಿ ತುಮಕೂರು ಕ್ಷೇತ್ರವನ್ನು ಮಾತ್ರ ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್. ರಾಜೇಂದ್ರ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿರುವ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.       ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್. ರಾಜೇಂದ್ರ ಮಾತನಾಡಿ, ದೇಶದಲ್ಲಿ 44 ಜನ ಕಾಂಗ್ರೆಸ್ ಸಂಸದರು ಗೆದ್ದಿದ್ದಾರೆ. ಇವರ ಪೈಕಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಲಾಗಿದೆ. ಇದರ ಅರ್ಥವೇನು. ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಕ್ಷೇತ್ರ ಬಿಟ್ಟು ಕೊಡಬಾರದು. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲೇಬೇಕು ಎಂದು…

ಮುಂದೆ ಓದಿ...

‘ಎಕ್ಸೈಡ್ ಲೈಫ್’ ಇನ್ಷೂರೆನ್ಸ್ ಭದ್ರತೆಗೆ ಹೊಸ ಜೀವವಿಮೆ

 ತುಮಕೂರು:       ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಆರೋಗ್ಯ ಸುಧಾರಣೆ ಸೇರಿದಂತೆ ಇತರೆ ಜೀವನದ ಭದ್ರತೆಗಾಗಿ ಜೀವವಿಮೆ ಅವಶ್ಯವಾಗಿದ್ದು, ‘ಎಕ್ಸೈಡ್ ಲೈಫ್’ ಇನ್ಷೂರೆನ್ಸ್ ಮೂಲಕ ಗ್ರಾಹಕರಿಗೆ ಹೊಸ ವಿಮಾ ಯೋಜನೆಯನ್ನು ಕಲ್ಪಿಸಲಾಗುತ್ತಿದೆ ಎಂದು ವಿಮಾ ಕಂಪೆನಿಯ ತರಬೇತುದಾರ ಆಶಿಕ್ ಮನೋಹರ್ ತಿಳಿಸಿದರು.      ನಗರದಲ್ಲಿಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಪ್ರಾರಂಭವಾದ ದಿನದಿಂದಲೂ ಎಕ್ಸೈಡ್ ಲೈಫ್ ಇನ್ಷೂರೆನ್ಸ್ ದೇಶಾದ್ಯಂತ ಟೈಯರ್2 ಮತ್ತು ಟೈಯರ್ 3 ನಗರಗಳ ಜನರೊಂದಿಗೆ ಸಕ್ರಿಯವಾಗಿದ್ದು ಅವರಿಗೆ ವಿಮೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರಿಗೆ ಅವರ ಭವಿಷ್ಯಕ್ಕೆ ಸೂಕ್ತ ಹಣಕಾಸು ನಿರ್ಧಾರ ಕೈಗೊಳ್ಳಲು ಮಾಹಿತಿಯೊಂದಿಗೆ ಸನ್ನದ್ಧವಾಗಿಸುತ್ತಿದೆ ಎಂದರು.       ಎಕ್ಸೈಡ್ ಲೈಫ್ ಇನ್ಷೂರೆನ್ಸ್‍ನಲ್ಲಿ ನಾವು ಪ್ರತಿ ವ್ಯಕ್ತಿಯೂ ಆರ್ಥಿಕವಾಗಿ ರಕ್ಷಣೆ ಹೊಂದಿರುವುದು ಮುಖ್ಯ ಎಂದು ನಂಬಿದ್ದೇವೆ. `ಅತ್ಯಂತ ಬೇಗ ಪ್ರಾರಂಭಿಸುವುದು’, `ಒಗ್ಗೂಡಿಸುವುದರ ಶಕ್ತಿ’ ಮತ್ತು…

ಮುಂದೆ ಓದಿ...