ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೂ ಇಲ್ಲ – ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿ

ತುರುವೇಕೆರೆ:      ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೇ ಸಂಪತ್ತಿಲ್ಲ ಎಂದು ತುರುವೇಕೆರೆ ವಿರಕ್ತ ಮಠದ ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು.       ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ತೊಂಬತ್ತೊಂಬತ್ತನೇ ವಾರ್ಷಿಕ ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ನನ್ನನ್ನು ಆಯ್ಕೆ ಮಾಡಿ ಗೌರವ ಡಾಕ್ಟರೇಟ್ ಕೊಟ್ಟಿರುವುದು ನನಗೆ ಹಾಗು ನನ್ನ ಸಮಾಜದ ಸಧ್ಬಕ್ತರಿಗೆ ಗೌರವ ತಂದುಕೊಟ್ಟಿದೆ. ಮೈಸೂರು ವಿಶ್ವವಿಧ್ಯಾನಿಲಯ ಇಡೀ ದೇಶದಲ್ಲಿಯೇ ಆರನೆಯ ವಿಶ್ವವಿಧ್ಯಾಲಯವಾಗಿದ್ದು ಕರ್ನಾಟಕ ರಾಜ್ಯದ ಮೊದಲನೆಯ ವಿಶ್ವವಿದ್ಯಾಲಯವಾಗಿದೆ. ಕಳೆದ 99 ವರ್ಷಗಳಲ್ಲಿ ವಿಶ್ವವಿದ್ಯಾಲಯ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸಿದೆ. ಆ ನಿಟ್ಟಿನಲ್ಲಿ ಇಂದು ಶ್ರೀ ಮಠಕ್ಕೆ ಗೌರವ ನೀಡಿ ನಮ್ಮನ್ನು ಸತ್ಕರಿಸಿರುವುದು ನಮ್ಮ ಬದುಕಿನ ಯಾತ್ರೆಯಲ್ಲಿ ಬಹು ಮಹತ್ವದ…

ಮುಂದೆ ಓದಿ...

ಪಕ್ಷದ ಪ್ರಣಾಳಿಕೆಯಲ್ಲಿ ಕೋಮು ಪ್ರಚೋದನಾಕಾರಿ ಹೇಳಿಕೆ ನೀಡದಿರಲು ಡಿಸಿ ಸಲಹೆ

 ತುಮಕೂರು :       ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳು ಹೊರತರುವ ಪಕ್ಷದ ಪ್ರಣಾಳಿಕೆಯಲ್ಲಿ ಸಭೆ/ ಸಮಾರಂಭ/ ರ್ಯಾಲಿ/ ವೇದಿಕೆ ಕಾರ್ಯಕ್ರಮಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಂತಹ ಹಾಗೂ ಕೋಮು ಪ್ರಚೋದನಾಕಾರಿ ಭಾಷಣ/ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇತ್ತೀಚೆಗೆ ಜರುಗಿದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಒಂದು ಕೋಮು/ಜಾತಿ/ಸಮಾಜದ ಘನತೆಗೆ ವೈಯಕ್ತಿಕವಾಗಿ ಘಾಸಿಯಾಗುವಂತಹ ಹೇಳಿಕೆಗಳನ್ನು ನೀಡಬಾರದು ಹಾಗೂ ಸಾಮಾಜಿಕ ಜಾಲತಾಣಾಗಳಾದ ಟ್ವೀಟರ್, ಫೇಸ್‍ಬುಕ್ ಮತ್ತು ವಾಟ್ಸ್‍ಆಪ್‍ಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದೆಂದು ತಿಳಿಸಿದರು.   ತಹಶೀಲ್ದಾರ್ ವಶಕ್ಕೆ ಸರ್ಕಾರಿ ಅತಿಥಿ ಗೃಹ:-       ಸರ್ಕಾರಿ/ವಸತಿ ಗೃಹಗಳನ್ನು ಆಯಾ…

ಮುಂದೆ ಓದಿ...

 ‘ಶಿಶುನಾಳ ಷರೀಫರಿಗೆ ಪರ್ಯಾಯ ಇಲ್ಲ’ – ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು:       ಸಂತ ಶಿಶುನಾಳ ಷರೀಫರಿಗೆ ಇನ್ನೊಬ್ಬ ಪರ್ಯಾಯ ಸಾಧಕ ಇಲ್ಲ. ಅವರಿಗೆ ಅವರೇ ಸಾಟಿ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.       ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಷರೀಫರ ಅಧ್ಯಯನ ಕೇಂದ್ರವು ಹಮ್ಮಿಕೊಂಡಿದ್ದ ‘ಶಿಶುನಾಳ ಷರೀಫರ ಧೋರಣೆ ಮತ್ತು ಪ್ರೇರಣೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.       ಷರೀಫರು ಸಂತ ಶರಣ ಸೂಫಿಗಳ ಹಾದಿಯಲ್ಲಿ ಸಾಗಿದರು. ಎಲ್ಲರಿಗೂ ಮಾದರಿಯಾದರು. ಗಗನಕ್ಕೆ ಗಗನವೇ ಸಾಟಿ ಎಂಬಂತೆ ಷರೀಫರಿಗೆ ಷರೀಫರೇ ಸಾಟಿ, ಬೇರೊಬ್ಬರಿಲ್ಲ. ಇಂತಹ ದಾರ್ಶನಿಕನ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಿರುವುದು ಶ್ಲಾಘನೀಯ ಎಂದರು.       ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತ ಶಿಶುನಾಳ ಷರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಮಹೇಶ್‍ಜೋಷಿ ಮಾತನಾಡಿ, ಷರೀಫರು ನಡೆದು…

ಮುಂದೆ ಓದಿ...