ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡರ ವಿರುದ್ಧ ಆಕ್ರೋಶ

ತುಮಕೂರು:       ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳಿಬ್ಬರನ್ನು ಕಣಕ್ಕಿಳಿಸಿ, ತನ್ನ ಸ್ಪರ್ಧೆ ಬಯಸಿ ತುಮಕೂರಿಗೆ ಅಡಿಯಿಟ್ಟ ದೇವೇಗೌಡರು ತನ್ನ ಕೊನೆಯ ಚುನಾವಣೆ ಎಂದಿದ್ದರಾದರೂ ಹಾಲಿ ಸಂಸದ ಮುದ್ದಹನುಮೇಗೌಡರ ಬೆಂಬಲಿಗರ ಆಕ್ರೋಷ ದೇವೇಗೌಡರ ನಿದ್ದೆ ಕೆಡಿಸಿತ್ತು. ದೇವೇಗೌಡರು ಜಾತ್ಯಾತೀತ ಜನತಾದಳದ ಪರಮೋಚ್ಚ ನಾಯಕರಾಗಿದ್ದರೂ ತುಮಕೂರು ಜಿಲ್ಲೆಯ ರಾಜಕಾರಣದ ವ್ಯಾಪ್ತಿಗೆ ಗೌಡರ ಪಾದಾರ್ಪಣೆಯನ್ನ ವ್ಯಾಪಕವಾಗಿ ವಿರೋಧಿಸಿದ್ದ ಇಲ್ಲಿನ ಒಕ್ಕಲಿಗ ಸಮುದಾಯವು ಸೇರಿದಂತೆ ಇತರರು ಯಾರೂ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಟಿಕೆಟ್ ವಂಚಿತ ಹಾಲಿ ಸಂಸದ ಮುದ್ದಹನುಮೇಗೌಡರ ಪರವಾಗಿ ದೇವೇಗೌಡರ ವಿರೋಧಿ ಬಣ ತೊಡೆತಟ್ಟಿ ನಿಂತಿತ್ತು. ಮುದ್ದಹನುಮೇಗೌಡರಿಗೆ ಬೆಂಬಲವಾಗಿ ನಿಂತಿತ್ತು. ಮುದ್ದಹನುಮೇಗೌqರ ಬಂಡಾಯ ಸ್ಪರ್ಧೆ ಗೌಡರ ಕುಟುಂಬವಲ್ಲದೇ ಇಡೀ ಜೆಡಿಎಸ್ ಪಕ್ಷದ ನಾಯಕರ ನಿದ್ದೆಗೆಡಿಸಿತ್ತು. ಒಕ್ಕಲಿಗರ ಮತಗಳು ಇಬ್ಭಾಗವಾಗಿ ದೇವೇಗೌಡರ ವಿರೋಧಿ ಮತಗಳು ಮುದ್ದಹನುಮೇಗೌಡರ ಕಡೆ ವಾಲುತ್ತವೆ ಎಂ¨ ಭೀತಿಯಿಂದ…

ಮುಂದೆ ಓದಿ...