ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಮರಳುಗಾಡಾಗುತ್ತದೆ- ಜಿಎಸ್‍ಬಿ

ತುಮಕೂರು:        ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರಿಗೆ ವಂಚಿಸಿರುವವರು ಯಾವ ನೈತಿಕತೆಯಲ್ಲಿ ಇಂದು ತುಮಕೂರು ಜನತೆಯ ಮುಂದೆ ಮತ ಯಾಚಿಸುತ್ತಿದ್ದಾರೆ. ಒಂದು ವೇಳೆ ತುಮಕೂರು ಜನತೆ ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಜಿಲ್ಲೆಯನ್ನು ಮರಳುಗಾಡು ಮಾಡುತ್ತಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದರು.       ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪಕ್ಷದ ಮುಖಂಡರುಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ದೇವೇಗೌಡರ ಕುಟುಂಬ ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರ ಕಣ್ಣಲ್ಲಿ ರಕ್ತ ಸುರಿಸಿದ್ದಾರೆ, ಹೇಮಾವತಿ ನಾಲೆಗೆ ಮಣ್ಣು ಸುರಿದು ನೀರನ್ನು ತಡೆದಿರುವುದನ್ನು ನಮ್ಮ ತುಮಕೂರು ಜನತೆ ಮರೆತಿಲ್ಲ, ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು ತುಮಕೂರಿನ ಮತದಾರರು ಪ್ರಜ್ನಾವಂತರಿದ್ದು ಸರಿಯಾದ ಆಯ್ಕೆ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದರು.       ಲೋಕಸಭೆಗೆ ನಾನು ನಾಲ್ಕುಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ…

ಮುಂದೆ ಓದಿ...

ಕಾರಿನ ಗಾಜು ಒಡೆದು ಕ್ಯಾಮೆರಾ, ನಗದು ಕಳವು

ತುಮಕೂರು:       ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದ ಕಳ್ಳರು ಕಾರಿನಲ್ಲಿದ್ದ ಕ್ಯಾಮೆರಾ, ಹಾರ್ಡ್ ಡಿಸ್ಕ್ ಹಾಗೂ 49 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಎಂ.ಜಿ. ರಸ್ತೆಯಲ್ಲಿ ನಡೆದಿದೆ.       ತಾಲ್ಲೂಕಿನ ಕೋರಾ ಹೋಬಳಿಯ ಕೋಡಿಹಳ್ಳಿ ವಾಸಿ ರಾಜಣ್ಣ ಎಂಬುವರು ತುಮಕೂರಿನ ಎಂ.ಜಿ. ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕ್‍ಗೆ ಹಣ ಕಟ್ಟಲು ಹೋದಾಗ ಕಾರಿನ ಹಿಂದಿನ ಬಾಗಿಲ ಗಾಜು ಹೊಡೆದಿರುವ ಕಳ್ಳರು ಕಾರಿನಲ್ಲಿದ್ದ ಕ್ಯಾಮೆರಾ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ರಾಜಣ್ಣ  ಪೊಲೀಸ್ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.       ಈ ಸಂಬಂಧ ತುಮಕೂರು ನಗರ ಠಾಣೆ  ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದೆ ಓದಿ...

ಮಾಜಿ ಶಾಸಕ ಸುರೇಶ್ ಗೌಡರ ವಿರುದ್ಧ ಬೃಹತ್ ಮೌನ ಪ್ರತಿಭಟನೆ

ತುಮಕೂರು:       ಮಾಜಿ ಪ್ರಧಾನಿ,  ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ದೇವೇಗೌಡ ಹಾಗು ಗ್ರಾಮಾಂತರ ಶಾಸಕ ಡಿ.ಸಿ.ಗೌರೀಶಂಕರ್ ವಿರುದ್ದ ಅವಹೇಳನಕಾರಿ ಮಾತನಾಡಿದ್ದ ಮಾಜಿ ಶಾಸಕ ಸುರೇಶ್ ಗೌಡರ ಉದ್ದಟತನದ ನಡವಳಿಕೆ ಖಂಡಿಸಿ ಗ್ರಾಮಾಂತರ ಭಾಗದ ಸಾವಿರಾರು ಕಾರ್ಯಕರ್ತರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯಲ್ಲಿ ಭಾನುವಾರ ಬೃಹತ್ ಮೌನ ಪ್ರತಿಭಟನೆ ನಡೆಸಿದರು.       ನಾಗವಲ್ಲಿ ಸರ್ಕಲ್‍ನಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ, ಶಾಸಕ ಡಿ ಸಿ ಗೌರೀಶಂಕರ್ ಹಾಗು ಜೆಡಿಎಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು, ನಡುರಸ್ತೆಯಲ್ಲೇ ಕುಳಿತು ಜೆಡಿಎಸ್ ಪಕ್ಷದ ವರಿಷ್ಟರು ಹಾ ಶಾಸಕ ಡಿ ಸಿ ಗೌರೀಶಂಕರ್ ಮತ್ತು ಅವರ ಕುಟುಂಬದ ವಿರುದ್ದ ಅವಹೇಳನಕಾರಿ ಮಾತನಾಡಿರುವ ಮಾಜಿ ಶಾಸಕ ಸುರೇಶ್ ಗೌಡ ಬಹಿರಂಗವಾಗಿ ಹೇಳಿಕೆ ವಾಪಾಸು ಪಡೆಯುವಂತೆ ಆಗ್ರಹಿಸಿದರು.  …

ಮುಂದೆ ಓದಿ...