ಜಿ.ಪರಮೇಶ್ವರ್ ಮತ್ತು ಚೆನ್ನಿಗಪ್ಪ ನಡುವೆ ಒಳ ಒಪ್ಪಂದ – ಸುರೇಶ್‍ಗೌಡ

ಕೊರಟಗೆರೆ:       ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಂತ ಶಕ್ತಿಯಿಂದ ಕೊರಟಗೆರೆಯಲ್ಲಿ ಶಾಸಕನಾಗಿಲ್ಲ.. ಜೆಡಿಎಸ್ ಪಕ್ಷದ ಮಾಜಿ ಸಚಿವ ಸಿ.ಚೆನ್ನಿಗಪ್ಪನ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಒಳ ಒಪ್ಪಂದದಿಂದ ಗೆಲುವು ಸಾದಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದರು.       ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.       ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪನ ಮಗ ಗೌರಿಶಂಕರ್ ಗೆಲುವು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ಸೋಲಿಸಲು ಚೇನ್ನಿಗಪ್ಪ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಚೇನ್ನಿಗಪ್ಪ 5ಕೋಟಿ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು.  …

ಮುಂದೆ ಓದಿ...

ಹಿಂದುಳಿದವರ ಬಗ್ಗೆ ದೇವೇಗೌಡರ ಮೊಸಳೆ ಕಣ್ಣೀರು-ಶಾಸಕ ಜೆ.ಸಿ ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ:       ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾದಾಗ ಜಯಲಲಿತರ ಪಕ್ಷದ ಓಟಿನ ಆಸೆಗಾಗಿ ಕಾವೇರಿ ನೀರನ್ನು ತಮಿಳುನಾಡಿನ ಬಿಟ್ಟಿದ್ದರು ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಆರೋಪಿಸಿದರು.       ಮಂಗಳವಾರ ತಾಲ್ಲೂಕಿನ ಜೆ.ಸಿ ಪುರದಲ್ಲಿ ಶೆಟ್ಟಿಕೆರೆ ಹೋಬಳಿ ಮಟ್ಟದ ಬಿಜೆ.ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಹಿಂದುಳಿದವರ ಬಗ್ಗೆ ದೇವೇಗೌಡರು ಮೊಸಳೆ ಕಣ್ಣೀರು ಹಾಕುತ್ತಾರೆ. ದೇವೇಗೌಡರು ಗೌಡರು ಮೇಲೆ ಬರದಂತೆ ತುಳಿಯುತ್ತಾರೆ.       ನಾಗೇಗೌಡರು ಮಂತ್ರಿಗಳಾದ ಸಂದರ್ಭದಲ್ಲಿ ಹೇಮಾವತಿ ನಾಲೆಯ ನೀರನ್ನು ಜಿಲ್ಲೆಗೆ ಅಲಾಟ್ ಮಾಡಿದ್ದರು. ದೇವೇಗೌಡರು ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಎಲ್ಲರನ್ನು ಎತ್ತಿ ಕಟ್ಟುತ್ತಿದ್ದಾರೆ ಕುಮಾರಸ್ವಾಮಿಯವರು ಸಂತೋಷಜಯಚಂದ್ರ ಚುನಾವಣೆಗೆ ನಿಲ್ಲದೆ ಹೋಗಿದ್ದರೆ ಸಿ.ಬಿ.ಸುರೇಶ್‍ಬಾಬು ಗೆಲ್ಲುತ್ತಿದ್ದರು. ಇದರಿಂದ ಜೆ.ಸಿಮಾಧುಸ್ವಾಮಿಯವರನ್ನು ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ ಆದರೆ ಕುಮಾರಸ್ವಾಮಿ ಇನ್ನೂ ರಾಜಕಾರಣಕ್ಕೆ ಬರುವ ಮುನ್ನ ನಾನು ವಿಧಾನಸೌಧದ ಮೆಟ್ಟಿಲ್ಲನ್ನು…

ಮುಂದೆ ಓದಿ...

ದೇವೇಗೌಡರ ಗೆಲುವು ಅನಿವಾರ್ಯ – ಡಿಸಿಎಂ ಪರಮೇಶ್ವರ್

 ತುಮಕೂರು:       ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಜಿಲ್ಲೆಗೆ ಸೀಮಿತಗೊಳಿಸದೇ, ದೇಶದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಶಕ್ತಿಯ ನ್ನಾಗಿ ಅವರನ್ನು ಕಾಣಬೇಕಿದ್ದು, ದೇವೇಗೌಡ ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ಕರ್ತರು ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.       ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾದಾಗಲೇ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಸಿದ್ಧರಾಗಿ ದ್ದೆವೆ. ದೇಶದಲ್ಲಿ ಶಾಂತಿ ನೆಲೆಸಲು, ಸಂವಿಧಾನವನ್ನು ಉಳಿಸಲು ಮಹಾಘಟಿಬಂಧನ್ ಮೂಲಕ ಒಂದಾಗಿದ್ದೇವೆ. ಸಂವಿಧಾನ ಬದಲಿಸಬೇಕು ಎನ್ನುವವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದರು.       ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಮೈತ್ರಿ ಸರ್ಕಾರ ಭದ್ರವಾಗಿದೆ. ಬದ್ಧವಾಗಿದೆ. ಸರ್ಕಾರ ಬೀಳುತ್ತದೆ ಎನ್ನುವುದು ಅವರ ಭ್ರಮೆ ಅಷ್ಟೇ, ಜಿಲ್ಲೆಗೆ ಅಗತ್ಯವಿರುವ ನೀರಾವರಿ…

ಮುಂದೆ ಓದಿ...