ವಿಜೃಂಭಣೆಯಿಂದ ಜರುಗಿದ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ

 ಕುಣಿಗಲ್:       ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಚಾಲನೆಗೂ ಮುನ್ನ ಮೊದಲ ಪೂಜೆಯ ಷಟಸ್ಥ್ಥ ಧ್ವಜ ಹರಾಜು ನಡೆಯಿತು. ಬೆಳಗಾವಿ ಹರೇಮಠ ಅಮರನಾಥ ಗುರುಕುಲದ ಚಂದ್ರಶೇಖರ್ ಶಾಸ್ತ್ರಿ 2.46 ಲಕ್ಷ ರೂಪಾಯಿಗೆ ಪಡೆದರು.       ಮಧ್ಯಾಹ್ನ 12.30ಕ್ಕೆ ರಥದ ಗಾಲಿಗೆ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಡುವ ಬಿಸಿಲು ಲೆಕ್ಕಿಸದೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥಕ್ಕೆ ಹೂ, ಧವನ, ಬಾಳೆಹಣ್ಣು ಹಾಗೂ ಕರಿ ಮೆಣಸು ತೂರಿ ಹರಕೆ ಸಲ್ಲಿಸಿದರು. ಭಕ್ತರ ದಣಿವಾರಿಸಲು ದಾರಿಯುದ್ದಕ್ಕೂ ನೀರು, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.       ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಯದುವೀರ, ಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್…

ಮುಂದೆ ಓದಿ...

ಮೋದಿ ವಿರುದ್ಧ ದೇವೇಗೌಡರು ದೊಡ್ಡ ಶಕ್ತಿ -ಎಸ್.ಪಿ.ಎಂ

ತುಮಕೂರು :       ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ದೇಶದಾದ್ಯಂತ ದೊಡ್ಡ ಶಕ್ತಿ ರೂಪುಗೊಳ್ಳಲು ದೇವೇಗೌಡರ ಪಾತ್ರ ಪ್ರಮುಖವಾದದ್ದು. ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಸಂಘಟಿಸುವಲ್ಲಿ ಪ್ರಮುಖ ದೇವೇಗೌಡರು ಕಾರಣಕರ್ತರಾಗಿದ್ದಾರೆ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಹೇಳಿದರು.       ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾನೂನು ಮತ್ತು ಮಾನವಹಕ್ಕುಗಳ ವಿಭಾಗ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ವಕೀಲರ ಸಮಾವೇಶದಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ಇಡೀದೇಶದಲ್ಲಿ ಆಡಳಿತ ಪಕ್ಷದ ವಿರುದ್ದ ವಿವಿಧ ಪಕ್ಷಗಳ ಸಂಘಟಿಸುವ ಕಾರ್ಯದಲ್ಲಿ ದೇವೇಗೌಡರು ಮುಂಚೂಣಿಯಲ್ಲಿರುವ ಕಾರಣ, ಇವರು ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಚುನಾವಣೆ ಮಹತ್ವ ಪಡೆದಿದ್ದು ದೇವೇಗೌಡರನ್ನು ಗೆಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.       ತಮ್ಮ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಾವು ಕ್ಷೇತ್ರವನ್ನು ದೇವೇಗೌಡರಿಗೆ…

ಮುಂದೆ ಓದಿ...

ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರಿಗೆ ದ್ರೋಹ ಮಾಡಲ್ಲ- ಹೆಚ್.ಡಿ ಕುಮಾರಸ್ವಾಮಿ

ತುಮಕೂರು:       ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡಲ್ಲ, ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಕುಟುಂಬದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ವಾಗ್ದಾಳಿ ಮಾಡಿದರು.       ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶ ಹಾಗು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಆಯೋಜಿತವಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.       ಕಾವೇರಿ ನ್ಯಾಯಾಧಿಕರಣದಲ್ಲಿ ತುಮಕೂರು ಜಿಲ್ಲೆಗೆ 25.31 ಟಿ ಎಂ ಸಿ ನೀರು ಹಂಚಿಕೆಯಾಗಿದೆ ಆದರೆ ಈ ಭಾರಿ 25.47 ಟಿ ಎಂ ಸಿ ಹೆಚ್ಚುವರಿ ನೀರು ತುಮಕೂರು ಜಿಲ್ಲೆಗೆ ಹರಿದಿದೆ,ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರ…

ಮುಂದೆ ಓದಿ...