ದೇವೇಗೌಡರನ್ನು ಗೆಲ್ಲಿಸಿ ಬರ್ತೀನಿ, ಇಲ್ಲ ರಾಜೀನಾಮೆ ಕೊಡ್ತೀನಿ: ಸಚಿವ ಶ್ರೀನಿವಾಸ್

ಗುಬ್ಬಿ:       ‘ದೊಡ್ಡಗೌಡರನ್ನು ಗೆಲ್ಲಿಸಿಕೊಂಡು ಬರ್ತೀನಿ, ಇಲ್ಲ ಅಂದ್ರೆ ರಾಜೀನಾಮೆ ಪತ್ರದ ಜೊತೆ ಬರ್ತೀನಿ’ ಎಂಬ ಪೋಸ್ಟ್ ಅನ್ನು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.       ಇದರ ಅಡಿಯಲ್ಲಿ ‘ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವಂತೆ ಕುಮಾರಣ್ಣನಿಗೆ ವಾಗ್ದಾನ ಮಾಡಿದ ಮಿನಿಸ್ಟ್‍ರ್ ವಾಸಣ್ಣ (ಎಸ್.ಆರ್.ಶ್ರೀನಿವಾಸ್)’ ಎಂದು ಬರೆಯಲಾಗಿದೆ. ಈ ಪೋಸ್ಟ್ ಗುರುವಾರ ಬೆಳಿಗ್ಗೆ 10.35ರಲ್ಲಿ ಹಂಚಿಕೊಂಡಿದ್ದಾರೆ.       28 ಸಾವಿರ ಫಾಲೋವರ್ಸ್‍ಗಳನ್ನು ಹೊಂದಿರುವ ಈ ಫೇಸ್‍ಬುಕ್ ಖಾತೆಯಲ್ಲಿರುವ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಕೆಲವರು `ಮಾತು ಅಂದ್ರೆ ಮಾತು, ಅದೇ ವಾಸಣ್ಣನ ಗತ್ತು. ದೇವೇಗೌಡರ ಗೆಲುವು ನಿಶ್ಚಿತ, ಬನ್ನಿ ಒಟ್ಟಾಗಿ ಶ್ರಮಿಸೋಣ, ಸಂಭವಾಮಿ ಯುಘೇ ಯುಘೇ’ ಎಂದು ಬರೆದುಕೊಂಡಿದ್ದಾರೆ.       ಸಚಿವ ಎಸ್.ಆರ್.ಶ್ರೀನಿವಾಸ್ ಗುಬ್ಬಿ ತಾಲ್ಲೂಕು ದೊಡ್ಡನೆಟ್ಟಗುಂಟೆಯಲ್ಲಿ ಗುರುವಾರ…

ಮುಂದೆ ಓದಿ...

ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ – ಡಾ.ಜಿ.ಪರಮೇಶ್ವರ

ಮಧುಗಿರಿ:       ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಈ ಬಾರಿ ಪ್ರಧಾನಿಯಾಗುವುದು ಖಚಿತ ಎಂದು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.       ಪಟ್ಟಣದ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಂಬಾ ಆಶಾಭಾವನೆಯನ್ನು ಹೊಂದಿರುವ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಿರಾಶೆ ಕಾದಿದೆ ಎಂದು ತಿಳಿಸಿದರು.       ಈ ಬಾರಿಯ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್ ಡಿ ದೇವೇಗೌಡರು ಪ್ರಚಂಡ ಬಹುಮತಗಳಿಂದ ಗೆಲ್ಲುವುದಾಗಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ .       ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಬಗ್ಗೆ ಅಸಮಾಧಾನವಿಲ್ಲ ನಮಗೆ ಈ ಬಾರಿ ಅವರ ಸಹಕಾರ ಹೆಚ್ಚಾಗಿದೆ, ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು ಹಾಗೂ ಕೆ.ಎನ್.ರಾಜಣ್ಣ ಭೇಟಿ ಉಭಯ ಕುಶಲೋಪರಿ…

ಮುಂದೆ ಓದಿ...

ಪಾವಗಡ : Facebook ನಲ್ಲಿ ಮತದಾನ ಬಹಿರಂಗ

 ಪಾವಗಡ:       ತಾಲ್ಲೂಕಿನ ಗುಜ್ಜನಡು ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ತಾವು ಮತ ಹಾಕಿದ ಚಿತ್ರವನ್ನು ಗುರುವಾರ ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ.       ಜನಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನವನ್ನು ಬಹಿರಂಗಪಡಿಸುವಂತಿಲ್ಲ. ಆದ್ದರಿಂದಲೇ ಗುಪ್ತ ಮತದಾನ ಎಂದು ಕರೆಯಲಾಗುತ್ತದೆ. ಆದರೆ, ಗುಜ್ಜನಡು ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ಅವರು ತಾವು ಯಾರಿಗೆ ಮತ ಹಾಕಿದ್ದು ಎಂಬುದನ್ನು ಚಿತ್ರ ಸಹಿತ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದ್ದಾರೆ. ಓರ್ವ ಜನಪ್ರತಿನಿಧಿಯೇ ಕಾನೂನು ಉಲ್ಲಂಘಿಸಿರುವ ಬಗ್ಗೆ ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.       ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಆದರೂ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ಹಾಕಿದ ರೀತಿಯಲ್ಲಿ, ಲೈಟ್ ಬೆಳಗುತ್ತಿದ್ದಾಗಲೇ…

ಮುಂದೆ ಓದಿ...