ಕಾರು ಡಿಕ್ಕಿಯಾಗಿ ರಾಷ್ಟ್ರೀಯ ಹಾಕಿ ಆಟಗಾರ್ತಿ ದುರ್ಮರಣ!

ಧಾರವಾಡ: 

       ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಮೃತಪಟ್ಟಿದ್ದಾರೆ. ಸುಜಾತ ಕೆರೆಳ್ಳಿ(16) ಮೃತಪಟ್ಟವರೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

      17 ವರ್ಷದೊಳಗಿನ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿಯಾಗಿರುವ ಸುಜಾತ, ತಂದೆಯೊಂದಿಗೆ ತೆರಳುವಾಗ ಕಾರು ಡಿಕ್ಕಿ ಹೊಡೆದಿದೆ. ಸುಜಾತ ತಂದೆ ಮಲ್ಲಿಕಾರ್ಜುನ ಕೆರೆಳ್ಳಿ ಸ್ಥಿತಿ ಗಂಭೀರವಾಗಿದ್ದು ಕಿಮ್ಸ್ ಗೆ ದಾಖಲು ಮಾಡಲಾಗಿದೆ.

ಸುಜಾತ ಮೈಸೂರಿನಲ್ಲಿ ಎಸ್.ಎಸ್.ಎಲ್.ಸಿ. ಓದಿದ್ದು, ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ. ರಜೆ ಕಾರಣಕ್ಕೆ ಊರಿಗೆ ಬಂದಿದ್ದರು. ತಂದೆಯೊಂದಿಗೆ ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

(Visited 9 times, 1 visits today)

Related posts

Leave a Comment