ಕಲ್ಪತರು ನಾಡಲ್ಲಿ ನಗೆಬೀರಿದ ಕಮಲ!

ತುಮಕೂರು:      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದ್ದೇನೆಂಬ ಸಂತಸದಲ್ಲಿ ಇದು ಬಸವರಾಜುರವರ ಅಭೂತಪೂರ್ವ ಗೆಲುವು ಎಂದೆಲ್ಲಾ ಮಾತನಾಡಿಕೊಳ್ಳುತ್ತಿರುವ ಬಿಜೆಪಿಗರು ಒಮ್ಮೆ ಆಲೋಚಿಸಬೇಕಿದೆ. ಈ ಗೆಲುವಿನ ಹಿಂದೆ ದೇವೇಗೌಡರ ವಿರೋಧಿ ಅಲೆ ಬಹುಮುಖ್ಯವಾಗಿ ಕಂಡುಬರುತ್ತಿದ್ದು, ಅದರೊಟ್ಟಿಗೆ ಮೋದಿಯ ಅಲೆ, ಭಕ್ತರ ಮುಗ್ಧತೆ ಗೆಲುವಿಗೆ ಸೋಪಾನವಾಗಿದೆ ಎಂದರೂ ತಪ್ಪಾಗಲಾರದು. 4 ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಜಿಲ್ಲೆಯ ಶಾಶ್ವತ ಅಭಿವೃದ್ಧಿಗಳೆಡೆ ಗಮನಹರಿಸಿಲ್ಲವೆಂಬ ಆಪಾದನೆಯಿಂದ ಹೊರತಾಗಲಿಲ್ಲವಾದರೂ ದೇವೇಗೌಡರನ್ನ ಸೋಲಿಸಿಯೇ ತೀರಬೇಕೆಂಬ ಮನೋಭಾವವುಳ್ಳ ಗೌಡರ ವಿರೋಧಿ ಬಣಗಳು ಬಿಜೆಪಿಯ ಬಸವರಾಜುಗೆ ಆಸರೆಯಾಗಿ ಬೆಂಬಲಿಸಿದರು. ಗೌಡರ ವಿರೋಧದ ಅಲೆಯಲ್ಲಿ ತೇಲಿ ಬಂದಿರುವ ಬಸವರಾಜು, ಮಾಜಿ ಪ್ರಧಾನಿಯ ವಿರುದ್ಧ ಆಯ್ಕೆಯಾಗಿ ಬಂದ ಅಭ್ಯರ್ಥಿ ಎಂಬ ಬೃಹತ್ ಹಣೆಪಟ್ಟಿಯನ್ನ ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಯನ್ನ ಸೋಲಿಸಿದ್ದ ಸಂಸದರೆಂಬ ಅಭಿಮಾನ…

ಮುಂದೆ ಓದಿ...

ಗೌಡರ ಸೋಲಿಗೆ ಪ್ರಮುಖ ಕಾರಣಗಳು :

 • ಮುದ್ದಹನುಮೇಗೌಡರಿಗೆ ಟಿಕೆಟ್ ವಂಚಿಸಿದ್ದು • ಕೆ.ಎನ್.ರಾಜಣ್ಣನವರ ವಿರೋಧ • ಮುದ್ದಹನುಮೇಗೌಡರನ್ನ ಪ್ರಚಾರದಿಂದ ದೂರವಿಟ್ಟದ್ದು • ಡಾ||ಜಿ.ಪರಮೇಶ್ವರ್ ರವರ ಮಾತುಗಳನ್ನ ನಂಬಿದ್ದು • ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ಸಹಕಾರ ನೀಡದಿರುವುದು • ಯಾದವ ಸಮುದಾಯದ ಪ್ರಬಲ ವಿರೋಧ • ಕುರುಬ ಸಮುದಾಯ ಮತ್ತು ಅಹಿಂದ ಸಮುದಾಯಗಳ ಕಡೆಗಣನೆ • ಸ್ಥಳೀಯ ಜೆಡಿಎಸ್ ಮುಖಂಡರ ಅತಿಯಾದ ಭರವಸೆ • ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸಹಮತವಿಲ್ಲದಿರುವುದು • ಹೇಮಾವತಿ ನೀರಿನ ಪ್ರಬಲ ವಿರೋಧ • ಸ್ಥಳೀಯ ಮುಖಂಡರು ಮತ್ತು ನಾಯಕರ ಕಡೆಗಣನೆ • ಕ್ಷೇತ್ರದ ಮತದಾರರೊಂದಿಗೆ ಅತಿಯಾದ ಸಂಬಂಧವಿಲ್ಲದ ವ್ಯಕ್ತಿಗಳು ಜಿಲ್ಲೆಯಲ್ಲಿ ಹಣಕಾಸಿನ ನೇತೃತ್ವ ವಹಿಸಿದ್ದು • ಸ್ಥಳೀಯ ಮಾಧ್ಯಮಗಳ ಬಗ್ಗೆ ತಾತ್ಸಾರ ಮನೋಭಾವನೆ ಜಿಲ್ಲೆಯ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರುಗಳ ಅತಿಯಾದ ಭರವಸೆ Share

ಮುಂದೆ ಓದಿ...

ದೊಡ್ಡಗೌಡರ ರಾಜಕೀಯ ಅಧ್ಯಾಯಕ್ಕೆ ಚರಮಗೀತೆ

ತುಮಕೂರು:       ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲು, ಬಿಜೆಪಿಯ ಗೆಲುವು ರಾಜಕೀಯ ವಿಶ್ಲೇಶಕರ ಲೆಕ್ಕಚಾರಗಳು ಬುಡಮೇಲು. ಈ ರಾಜ್ಯ ಕಂಡಂತಹ ಏಕೈಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದೆಹಲಿ ಗದ್ದುಗೆ ಏರಿ ಅಂದಿನ ಭಾರತದ ಪ್ರಪ್ರಥಮ ಪ್ರಜೆ ಎನಿಸಿಕೊಂಡಂತಹ ವ್ಯಕ್ತಿ. ತನ್ನ ರಾಜಕೀಯ ಇತಿಹಾಸದುದ್ದಕ್ಕೂ ಗೆಲುವುಗಳಲ್ಲೇ ಹಿಡಿತ ಸಾಧಿಸುತ್ತಾ ರಾಜ್ಯ ರಾಜಕಾರಣದಲ್ಲಿ ಗೌಡರ ಪಾರುಪತ್ಯವನ್ನು ಮೆರೆದಂತಹ ಅಪ್ರತಿಮ ರಾಜಕಾರಣಿ ತನ್ನ ಮೌನದಲ್ಲೂ, ತನ್ನ ವಿಶ್ರಾಂತಿಯಲ್ಲೂ ರಾಜಕೀಯ ಲೆಕ್ಕಾಚಾರಗಳಲ್ಲೇ ರಾಜ್ಯದ ರಾಜಕಾರಣವನ್ನು ಅಳೆದು ತೂಗುತ್ತಿದ್ದಂತಹ ದೊಡ್ಡ ಗೌಡರು ಜೆಡಿಎಸ್‍ನ ಪಾರುಪತ್ಯವಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನುಂಡದ್ದು ವಿಪರ್ಯಾಸ. ತನ್ನ ರಾಜಕೀಯ ಇತಿಹಾಸದಲ್ಲಿ ಅತಿರಥ ಮಹಾರಥರನ್ನ ಸೋಲಿನ ಸುಳಿಯಲ್ಲಿ ಸಿಲುಕಿಸಿ ವಿಲ-ವಿಲಗೊಳಿಸಿದ ದೇವೇಗೌಡರ ಲೆಕ್ಕಾಚಾರಗಳು ತುಮಕೂರಿನಲ್ಲಿ ತಪ್ಪಿದ್ದಕ್ಕೆ ಜೆಡಿಎಸ್‍ಗಿರಿಗೆ ಸ್ವತಃ ನೋವಿದೆಯಾದರೂ, ಕಾಂಗ್ರೆಸಿಗರಿಗೆ ನಲಿವಿದೆ. ಬಿಜೆಪಿಗರಿಗೆ ಸಂತೋಷವಿದೆ.       ತುಮಕೂರು ಜಿಲ್ಲೆಯ…

ಮುಂದೆ ಓದಿ...