ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಡೀಸಿ ಸೂಚನೆ

 ತುಮಕೂರು:       ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ರಸ್ತೆಗಳಿಗೆ ರಸ್ತೆ ಉಬ್ಬುಗಳಿಗೆ ಬಣ್ಣ ಹಚ್ಚುವ, ಸೂಚನೆ ಫಲಕಗಳನ್ನು ಹಾಕುವ, ಟ್ರಾಫಿಕ್ ಚಿಹ್ನೆಗಳ ಫಲಕಗಳನ್ನು ನಿಲ್ಲಿಸುವ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಲ್ಲದೆ, ಡಿವೈಡರ್‍ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅವುಗಳಿಗೆ ಬಣ್ಣ ಹಚ್ಚಬೇಕು ಹಾಗೂ ವಾಹನಗಳು ಮುಖ್ಯ ರಸ್ತೆಯಿಂದ ಸೇವಾ ರಸ್ತೆಗೆ ಬರುವ ಮಾರ್ಗದಲ್ಲಿ ಕಡ್ಡಾಯವಾಗಿ ಚಿಹ್ನೆಗಳನ್ನು ಪ್ರದರ್ಶಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಕಾರ್ಮಿಕರು,…

ಮುಂದೆ ಓದಿ...

ನನ್ನ ಗೆಲುವಿಗೆ ದೇವೇಗೌಡರೇ ಕಾರಣ -ಜಿ.ಎಸ್.ಬಸವರಾಜು

ತುಮಕೂರು:        ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಮುದ್ದಹನುಮೇಗೌಡರು ಇದ್ದಿದ್ದರೆ ಗೆಲುವು ಕಷ್ಟ ಆಗುತ್ತಿತ್ತು. ದೇವೇಗೌಡರು ಬಂದದ್ದರಿಂದ ಗೆಲುವು ಇನ್ನೂ ಸುಲಭವಾಯ್ತು. ಜಯಕ್ಕೆ ದಾರಿ ಸಲೀಸಾಯಿತು. ಜನ ದೇವೇಗೌಡರನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನೂತನ ಸಂಸದ  ಜಿ.ಎಸ್.ಬಸವರಾಜು ಹೇಳಿದ್ದಾರೆ.        ಇಂದು ತುಮಕೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಬಂದಿದ್ದು ವರವಾಯ್ತು, ನನ್ನ ಗೆಲುವು ಇನ್ನೂ ಸುಲಭವಾಯ್ತು. ಜನ ದೇವೇಗೌಡರನ್ನ ರಿಜೆಕ್ಟ್ ಮಾಡಿದ್ರು ಅಂತ ಹೇಳಿದ್ರು. ಇನ್ನು ಇದೇ ವೇಳೆ ಕೆ.ಎನ್.ರಾಜಣ್ಣ ಬೆಂಬಲ‌ ನೀಡಿದ ವಿಚಾರವಾಗಿ ಮಾತನಾಡಿದ ಬಸವರಾಜು, ಅವರು ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರ ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಅನ್ನೋಕಾಗಲ್ಲ. ಎಲ್ಲಾ ಪಕ್ಷದವರು ಮತ ಹಾಕಿದಕ್ಕೆ ನಾನು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.       ಗೌಡರ ಕುಟುಂಬದಲ್ಲಿ ನಡೆಯುತ್ತಿರುವ ರಾಜೀನಾಮೆ ವಿಷಯವಾಗಿ ಪ್ರಸ್ತಾಪಿಸಿದ ಅವರು, ಗೌಡರ ಕುಟುಂಬ ಯಾವತ್ತಾದರೂ ಸತ್ಯ…

ಮುಂದೆ ಓದಿ...