ತುರುವೇಕೆರೆ:       ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವ ಬಿಜೆಪಿಯ ಕ್ರಮವನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಖಂಡಿಸಿದ್ದಾರೆ.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗ್ರಾಮವಾಸ್ತವ್ಯದಿಂದ ಜನರ ಸಮಸ್ಯೆಗಳು ದೂರಾಗುತ್ತವೆ ಅಲ್ಲದೇ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಮವಾಸ್ತವ್ಯ ಮಾಡುತ್ತಿರುವ ಕುಮಾರಸ್ವಾಮಿಯವರ ಕಾರ್ಯಕ್ರಮಕ್ಕೆ ಬಿಜೆಪಿಯವರು ವಿನಾಕಾರಣ ತೊಂದರೆಕೊಡುತ್ತಿದ್ದಾರೆ. ಈ ಗ್ರಾಮವಾಸ್ತವ್ಯ ಮುಂದುವರೆದಲ್ಲಿ ಕುಮಾರಸ್ವಾಮಿಯವರ ವರ್ಚಸ್ಸು ಹೆಚ್ಚುತ್ತದೆ ಅಲ್ಲದೇ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಉಳಿದುಬಿಡುತ್ತಾರೆ ಎಂಬ ಭಯದಿಂದ ಬಿಜೆಪಿಯವರು ಸಣ್ಣತನಕ್ಕೆ ಮುಂದಾಗಿದ್ದಾರೆ. ಇದೇ ಪ್ರವೃತ್ತಿಯನ್ನು ಬಿಜೆಪಿಯವರು ಮುಂದುವರೆಸಿದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯವರಿಗೂ ತಕ್ಕ ಪಾಠ ಕಲಿಸಬೇಕಾದೀತು ಎಂದು ಎಚ್ಚರಿಸಿದರು.       ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಿರುವ ಏಕೈಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯಾಗಿದ್ದಾರೆ. ಇಂತಹ ಉತ್ತಮ ಕಾರ್ಯ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಸಹಕಾರ ನೀಡುವುದನ್ನು ಬಿಟ್ಟು ಬಿಜೆಪಿಯವರು…

ಮುಂದೆ ಓದಿ...

ಸಾರ್ವಜನಿಕರಿಗೆ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು-ಶಾಸಕ

ಮಧುಗಿರಿ :       ಸಾರ್ವಜನಿಕರು ನೀಡುವ ಒಂದು ಅರ್ಜಿಯು ಕೇವಲ ಕಾಗದವಲ್ಲ. ಅದರಲ್ಲಿ ನೊಂದವರ ಬದುಕು ಅಡಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಕಿವಿಮಾತು ಹೇಳಿದರು.       ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಹೋಬಳಿ ಮಟ್ಟದ ಪ್ರಥಮ ಜನಸ್ಪಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರಿಗಳು ಕೇವಲ ಅರ್ಜಿಯನ್ನು ಪಡೆದರಷ್ಟೆ ಸಾಲದು. ಅವರ ಸಮಸ್ಯೆಗೆ ಮುಂದಿನ ಜನಸ್ಪಂದನೆ ಕಾರ್ಯಕ್ರಮದ ಹೊತ್ತಿಗೆ ಸ್ಪಷ್ಟ ಪರಿಹಾರ ಕೊಡಿಸಬೇಕು. ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮದ ಅರ್ಜಿಗೆ ಪ್ರತ್ಯೇಕ ಕಡತವನ್ನು ಇಡಬೇಕು. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಯ ಸಮಸ್ಯೆಗಳು ಇದ್ದು, ಖಾತೆ ಬದಲಾವಣೆ, ಪವತಿ ಖಾತೆ ಹಾಗೂ ಪಹಣಿ ತಿದ್ದುಪಡಿಯನ್ನು ಮಾಡಬೇಕಿದ್ದು, ಹಲವಾರು ವರ್ಷಗಳಿಂದ ಬಾಕಿಯಿದೆ. ಹಾಗೂ ಸಾಮಾನ್ಯ ವರ್ಗದ ಮನೆಗಳಿಗೆ ಬೇಡಿಕೆಯಿದ್ದು,…

ಮುಂದೆ ಓದಿ...

ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ!

ತುಮಕೂರು:       ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸಲು ಸಂಚರಿಸಲಿರುವ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ತುಮಕೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿಂದು ಚಾಲನೆ ನೀಡಲಾಯಿತು.       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಅವರು ತಾಲ್ಲೂಕು ಮಟ್ಟದ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಹಸಿರು ನಿಶಾನೆ ತೋರಿಸವ ಮೂಲಕ ಚಾಲನೆ ನೀಡಿದರು. ಈ ಜಾಗೃತಿ ರಥವು ತುಮಕೂರು ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕುರಿತ ಮಾಹಿತಿ ನೀಡಲಿದೆ.       ನಂತರ ಮಾತನಾಡಿದ ಶುಭಾ ಕಲ್ಯಾಣ ಅವರು ಈ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ವಿವರ, ಗಂಡು ಮತ್ತು ಹೆಣ್ಣಿಗೆ 249/-ರೂ.ಗಳ ಸಮಾನ ಕೂಲಿ…

ಮುಂದೆ ಓದಿ...

ಉಸಿರಾಡಲು ಹಸಿರು ಬೇಕೇ ಬೇಕು-ಹೈಕೋರ್ಟ್ ನ್ಯಾ|| ನಾರಾಯಣಸ್ವಾಮಿ

 ತುಮಕೂರು :        ನಾವೆಲ್ಲಾ ಉಸಿರಾಡಲು ಹಸಿರು ಗಿಡ-ಮರಗಳು ಬೇಕೇ ಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.       ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬರಮುಕ್ತ ಕರ್ನಾಟಕ ಆಂದೋಲನಾ ಸಮಿತಿ, ಮರಡಿ ರಂಗನಾಥಸ್ವಾಮಿ ಧಾರ್ಮಿಕ ಮತ್ತು ದತ್ತಿ ಸಂಸ್ಥೆ, ಶಿರಾ ಲೋಹಿಯಾ ಸಮತಾ ವಿದ್ಯಾಲಯ, ಜಿಲ್ಲಾ ಹಾಗೂ ಶಿರಾ ತಾಲೂಕು ವಕೀಲರ ಸಂಘಗಳ ಸಹಯೋಗದಲ್ಲಿಂದು ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಮರಡೀಗುಡ್ಡ ಗ್ರಾಮದಲ್ಲಿ “ಸಹಸ್ರ ಸಸಿ ನೆಡುವ ಹಾಗೂ ಏಳು ಸಹಸ್ರ ಬೀಜದುಂಡೆ ನೆಡುವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಪ್ರತಿಯೊಂದು ಜೀವಿಯ ಅಳಿವು-ಉಳಿವು ಹಸಿರಿನ ಮೇಲೆ ನಿಂತಿದೆ.…

ಮುಂದೆ ಓದಿ...

ಕುಣಿಗಲ್‌ : ಇನೋವಾ ಪಲ್ಟಿ – 6 ಮಂದಿ ದುರ್ಮರಣ!!

ತುಮಕೂರು :       ಕುಣಿಗಲ್ ತಾಲ್ಲೂಕಿನ ಸಿದ್ದಾಪುರ  ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇನೋವಾ ಕಾರೊಂದು ರಸ್ತೆ ವಿಭಜಕ ದಾಟಿ ಪಲ್ಟಿಯಾದ ಪರಿಣಾಮ  6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.       ಯಡಿಯೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು, ವಿಭಜಕ ದಾಟಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 8 ಮಂದಿಯಲ್ಲಿ 6 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.        ಕಾರಿನಲ್ಲಿದ್ದ ಮಹಿಳೆ, ಮಗು ಬಿಟ್ಟು ಉಳಿದವರೆಲ್ಲ ಮೃತಪಟ್ಟಿದ್ದಾರೆ. ಅಮೃತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಅತಿವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.   Share

ಮುಂದೆ ಓದಿ...

ಕಲ್ಲಿಗೆ ಬೈಕ್ ಡಿಕ್ಕಿ : ಓರ್ವ ಸಾವು!!

ಮಧುಗಿರಿ :       ದ್ವಿಚಕ್ರ ವಾಹನವೊಂದು ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನಿಗೆ ಗಂಬೀರ ಗಾಯಗಳಾದ ಘಟನೆ ಪಟ್ಟಣದ ಕಸಬಾ ವ್ಯಾಪ್ತಿಯ ಡಿ.ವಿ. ಹಳ್ಳಿ ಬಳಿ ನಡೆದಿದೆ.       ಸಿರಾ ಪಟ್ಟಣದ ವಾಸಿ ರತ್ನಮ್ಮ(55) ಸ್ಥಳದಲ್ಲೇ ಮೃತಪಟ್ಟವರು. ಮಗ ಗಿರೀಶ್ ಗೆ ಗಂಬೀರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗ ಇಬ್ಬರು ಸಿರಾ ದಿಂದ ಮಧುಗಿರಿಗೆ ಬರುವಾಗ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಆಯತಪ್ಪಿ ರಸ್ತೆ ಬದಿಗೆ ಜಾರಿ ಬಿದ್ದಾಗ ರಸ್ತೆಯ ಬದಿಯ ಕಲ್ಲಿಗೆ ಹೊಡೆದಿದ್ದರಿಂದ ಘಟನೆ ನಡೆದಿದೆ.ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  Share

ಮುಂದೆ ಓದಿ...

ಕಲುಷಿತ ನೀರು ಸೇವನೆ : 8 ಮಕ್ಕಳು ಅಸ್ವಸ್ಥ!

ಮಧುಗಿರಿ :       ಕಲುಷಿತ ನೀರು ಸೇವನೆಯಿಂದಾಗಿ ಅಂಗನವಾಡಿಯ ಶಿಕ್ಷಕಿ ಹಾಗೂ 8 ಜನ ಮಕ್ಕಳು ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.       ತಾಲ್ಲೂಕಿನ ಪುರವರ ಹೋಬಳಿಯ ಸಂಕಾಪುರ ಗ್ರಾಮದಲ್ಲಿರುವ ಅಂಗನವಾಡಿಯ ಪಕ್ಕದಲ್ಲಿರುವ ಹಾಗೂ ಪುರವರ ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಅದೆ ನೀರನ್ನು ಅಡುಗೆ ಬಳಸಿ ತಯಾರಿಸಿದ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಂಗನವಾಡಿ ಮಕ್ಕಳಾದ ನರಸಿಂಹಮೂರ್ತಿ. ರಕ್ಷಿತ್. ದಿವ್ಯ. ಚೇತನ್. ಪವನ್. ಚೈತ್ರ, ನರಸಿಂಹ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.       ಅಂಗನವಾಡಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಡುಗೆ ಸಹಾಯಕರು ನಿವೃತ್ತಿ ಯಾಗಿದ್ದಾರೆ. ಆದರೆ ಇದುವರೆವಿಗೂ ಆ ಹುದ್ದೆಯನ್ನು ಭರ್ತಿ ಸಿಡಿಪಿಓ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಪಂಚಾಯತಿ…

ಮುಂದೆ ಓದಿ...

‘ಜಿಲ್ಲಾ ಪಂಚಾಯತಿ ಅನುದಾನ ರದ್ದಾದರೆ ಸಹಿಸುವುದಿಲ್ಲ’- ಉಪಾಧ್ಯಕ್ಷೆ ಖಡಕ್ ಸೂಚನೆ

ತುಮಕೂರು:       ಸರ್ಕಾರದಿಂದ ಮಂಜೂರಾದ ಕಾಮಗಾರಿಗಳನ್ನು ನಿರೀಕ್ಷಿತ ಅವಧಿಗೆ ಪೂರ್ಣಗೊಳಿಸದೆ ಅನುದಾನ ರದ್ದಾಗುವಂತೆ ಕರ್ತವ್ಯ ನಿರ್ಲಕ್ಷತೆ ತೋರಿದರೆ ನಾನು ಸಹಿಸುವುದಿಲ್ಲವೆಂದು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇಲಾಖೆಗಳು ಪ್ರಸಕ್ತ ಸಾಲಿಗೆ ಮಂಜೂರಾದ ರಸ್ತೆ, ಕಟ್ಟಡ, ಮತ್ತಿತರ ಕಾಮಗಾರಿಗಳನ್ನು ಬರುವ 2020ರ ಫೆಬ್ರುವರಿಯೊಳಗೆ ಪೂರ್ಣಗೊಳಿಸಬೇಕು. ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಗಧಿತ ಅವಧಿಯೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು. ಇಲ್ಲದಿದ್ದರೆ ಅನುದಾನ ರದ್ದಾಗುತ್ತದೆ. ನಿಗಧಿತ ಸಮಯದಲ್ಲಿ ಬಿಲ್ ಸಲ್ಲಿಸದ ಕಾರಣ ಕೆಲವು ಲೆಕ್ಕಶೀರ್ಷಿಕೆಗಳಡಿ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಸರಕಾರಕ್ಕೆ ವಾಪಸ್ಸಾಗಿದೆ. ಇದರಿಂದ ಮುಂದಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ…

ಮುಂದೆ ಓದಿ...

ಕಾನೂನು ಸಾಕ್ಷರತಾ ರಥ ಯಾತ್ರೆಗೆ ಚಾಲನೆ

ತುಮಕೂರು:       ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಕಾನೂನು ಅರಿವು-ನೆರವು ಸಾಕ್ಷರತಾ ರಥ ಯಾತ್ರೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಂತುಮಕೂರು:       ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಕಾನೂನು ಅರಿವು-ನೆರವು ಸಾಕ್ಷರತಾ ರಥ ಯಾತ್ರೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಂದ್ರ ಬಾದಾಮಿಕರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.       ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದ…

ಮುಂದೆ ಓದಿ...

ಕರಡಿಗಳ ಹಾವಳಿಗೆ ಬೆಚ್ಚಿ ಬಿದ್ದ ಗ್ರಾಮಸ್ಥರು

 ಮಿಡಿಗೇಶಿ :      ಹೋಬಳಿಯ ಚಿನ್ನೇನಹಳ್ಳಿ ಸಮೀಪವಿರುವ ವೀರಣ್ಣನ ಬೆಟ್ಟದಲ್ಲಿರುವ ಕರಡಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.       ಹೊಸಕೆರೆ ಗ್ರಾಮದ ಹಳೆಯೂರಿನ ಮಧ್ಯದಲ್ಲಿ ಜೂನ್ 22 ರಂದು ಮಧ್ಯರಾತ್ರಿ 01.30 ರ ಸಮಯದಲ್ಲಿ ರಾಜಾರೋಷವಾಗಿ ಕರಡಿ ಓಡಾಡಿದೆ. ಕರಡಿ ಓಡಾಡುವುದನ್ನು ಕಂಡ ಜನತೆ ಭಯದಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮಿಡಿಗೇಶಿ ಹೋಬಳಿಯ ಮಲ್ಲನಾಯಕನ ಹಳ್ಳಿಯ ಬೆಟ್ಟದಲ್ಲಿ, ಬೇಡತ್ತೂರಿನ ಬೆಟ್ಟದಲ್ಲಿ ಹೀಗೆ ಒಟ್ಟಾರೆಯಾಗಿ ಮಿಡಿಗೇಶಿ ಹೋಬಳಿಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ನಮ್ಮನ್ನು ರಕ್ಷಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. Share

ಮುಂದೆ ಓದಿ...