ಕಾರು ಡಿಕ್ಕಿ : ಚಿರತೆಗೆ ಗಂಭೀರ ಗಾಯ!

ಕೊರಟಗೆರೆ:       ಕಾರು ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಆಹಾರಕ್ಕಾಗಿ ಗ್ರಾಮಕ್ಕೆ ಬಂದು ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ಡಿಕ್ಕಿ ಹೊಡೆದು, ಚಿರತೆಯ ತಲೆ, ಹೊಟ್ಟೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿ ಚಿರತೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಸೋಮವಾರ ನಡೆದಿದೆ.       ಊರ್ಡಿಗೆರೆ ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶದಿಂದ ಎಲೆರಾಂಪುರ ಗ್ರಾಪಂ ಸಮೀಪದ ಹೊಸಪಾಳ್ಯದ ಕಡೆಗೆ ಆಹಾರ ಅರಸಿ ಬಂದಿರುವ ಚಿರತೆ ಭಾನುವಾರ ರಾತ್ರಿ ರಸ್ತೆ ದಾಟುವ ವೇಳೆಯಲ್ಲಿ ಅತಿ ವೇಗವಾಗಿ ಬಂದಿರುವ ಕಾರಿನಿಂದ ಅಪಘಾತವಾಗಿದೆ. ಅಪಘಾತ ನಡೆದ ಕೂಡಲೆ ತಿರುಗಿಯೂ ಸಹ ನೋಡದೆ ಕಾರು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾರೆ. ಹೊಸಪಾಳ್ಯಕ್ಕೆ ತೆರಳುವ ವೇಳೆ ಯುವಕರಿಗೆ ಸೋಮವಾರ ಮುಂಜಾನೆ ಚಿರತೆಯ ದರ್ಶನವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿಯೇ ಚಿರತೆಗೆ ಅಪಘಾತವಾಗಿ ರಸ್ತೆ…

ಮುಂದೆ ಓದಿ...

ಸರ್ಕಾರ ಸುಭದ್ರವಾಗಿದೆ – ಡಿಸಿಎಂ ಸ್ಪಷ್ಟನೆ

ತುಮಕೂರು:       ಶಾಸಕದ್ವಯರಾದ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸತ್ಯವೇ ಆಗಿದ್ದರೆ, ಸದ್ಯದಲ್ಲಿರುವ ಸಂಖ್ಯಾಬಲದಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸರ್ಕಾರ ಸುಭದ್ರವಾಗಿದ್ದು, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದರು.       ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೆಳಿಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು ಆನಂದ್‍ಸಿಂಗ್ ಹಾಗೂ ಜಾರಕಿಹೊಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸುದ್ದಿ ಇದೆ. ಆದರೆ ಇವರಿಬ್ಬರ ರಾಜೀನಾಮೆಯನ್ನು ಸ್ಪೀಕರ್ ಅವರು ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಅವರು ರಾಜೀನಾಮೆ ನೀಡಿರುವುದು ಸತ್ಯವಾಗಿದ್ದರೆ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಂಬ ಬಗ್ಗೆ ತಮಗೆ ಮಾಹಿತಿಯಿಲ್ಲ. ಇದೇ ಜುಲೈ 12 ರಿಂದ ಅಧಿವೇಶನ ನಡೆಸಲು ಈಗಾಗಲೇ ತೀರ್ಮಾನಿಸಿ…

ಮುಂದೆ ಓದಿ...

ತುಮಕೂರು : 2.5 ಕೆ.ಜಿ.ಗಾಂಜಾ ವಶ!!

 ತುಮಕೂರು :       ದ್ವಿಚಕ್ರ ವಾಹನದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಗಾಂಜಾ ಮಾರಾಟ ಮಾಡುತ್ತಿರುವಾಗ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.        ನಗರದ ಮಾರುತಿ ಟಾಕೀಸ್ ಮತ್ತು ಟಿ.ಹೆಚ್.ಎಸ್. ಆಸ್ಪತ್ರೆಯ ಪಕ್ಕದಲ್ಲಿರುವ ಕಾಂಪ್ಲೆಕ್ಸ್ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗಾಂಜಾ ಮಾರುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಸಿಪಿಐ ಚಂದ್ರಶೇಖರ್ ರವರು ದಾಳಿ ನಡೆಸಿ ಇಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಜಿತೇಂದ್ರ ರ ಬಳಿಯಿದ್ದ 2.5ಕೆ.ಜಿ.ಗಾಂಜಾ ಸಮೇತ ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಗಿದೆ.        ಆರೋಪಿಗಳ ಪತ್ತೆಗೆ ಶ್ರಮಿಸಿದ ಸಿಪಿಐ ಕೆ.ಆರ್. ಚಂದ್ರಶೇಖರ್, ಪಿಎಸ್‍ಐ ವಿಜಯಲಕ್ಷ್ಮಿ ಹಾಗೂ ಸಿಬ್ಬಂಧಿ ವರ್ಗವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

ಮುಂದೆ ಓದಿ...