ಬಿರುಗಾಳಿಗೆ ವಿದ್ಯುತ್ ಕಂಬ ಉರುಳಿ ಹಸು ಸಾವು!!

 ಮಧುಗಿರಿ:       ತಾಲೂಕಿನಲ್ಲಿ ಹಲವೆಡೆ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಧರೆಗೆ ಊರಳಿದ್ದು ವಿಧ್ಯುತ್ ಕಂಬಗಳು ಸಹ ಮುರಿದು ಬಿದ್ದ ಘಟನೆ ವರದಿಯಾಗಿದೆ.       ಕೊಡಿಗೇನಹಳ್ಳಿ ಹೊಬಳಿಯಲ್ಲಿ ಮಂಗಳವಾರ ಸುರಿದ ಸಾಧಾರಣ ಮಳೆ ಹಾಗೂ ಬಿರುಗಾಳಿಗೆ ಮುತ್ಯಾಲಮ್ಮನಹಳ್ಳಿ ಗ್ರಾಮದಲ್ಲಿ ತೆಂಗಿನ ಮರವೊಂದು ವಿಧ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ಮುರಿದು ಬಿದ್ದಿವೆ.        ವಿಧ್ಯುತ್ ಕಂಬದ ಕೆಳೆಗಿದ್ದ ಹಸವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ರಾಮಪ್ಪ ಎಂಬುವವರಿಗೆ ಸೇರಿದ ಹಸು ಎನ್ನಲಾಗಿದ್ದು ಸುಮಾರು 45 ಸಾವಿರ ಮೂಕ ಜೀವಿ ಬಲಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅಂದಾಜಿಸಿದ್ದಾರೆ.        ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಇಂಜಿನಿಯರ್, ಪಶು ವೈಧ್ಯಾಧಿಕಾರಿ ಡಾ ಜಗದೀಶ್ ಹಾಗೂ ಡಾ ಸೀಮಾ ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮುಂದೆ ಓದಿ...

ತುಮುಲ್ ವತಿಯಿಂದ 4 ಸಾವಿರ ಕೆ.ಜಿ. ಮೇವು ಬೀಜ ವಿತರಣೆ!

ಮಧುಗಿರಿ :       ಸತತ ಬರಗಾಲದಿಂದಾಗಿ ಈ ಬಾರಿ ರೈತರಿಗೆ ಬಹಳಷ್ಟು ತೊಂದರೆಯುಂಟಾಗಿದ್ದು, ಶೇ. 75 ರಷ್ಟು ಸಬ್ಸಿಡಿ ದರದಲ್ಲಿ 4 ಸಾವಿರ ಕೆಜಿ ಮೇವಿನ ಬೀಜ ವಿತರಿಸಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.       ಪಟ್ಟಣದ ಹಿಂದೂಪುರ ರಸ್ತೆಯಲ್ಲಿರುವ ತುಮುಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯ ಬೇಸಿಗೆ ತೀವ್ರತೆಯಿಂದಾಗಿ ಮೇವಿನ ಅಭಾವ ಕಂಡು ಬಂದು ಹಾಲಿನ ಗುಣಮಟ್ಟದಲ್ಲಿ ಕುಂಟಿತಗೊಂಡಿದ್ದು, ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ರೈತರು ಹೆಚ್ಚಿನ ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ರೈತರಿಗೆ ಮೇವಿನ ಬೀಜವನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.       ನನ್ನ ಅವಧಿಯಲ್ಲಿ ಒಕ್ಕೂಟವನ್ನು ಯಾರೂ ಮಾಡದಷ್ಟು ಅಭಿವೃದ್ದಿ ಮಾಡಲಾಗಿದ್ದು,…

ಮುಂದೆ ಓದಿ...

ಮಹಾ ನಗರ ಪಾಲಿಕೆಯ ಆಯುಕ್ತರ ಬಳಿ ಗುತ್ತಿಗೆದಾರರ ಅಳಲು

ತುಮಕೂರು :       ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರನಿಗೆ ಸಂಬಂಧಪಟ್ಟ ಇಂಜಿನಿಯರ್ಗಳು ನಿಯಮದ ಪ್ರಕಾರ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕಾದ ಸ್ಥಳವನ್ನು ಅಧಿಕೃತವಾಗಿ ವಹಿಸುವುದಿಲ್ಲ. ಅದಕ್ಕೆ ಬದಲಾಗಿ ಮೊದಲು ಹೋಗಿ ಆ ವಾರ್ಡಿನ ಕಾಪೆರ್Çೀರೇಟರ್ರನ್ನು ಭೇಟಿಯಾಗಿ ಬನ್ನಿ ಎಂದು ಸಲಹೆ ಕೊಡುತ್ತಾರೆ.       ಗುತ್ತಿಗೆದಾರನು ಅವರನ್ನು ಭೇಟಿ ಆಗದಿದ್ದರೆ ಆ ಕಾಮಗಾರಿಯ ಚಾಲನೆಯೇ ಆಗುವುದಿಲ್ಲ. ವಿನಾಕಾರಣ ಗುತ್ತಿಗೆದಾರ ತೊಂದರೆಗೆ ಸಿಲುಕುತ್ತಾನೆ’’ ಎಂದು ತುಮಕೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್ ಅವರು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಎದುರು ಗುತ್ತಿಗೆದಾರರ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.       ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ “ಪಾಲಿಕೆಯ ಗುತ್ತಿಗೆದಾರರ ಸಂಘ’’ದವರೊಡನೆ ಪಾಲಿಕೆ ಆಯುಕ್ತರು ನಡೆಸಿದ ಚರ್ಚಾ ಸಭೆಯಲ್ಲಿ ಅವರು ಗುತ್ತಿಗೆದಾರರು ಎದುರಿಸುತ್ತಿರುವ ಬಹುಮುಖ ಸಮಸ್ಯೆಗಳನ್ನು ವಿವರಿಸುತ್ತ ಈ ಸಂಗತಿಯ ಮೇಲೂ ಬೆಳಕು ಚೆಲ್ಲಿದ್ದಾರೆ.…

ಮುಂದೆ ಓದಿ...

ಇಲಾಖಾ ಅಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಡಿಸಿಎಂ ಸೂಚನೆ

ಕೊರಟಗೆರೆ :       ಇಲಾಖಾ ಅಧಿಕಾರಿಗಳು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲೆ ವಾಸವಿದ್ದು ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರಮಾಣಿಕವಾಗಿ ಅನುಷ್ಢಾನ ಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.       ಅವರು ತಮ್ಮ ಸ್ವಕ್ಷೇತ್ರವಾದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ತ್ರೈಮಾಸಿಕ ಕೆ.ಡಿ.ಪಿ ಸಬೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖಾ ಅಧಿಕಾರಿಗಳು ಪ್ರತಿನಿತ್ಯ ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಬರುತ್ತಿದ್ದು ಕಛೇರಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ಲಭ್ಯವಿಲ್ಲದೆ ಕೆಲಸ ಕಾರ್ಯಗಳು ಕುಂಟಿತವಾಗಿದ್ದು ಉಪಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ಇಲಾಖಾ ಅಧಿಕಾರಿಗಳನ್ನು ಹಿಡಿತದಲ್ಲಿ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದ್ದು ಇನ್ನು ಮುಂದೆ ಜನರಿಗೆ ಸ್ಪಂದಿಸಿ ಸರ್ಕಾರಿ ಕಾರ್ಯಕ್ರಮಗಳು ಸಮಪರ್ಕವಾಗಿ ಅನುಷ್ಠಾನಮಾಡುವುದರೊಂದಿಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.       ಲಕ್ಷಾಂತರ ರೂಗಳ ವೆಚ್ಚದಲ್ಲಿ ತಾಲೂಕು…

ಮುಂದೆ ಓದಿ...