ಜಿಲ್ಲಾಧಿಕಾರಿಗಳ ಖಾತೆಯಲ್ಲಿ 12 ಕೋಟಿ : ಸಚಿವ ದೇಶಪಾಂಡೆ

ಮಧುಗಿರಿ :       ರಾಜ್ಯದಲ್ಲಿ ಬರಗಾಲವಿದ್ದು, ಸಮಸ್ಯೆ ನಿಭಾಯಿಸಲು ಹಣದ ಕೊರತೆಯಿಲ್ಲ. 700 ಕೋಟಿ ರಾಜ್ಯದ ಬರಗಾಲಕ್ಕೆ ನೀಡಿದ್ದು, ನಿಮ್ಮ ಜನ-ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಂಚಾಯತ್ ರಾಜ್ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.       ಮಧುಗಿರಿ ತಾಲೂಕಿನ ಕಸಬಾ ಚಿನಕವಜ್ರ ಗ್ರಾಮದ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಈ ಬಾರಿಯೂ ಮಳೆ ಕೈಕೊಟ್ಟಿದೆ. ಲೋಕಸಭೆ ಚುನಾವಣೆಯ ಪ್ರಯುಕ್ತ ಸ್ಪಂದಿಸಲು ಆಗಲಿಲ್ಲ. ಆದರೆ ಪ್ರಸ್ತುತ ಯಾವುದೇ ಸಮಸ್ಯೆಯಿಲ್ಲದೆ ಬರವನ್ನು ನಿರ್ವಹಣೆ ಮಾಡಲಾಗುವುದು. ಎಲ್ಲಿವರೆಗೂ ಮೇವು ಬ್ಯಾಂಕಿನ ಅಗತ್ಯವಿರುತ್ತದೋ ಅಲ್ಲಿಯವರೆಗೂ ಮೇವು ಹಾಗೂ ನೀರಿಗೆ ಸಾಕಷ್ಟು ಅನುದಾನವನ್ನು ನೀಡಲಾಗುವುದು. ಕೇಂದ್ರ ಸರ್ಕಾರ 3 ತಿಂಗಳ ನಂತರ ನೀರು ನೀಡಲು ಹಣಕಾಸು ಕೊಡುವುದಿಲ್ಲ. ಆದರೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಿ…

ಮುಂದೆ ಓದಿ...