ಆರ್‍ಟಿಒ ವರ್ಗಾಯಿಸುವಂತೆ ಸಾರ್ವಜನಿಕರ ಆಕ್ರೋಶ!!

ತುಮಕೂರು:       ಕಚೇರಿ ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿರದೇ, ಯಾರಿಗೂ ತಿಳಿಸದೇ ಬೆಂಗಳೂರಿಗೆ ಹೋಗುವ ಆರ್‍ಟಿಒ ಅವರನ್ನು ವರ್ಗಾವಣೆ ಮಾಡುವ ಮೂಲಕ ಸಾರ್ವಜನಿಕರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎಂದು ತುಮಕೂರು ನಗರ ಆಟೋ ಡೀಲರ್ಸ್ ಏಜೆಂಟ್ಸ್ ಮತ್ತು ಫೈನಾನ್ಸಿಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಟಿ.ಆರ್.ಸುರೇಶ್ ಒತ್ತಾಯಿಸಿದರು.       ಆರ್‍ಟಿಒ ಕಚೇರಿಗೆ ಸಂಘದ ಮುಖಂಡರೊಂದಿಗೆ ತೆರಳಿದ ಟಿ.ಆರ್.ಸುರೇಶ್ ಅವರು ವಾಯು ಮಾಲಿನ್ಯ ತಪಾಸಣೆಯಿಂದ ಕೆಲ ತಾಲ್ಲೂಕುಗಳಿಗೆ ವಿನಾಯಿತಿ ನೀಡುವಂತೆ ಕಳೆದ ತಿಂಗಳು ಮನವಿ ಸಲ್ಲಿಸಿದರು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಣವಿಲ್ಲದೇ ಆರ್‍ಟಿಒ ಯಾವುದೇ ಕೆಲಸವನ್ನು ಮಾಡುತ್ತಿಲ್ಲ, ಜಿಲ್ಲಾ ಮಟ್ಟದ ಅಧಿಕಾರಿ ಜಿಲ್ಲಾಕೇಂದ್ರದಲ್ಲಿರದೇ, ಯಾವಾಗಲೂ ಬೆಂಗಳೂರಿನಲ್ಲಿರುತ್ತಾರೆ, ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ದೂರಿದರು.       ಆಟೋ ರಿಕ್ಷಗಳಿಗೆ ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗಿದ್ದು, ಗುಬ್ಬಿ,…

ಮುಂದೆ ಓದಿ...